ಕಿತ್ತೂರು ಕರ್ನಾಟಕ ಭಾಗದ ರಜತ ಮಹೋತ್ಸವ ಪೂರ್ವಭಾವಿ ಸಭೆ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವಿಜಯಪುರ ಜಿಲ್ಲೆಯ ಕಿತ್ತೂರು ರಾಣಿ ಚೆನ್ನಮ್ಮ ಸಮುದಾಯದ ಭವನದಲ್ಲಿ ಕಿತ್ತೂರು ಕರ್ನಾಟಕ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ  ಫೆ.27 ರಂದು ನಡೆಯಲಿರುವ “ಕಿತ್ತೂರು ಕರ್ನಾಟಕ ಭಾಗದ ಪಕ್ಷದ ಜೆಡಿಎಸ್ ಪಕ್ಷದ ರಜತ ಮಹೋತ್ಸವ” ಕಾರ್ಯಕ್ರಮದ ಪೂರ್ವಭಾವಿ ಸಭೆ ನಡೆಸಿ, ಕಾರ್ಯಕ್ರಮದ ರೂಪರೇಷೆಗಳ ಬಗ್ಗೆ ಕೂಲಂಕಷವಾಗಿ ಚರ್ಚಿಸಲಾಯಿತು ಎಂದು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.

ಈ ಸಂದರ್ಭದಲ್ಲಿ ಕೋರ್ ಕಮಿಟಿ ಅಧ್ಯಕ್ಷ ಜೆ.ಕೆ.ಕೃಷ್ಣಾರೆಡ್ಡಿ, ಮಾಜಿ ಸಚಿವ ವೆಂಕಟರಾವ್ ನಾಡಗೌಡ, ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ್‌, ಮಾಜಿ ಶಾಸಕ ದೇವಾನಂದ ಚವ್ಹಾಣ್, ಎಂ.ಎಸ್. ಡೊಂಗರಗಾಂವ, ರಾಜ್ಯ ಉಪಾಧ್ಯಕ್ಷೆ ಶ್ರೀಮತಿ ಜ್ಯೋತಿ ಪ್ರಕಾಶ್ ಮಿರ್ಜಿ, ಪಕ್ಷದ ಮುಖಂಡ ಬಿ.ಡಿ. ಪಾಟೀಲ್, ಸೋಮನಗೌಡ ಪಾಟೀಲ್, ಸುನೀತಾ ಚವ್ಹಾಣ, ಅಪ್ಸರಾಬೇಗಂ ಛಪ್ಪರಬಂದ, ಮಲ್ಲಿಕಾರ್ಜುನ ,

- Advertisement - 

ಜಿಲ್ಲಾಧ್ಯಕ್ಷರಾದ ಬಸನಗೌಡ ಮಾಡಗಿ, ಶಂಕರ ಮಾಡಲಗಿ, ಕೆ.ಪಿ. ಮಗೆಣ್ಣನವರ, ಹನಮಂತ ಮಾವಿನಮರದ, ಬಿ.ಬಿ. ಗಂಗಾಧರಮಠ, ಗುರುರಾಜ ಹುಣಸಿನಮರದ, ಮಂಜುನಾಥ ಶಿವಣ್ಣನವರ , ರಾಜ್ಯ ವಕ್ತಾರ ಬಸವರಾಜ ಪಾದಯಾತ್ರಿ ಸೇರಿದಂತೆ ಪಕ್ಷದ ಮುಖಂಡರು, ಪದಾಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.

 

- Advertisement - 

 

 

Share This Article
error: Content is protected !!
";