ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ತಾಲ್ಲೂಕಿನ ಹರಿಯಬ್ಬೆ ಗ್ರಾಮ ವಿದ್ಯಾವಂತರ ಬೀಡು. ಈ ಗ್ರಾಮದಲ್ಲಿ ಸರ್ಕಾರಿ ಅಧಿಕಾರಿಗಳು ಸೇರಿದಂತೆ ಇನ್ನು ಹಲವು ಕ್ಷೇತ್ರಗಳಲ್ಲಿ ಉನ್ನತ ಸ್ಥಾನ ಅಲಂಕರಿಸಿರುವ ಪ್ರತಿಭಾವಂತರು ಇದ್ದಾರೆ.
ಕೃಷಿ ಕಾರ್ಯದಲ್ಲಿಯೂ ಉತ್ತಮ ಸಾಧಕರು ಈ ಗ್ರಾಮದಲ್ಲಿರುವರು.
ಹರಿಯಬ್ಬೆ ಗ್ರಾಮದಲ್ಲಿ ನಾಡಪ್ರಭು ಕೆಂಪೇಗೌಡರ ಪುತ್ಥಳಿ ಅನಾವರಣಕ್ಕೆ ಪೂರ್ವಸಿದ್ಧತೆ ಬಹಳಷ್ಟು ಅದ್ದೂರಿಯಾಗಿ ನಡೆದಿದೆ.
ಕೆಂಪೇಗೌಡರ ಪುತ್ಥಳಿ ಪೂರ್ಣಗೊಂಡಿದೆ. ಬೆಂಗಳೂರಿನಿಂದ ಹರಿಯಬ್ಬೆಗೆ ಪುತ್ಥಳಿ ಸ್ಥಳಾಂತರಿಸಲು ಹರಿಯಬ್ಬೆ ಗ್ರಾಮದ ಕೆಂಪೇಗೌಡ ಸಂಘ ಮತ್ತು ಕಂಪೇಗೌಡ ಮಹಿಳಾ ಸಂಘಟನೆಯ ಪದಾಧಿಕಾರಿಗಳು ಹಾಗೂ ಗ್ರಾಮದ ಮುಖಂಡರು ಬೆಂಗಳೂರಿಗೆ ಬಂದಿದ್ದ ಸಂದರ್ಭದಲ್ಲಿ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಡಾ.ರಾಜು ಬೇತೂರು ಪಾಳ್ಯ ಅವರಿಂದ ಕೆಂಪೇಗೌಡರ ಪುತ್ಥಳಿಗೆ ಪೂಜೆ ಸಲ್ಲಿಸಲಾಯಿತು.
ಹರಿಯಬ್ಬೆ ಗ್ರಾಮದ ಪುತ್ಥಳಿ ಅನಾವರಣಕ್ಕೆ ರಾಜು ಅವರೇ ಪ್ರಥಮವಾಗಿ 1 ಲಕ್ಷ ದೇಣಿಗೆ ನೀಡಿದ್ದಾರೆ. ಇದು ಕೆಂಪೇಗೌಡರ ಆಡಳಿತಾತ್ಮಕ ನೀತಿಗೆ ಅವರು ನೀಡುವಂತಹ ಗೌರವವಾಗಿದೆ.

