ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಆತ್ಮೀಯರು ಮತ್ತು ಕೇಂದ್ರ ಸಂಪುಟ ಸಹೋದ್ಯೋಗಿ ಪ್ರಹ್ಲಾದ್ ಜೋಶಿ ಅವರು ಹುಬ್ಬಳಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಘದ ಪ್ರತಿನಿಧಿಗಳ ಜತೆ ಸಂಸತ್ ಭವನದ ಕಚೇರಿಯಲ್ಲಿ
ಭೇಟಿ ಮಾಡಿ ರಾಜ್ಯದ ಕೈಗಾರಿಕೆ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಸಮಾಲೋಚನೆ ನಡೆಸಿದರು ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಇದೇ ಸಂದರ್ಭದಲ್ಲಿ ರಾಜ್ಯದ 9 ಜಿಲ್ಲೆಗಳಲ್ಲಿ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ವಿಚಾರ, ಉದ್ಯೋಗ ಸೃಷ್ಠಿ, ಅಭಿವೃದ್ಧಿ ಕುರಿತು ಜೋಶಿ ಅವರೊಂದಿಗೆ ಕುಮಾರಸ್ವಾಮಿ ಅವರು ಮಹತ್ವದ ಚರ್ಚೆ ನಡೆಸಿದರು.

