ಚಂದ್ರವಳ್ಳಿ ನ್ಯೂಸ್, ತುಮಕೂರು:
ಬೆಸ್ಕಾಂ ವಾಣಿಜ್ಯ, ಕಾರ್ಯ ಮತ್ತು ಪಾಲನಾ ವಿಭಾಗ ವ್ಯಾಪ್ತಿಯಲ್ಲಿ ತ್ರೈಮಾಸಿಕ ಕಾರ್ಯ ನಿರ್ವಹಣಾ ಕಾಮಗಾರಿ ಕೈಗೊಂಡಿರುವುದರಿಂದ ಜನವರಿ ೧೮ ಮತ್ತು ೧೯ರಂದು ಬೆಳಿಗ್ಗೆ ೧೦ ರಿಂದ ಸಂಜೆ ೫ ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಜನವರಿ ೧೮ರಂದು ನಿಟ್ಟೂರು, ಗುಬ್ಬಿ, ಬಿದರೆ, ದೊಡ್ಡಗುಣಿ, ಕಡಬ, ಕಲ್ಲೂರು, ಕೆ.ಜಿ.ಟೆಂಪಲ್, ಉಂಗ್ರಾ, ಸೋಮಲಾಪುರ ಹಾಗೂ ಜನವರಿ ೧೯ರಂದು ಅಂತರಸನಹಳ್ಳಿ, ಟಿ.ಎಂ.ಟಿ.ಪಿ, ವಸಂತನರಸಾಪುರ, ತೋವಿನಕೆರೆ ಉಪಸ್ಥಾವರಗಳಿಂದ ಹೊರಹೊಮ್ಮುವ ಎಲ್ಲಾ ೧೧ ಕೆವಿ ಪೂರಕಗಳಿಗೆ ಒಳಪಡುವ ಗ್ರಾಮ/ಕೈಗಾರಿಕಾ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಸಹಕರಿಸಬೇಕೆಂದು ಕಾರ್ಯನಿರ್ವಾಹಕ ಇಂಜಿನಿಯರ್ ಮನವಿ ಮಾಡಿದ್ದಾರೆ.

