ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಳ್ಳಕೆರೆ ಉಪವಿಭಾಗದ ವ್ಯಾಪ್ತಿಯ ವಿಶ್ವೇಶ್ವರಪುರ, ದ್ಯಾವರನಹಳ್ಳಿ 66/11 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ಜೂ.27ರಂದು ತ್ರೈಮಾಸಿಕ ನಿರ್ವಹಣೆ ನಿಮಿತ್ತ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಜೂನ್ 27 ರಂದು ಬೆಳಿಗ್ಗೆ 10 ರಿಂದ 5 ಗಂಟೆಯವರೆಗೆ ಈ ವಿದ್ಯುತ್ ವಿತರಣಾ ಕೇಂದ್ರಗಳ ಮಾರ್ಗಗಳಾದ ಚೌಳೂರು, ಮೀರಸಾಬಿಹಳ್ಳಿ, ಬುಡ್ನಹಟ್ಟಿ, ದುರ್ಗಾವರ, ಕೆರೆಹಿಂದ್ಲಹಟ್ಟಿ, ಜಾಜೂರು, ಚನ್ನಮ್ಮನಾಗತಿಹಳ್ಳಿ, ದೇರಮರಿಕುಂಟೆ, ದೊಡ್ಡೇರಿ ಪರುಶುರಾಂಪುರ ಹಾಗೂ
ದೊಡ್ಡಬೀರನಹಳ್ಳಿ ಪಂಚಾಯಿತಿಗಳು ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಗ್ರಾಹಕರು, ರೈತರು, ಸಾರ್ವಜನಿಕರು ಸಹಕರಿಸಬೇಕು ಎಂದು ಚಳ್ಳಕೆರೆ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಜಿ.ಶಿವಪ್ರಸಾದ್ ತಿಳಿಸಿದ್ದಾರೆ.