ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಸ್ವಚ್ಛತೆಯೇ ಮದ್ದು

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕಾಸರಹಟ್ಟಿ ಪ್ರಾಥಮಿಕ ಆರೋಗ್ಯ  ಕೇಂದ್ರ ವ್ಯಾಪ್ತಿ ಬರುವ ಬರುವ ಮದಕರಿಪುರ ಲಂಬಾಣಿ ಹಟ್ಟಿ ಅಂಗನವಾಡಿ ಕೇಂದ್ರದಲ್ಲಿ N C D ಕಾರ್ಯಕ್ರಮ ಅಂಗವಾಗಿ ಹಾಗೂ ಆಯುಷ್ಮಾನ್ ಆರೋಗ್ಯ ಕೇಂದ್ರ ಬಗ್ಗೆ ಸಾಂಕ್ರಾಮಿಕ ರೋಗಗಳು, ಬಿಪಿ, ಮಧುಮೇಹ, ಕ್ಯಾನ್ಸರ್ ಮತ್ತು ಹೃದಯ ಸಂಬಂಧಿಗಳು ಹಾಗೂ ಸಾಂಕ್ರಾಮಿಕ ರೋಗಗಳಾದ ಡೆಂಗ್ಯೂ, ಚಿಕನ್ ಗುನ್ಯಾ, ಏಡ್ಸ್ ಬಗ್ಗೆ ಜಿಲ್ಲಾ ಸಿಎಂಡಿ ವಿಭಾಗದ ವೆಂಕಟೇಶ್ ಜಾಗೃತಿ ಮೂಡಿಸಿದರು.

  ಅಂಗನವಾಡಿ ಕೇಂದ್ರದಲ್ಲಿ ಬಂದಂತ ತಾಯಂದಿರಿಗೆ ಹಾಗೂ ಗರ್ಭಿಣಿಯರಿಗೆ ಪೌಷ್ಟಿಕ ಆಹಾರ, ಸಮತೋಲನ ಆಹಾರದ ಬಗ್ಗೆ  ಸಂಕ್ಷಿಪ್ತವಾಗಿ ಜಿಲ್ಲಾ ಸಿಎಂಡಿ ವಿಭಾಗದ ಅಶೋಕ. ಎಸ್ ತಿಳಿಸಿದರು.

- Advertisement - 

ಸುಮಾರು 212 ಮನೆಗಳಿದ್ದು ಅದರಲ್ಲಿ ನೂರು ಮನೆಗಳನ್ನು ಲಾರ್ವ ಸಮೀಕ್ಷೆ ಮೇಲ್ವಿಚಾರಣೆ ಮಾಡಿ ನೀರನ್ನು ಶೇಖರಣೆ ಮಾಡುವ ಬಕೇಟ್ ಡ್ರಮ್ ತೊಟ್ಟಿಗಳು ಹಾಗೂ ಘನ ತ್ಯಾಜ್ಯ ವಸ್ತುಗಳು ಟೈರ್ ಹೂವಿನ ಕೊಂಡಗಳು ಇವೆಲ್ಲವನ್ನೂ ಪರಿಶೀಲಿಸಿ ಅಲ್ಲಿಯ ಜನಗಳಿಗೆ  ಡೆಂಗ್ಯೂ ಹರಡುವ ವಿಧಾನ, ಜ್ವರದ ಲಕ್ಷಣಗಳು, ತಡೆಗಟ್ಟುವ ಕ್ರಮಗಳು ಹಾಗೂ ಮುಂಜಾಗ್ರತಾ ಕ್ರಮಗಳ ಬಗ್ಗೆ ಆರೋಗ್ಯ ಶಿಕ್ಷಣ ನೀಡಲಾಯಿತು.

ಕಾರ್ಯಕ್ರಮಕ್ಕೆ ಸಿಎಚ್ಒ ರಶ್ಮಿ, ಪಿಎಚ್ ಸಿಓ ಪವಿತ್ರ, ಆಶಾ ಕಾರ್ಯಕರ್ತೆಯರಾದ ಕಾವೇರಮ್ಮ, ರೂಪಾ, ಜ್ಯೋತಿ, ಮಂಜುಳಾ   ಇವರೆಲ್ಲರೂ ಸೇರಿ ಮನೆಮನೆ ಭೇಟಿ ಮಾಡಿ ಲಾರ್ವ ಸಮೀಕ್ಷೆ  ಮಾಡಿ ಪಾಸಿಟಿವ್ ಬಂದ ತಾಣಗಳು ಹಾಗೂ ಸ್ವಚ್ಛತೆ ಹಾಗೂ ವೈಯಕ್ತಿಕ ಸ್ವಚ್ಛತೆ ಬಗ್ಗೆ ಆರೋಗ್ಯ ಶಿಕ್ಷಣ ನೀಡಿದರು.

- Advertisement - 

 

 

 

Share This Article
error: Content is protected !!
";