ಎಲೆಕ್ಟ್ರಾನಿಕ್ಸ್ ಹಾಗೂ ಸೆಮಿಕಂಡಕ್ಟರ್ ಉತ್ಪಾದನೆಗೆ ಆದ್ಯತೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಯಮಹಾ ರೋಬೋಟಿಕ್ಸ್
ಸ್ಥಳೀಯ ಉತ್ಪಾದನೆಗೆ ಕರ್ನಾಟಕದತ್ತ ದೃಷ್ಟಿ ನೆಟ್ಟಿದೆ ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ಹೇಳಿದರು.

ಸೆಮಿಕಂಡಕ್ಟರ್ ಬ್ಯಾಕ್‌ ಎಂಡ್ ಪ್ರೊಸೆಸಿಂಗ್ ಹಾಗೂ ಎಲೆಕ್ಟ್ರಾನಿಕ್ ಘಟಕ ಅಳವಡಿಕೆ ಸಾಧನಗಳಲ್ಲಿ ಜಾಗತಿಕವಾಗಿ ಮುಂಚೂಣಿಯಲ್ಲಿರುವ ಸಂಸ್ಥೆಗಳಲ್ಲಿ ಒಂದಾದ Yamaha Robotics ಜೊತೆ ಫಲಪ್ರದ ಮಾತುಕತೆ ನಡೆಸಿದೆವು.

- Advertisement - 

ನಮ್ಮ ರಾಜ್ಯದ ಶಕ್ತಿಯುತ ಎಲೆಕ್ಟ್ರಾನಿಕ್ಸ್ ಹಾಗೂ ಸೆಮಿಕಂಡಕ್ಟರ್ ಪರಿಸರವನ್ನು ಪರಿಚಯಿಸಿ, ಭಾರತದಲ್ಲಿನ ಕಾರ್ಯಾಚರಣೆಗೆ ಕರ್ನಾಟಕವೇ ಸೂಕ್ತ ಕೇಂದ್ರವೆಂದು ಪ್ರಸ್ತುತಪಡಿಸಿದೆವು. ಜೊತೆಗೆ, ಸ್ಥಳೀಯ ಗ್ರಾಹಕರಿಗೆ ಸೇವೆ ಒದಗಿಸಿ, ಆಮದು ಅವಲಂಬನೆ ಕಡಿಮೆ ಮಾಡಲು ಕರ್ನಾಟಕದಲ್ಲೇ ಉತ್ಪಾದನಾ ಘಟಕ ಸ್ಥಾಪಿಸುವಂತೆ ಒತ್ತಾಯಿಸಿದೆವು.

ಕರ್ನಾಟಕದ ಸಮೃದ್ಧ ಪರಿಸರವನ್ನು ಮೆಚ್ಚಿದ #YamahaRobotics, ಭವಿಷ್ಯದ ಹೂಡಿಕೆ ಹಾಗೂ ಸಹಯೋಗಕ್ಕಾಗಿ ಕರ್ನಾಟಕ ಸರ್ಕಾರದೊಂದಿಗೆ ನಿಕಟ ಸಹಕಾರ ಮುಂದುವರಿಸಲು ಒಮ್ಮತ ವ್ಯಕ್ತಪಡಿಸಿದೆ ಎಂದು ಸಚಿವ ಪಾಟೀಲ್ ತಿಳಿಸಿದರು.

- Advertisement - 

Share This Article
error: Content is protected !!
";