ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಹಿರಿಯೂರು ಉಪವಿಭಾಗದ ವ್ಯಾಪ್ತಿಯ ಭರಮಗಿರಿ, ಪಿ.ಡಿ.ಕೋಟೆ, ಹರಿಯಬ್ಬೆ, ಹಾಗೂ ಕಲಮರನಹಳ್ಳಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಇದೇ ಜೂನ್ 20ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸದರಿ 66/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ 1ನೇ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ನಿರ್ವಹಿಸುವ ಪ್ರಯುಕ್ತ ಜೂನ್ 20 ರಂದು ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಹರಿಯಬ್ಬೆ, ಶ್ರವಣಗೆರೆ, ಬೆನಕನಹಳ್ಳಿ, ಸಕ್ಕರ, ಪಿ.ಡಿ.ಕೋಟೆ, ಹಲಗಲುದ್ದಿ, ಮುದ್ದಿಹಳ್ಳಿ, ಮದ್ದಹಳ್ಳಿ ಗೊಲ್ಲರಹಟ್ಟಿ, ಶಾಂತಿನಗರ, ಖಂಡೇನಹಳ್ಳಿ, ಖಂಡೇನಹಳ್ಳಿ ಪಾಳ್ಯ, ಹೊಸಕೆರೆ, ಹೊಸಕೆರೆಪಾಳ್ಯ, ಬೇತೂರು, ಬೇತೂರು ಪಾಳ್ಯ, ಮಾರಮ್ಮನಹಳ್ಳಿ, ಕಣಜನಹಳ್ಳಿ, ಸೂಗೂರು, ಮುಂಸವವಹಳ್ಳಿ, ಕೃಷ್ಣಗಿರಿ,
ವಿ.ಕೆ.ಗುಡ್ಡ, ಚಿಲ್ಲಹಳ್ಳಿ, ಯಳಗೊಂಡನಹಳ್ಳಿ, ಅಬ್ಬಿನಹೊಳೆ, ಈಶ್ವಗೆರೆ, ಈಶ್ವಗೆರೆ ಗೊಲ್ಲರಹಟ್ಟಿ, ಹೂವಿನಹೊಳೆ, ದೇವರಕೊಟ್ಟ, ಬುರುಡುಕುಂಟೆ, ಯಳವಾಹಟ್ಟಿ, ಹೊಸಹಳ್ಳಿ, ಗುಳ್ಯಾ, ಗುಳ್ಯಾ ಗೊಲ್ಲರಹಟ್ಟಿ, ವಿವಿಪುರ, ಗೋಗುದ್ದು, ಗುಡಿಹಟ್ಟಿ, ಭೂತಯ್ಯಹಟ್ಟಿ, ಭರಂಗಿರಿ, ಕುರುಬರಹಟ್ಟಿ, ಗೌನಹಳ್ಳಿ,
ತಳವಾರಹಟ್ಟಿ, ಬೆಳಗಟ್ಟ, ಕೂನಿಕೆರೆ, ಎರಕೆನಾಗೇನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮದ ಗ್ರಾಹಕರು, ರೈತರು, ಸಾರ್ವಜನಿಕರು ಸಹಕರಿಸಬೇಕು ಎಂದು ಹಿರಿಯೂರು ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹೆಚ್.ಪೀರ್‌ಸಾಬ್ ಕೋರಿದ್ದಾರೆ.