ಪುರಾತನ ಆಂಜನೇಯ ಸ್ವಾಮಿ ದೇವಸ್ಥಾನ ಜೀರ್ಣೋದ್ದಾರಕ್ಕೆ ಸಿದ್ಧತೆ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲ್ಲೂಕಿನ ತೂಬಗೆರೆ ಹೋಬಳಿ ನೆಲ್ಲುಗುದಿಗೆ ಗ್ರಾಮದಲ್ಲಿ ಅನಾದಿ ಕಾಲದಿಂದಲು ನೆಲೆಯಾಗಿರುವ ಶ್ರೀ ಆಂಜನೇಯ ಸ್ವಾಮಿ
  ದೇವಾಲಯ ಶಿಥಿಲಾವಸ್ಥೆಗೆ ತಲುಪಿದ್ದು  ಅದನ್ನ ಕೆಡವಿ ಮರು ನಿರ್ಮಾಣ ಮಾಡಲು ಗ್ರಾಮಸ್ಥರು ಎಲ್ಲರೂ ಜೊತೆಗೂಡಿ ದೇವಾಲಯದ  ಜೀರ್ಣೋದ್ದಾರ ಮುಂದಾಗಿದ್ದಾರೆ.

 ಈ ಸಂದರ್ಭದಲ್ಲಿ  ಆಗಮಿಸಿದ ರಾಜ್ಯ ಸಹಕಾರಿ  ಪ್ರಕೋಷ್ಠ  ರಾಜ್ಯ ಸಮಿತಿಯ ಸದಸ್ಯ ಓಬದೇನಹಳ್ಳಿ ಕೆ ಮುನಿಯಪ್ಪ ದೇವಾಲಯದ ಕಾರ್ಯವೈಖರಿಯನ್ನು ವೀಕ್ಷಿಸಿ ಅವರು ಮಾತನಾಡಿ ದೇವಾಲಯ ನಿರ್ಮಾಣ ಮುಖ್ಯವಲ್ಲ ದೇವರ ಮೂರ್ತಿಗೆ ದೈನಂದಿನ ಅಭಿಷೇಕ ಪೂಜಾ ಕೈಂ ಕಾರ್ಯಗಳು ಮಾಡುವುದರಿಂದ ಈಗಿನ ಯುವಕರಿಗೆ ಹಾಗು ಗ್ರಾಮದಲ್ಲಿ ದೈವ ಭಕ್ತಿ ಕಡೆಗೆ ಪ್ರೇರಣೆ ಯಾಗುವುದು ಹಾಗು ಒಳ್ಳೆಯ  ಮಾರ್ಗದೆಡೆ ನಡೆಯಲು  ದಾರಿಯಾಗುತ್ತದೆ ಹಾಗು ಗ್ರಾಮದಲ್ಲಿ ಶಾಂತಿ ನೆಲೆಯಾಗಿರುವುದು ನಾವು ದೇವಾಲಯ ನಿರ್ಮಾಣ ಮಾಡಿ ಪೂಜೆ ಪುನಸ್ಕಾರಗಳು ಮಾಡದೆ ಹೋದರೆ  ಗ್ರಾಮದ ಸ್ಥಿತಿಯೇ ಬದಲಾಗುವುದು ಎಂದರು.

ಈ ಸಂದರ್ಭದಲ್ಲಿ ಶ್ರೀ ಆಂಜಿನೇಯ ಸ್ವಾಮಿ ದೇವಾಲಯದ ಜೀರ್ಣೋದ್ಧಾರ ಸಮಿತಿಯ  ಕಾರ್ಯದರ್ಶಿ ಚಂದ್ರು  ಖಜಾಂಚಿ ನಿವೃತ್ತ ಪೋಲಿಸ್ ಅಧಿಕಾರಿ ಮಂಜುನಾಥ ಉಪಾಧ್ಯಕ್ಷ ಮುನಿರಾಜು 

ಕಾರ್ಯಕಾರಿ ಸಮಿತಿಯ ಸದಸ್ಯರು ನಿವೃತ್ತ ಶಿಕ್ಷಕ ಪಿಳ್ಳಪ್ಪ   ವೆಂಕಟಪ್ಪ . ಮುನಿಕೃಷ್ಣಪ್ಪ  ಶಾಂತಮ್ಮ ಅರ್ಚಕ ರಾಮಾನುಜಾಚಾರ್ಯ  ಊರಿನ ಹಿರಿಯ ಮುಖಂಡರಾದ.  ಟಿ ಎಂ. ಸಿದ್ಧಪ್ಪ   ಎಂ. ಸಿದ್ದಪ್ಪ ಬೀರಪ್ಪ.  ಕೆ. ಸಿದ್ದಪ್ಪ  ಕೃಷ್ಣಪ್ಪ  ಗಂಗಾಧರ ನರಸಿಂಹಯ್ಯ ಸೇರಿದಂತೆ ಗ್ರಾಮದ ಮುಖಂಡರು ಹಾಜರಿದ್ದರು.

 

 

Share This Article
error: Content is protected !!
";