ದಕ್ಷಿಣಕಾಶಿ ಶ್ರೀತೇರುಮಲ್ಲೇಶ್ವರ ಸ್ವಾಮಿಯ ಅದ್ಧೂರಿ ಜಾತ್ರೆಗೆ ಸಿದ್ಧತೆ

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ನಗರದಲ್ಲಿರುವ ಕರ್ನಾಟಕ ಸರ್ಕಾರದ ಮುಜರಾಯಿ
ಬಿವರ್ಗದ ದಕ್ಷಿಣ ಕಾಶಿ ಶ್ರೀ ತೇರುಮಲ್ಲೇಶ್ವರ ಸ್ವಾಮಿ ದೇವರ 2025 ನೇ ಸಾಲಿನ ಜಾತ್ರಾ ಮಹೋತ್ಸವ ಅಂಗವಾಗಿ ತಹಶೀಲ್ದಾರ್ ಹಿರಿಯೂರು ಹಾಗೂ ಮುಜರಾಯಿ ಅಧಿಕಾರಿ ಸಿ.ರಾಜೇಶ್ ಕುಮಾರ್ ರವರ ಅಧ್ಯಕ್ಷತೆಯಲ್ಲಿ ಶ್ರೀ ತೇರುಮಲ್ಲೇಶ್ವರ ಸ್ವಾಮಿ ದೇವಸ್ಥಾನದ ಪ್ರಾಂಗಣದಲ್ಲಿ ಕರೆಯಲಾಗಿದ್ದ ಜಾತ್ರಾ ಪೂರ್ವಭಾವಿ ಸಭೆಯಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಅದ್ದೂರಿಯಾಗಿ ಭಕ್ತಿಭಾವದಿಂದ ಜಾತ್ರ ಮಹೋತ್ಸವ ಆಚರಿಸುವ ನಿಟ್ಟಿನಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ದೇವಾಲಯಗಳ ಮುಖ್ಯಸ್ಥರು ಅಗತ್ಯವಾದ ಸಹಕಾರ ನೀಡಬೇಕು ಎಂದು ತಹಶೀಲ್ದಾರ್ ಸಿ.ರಾಜೇಶ್ ಕುಮಾ‌ರ್ ಹೇಳಿದರು.                                                         

ನಗರದ ಶ್ರೀ ತೇರುಮಲ್ಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನಡೆದ ಜಾತ್ರ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಇದೇ ಫೆಬ್ರವರಿ-3 ರಂದು ಸೋಮವಾರ ರಾತ್ರಿ 8ಕ್ಕೆ ಕಂಕಣಧಾರಣೆ ಪ್ರಾರಂಭವಾಗಿ ದಿನಂಪ್ರತಿ ರಾತ್ರಿ 8ಕ್ಕೆ ಸ್ವಾಮಿಗೆ ವಿಶೇಷ ವಾಹನ ಉತ್ಸವಗಳು ನಡೆಯಲಿವೆ. 4 ರಂದು ಮಂಗಳವಾರ ಮಂಟಪೋತ್ಸವ, 5 ರಂದು ಬುಧವಾರ ಗಿಳಿ ವಾಹನೋತ್ಸವ, 6 ರಂದು ಗುರುವಾರ ಗಂಡಭೇರುಂಡ ವಾಹನೋತ್ಸವ, 7 ರಂದು ಶುಕ್ರವಾರ ನವಿಲು ವಾಹನೋತ್ಸವ, 8 ರಂದು ಶನಿವಾರ ಸಿಂಹ ವಾಹನೋತ್ಸವ, 9 ರಂದು ಭಾನುವಾರ ನಂದಿ ವಾಹನೋತ್ಸವ,

- Advertisement - 

10 ರಂದು ಸೋಮವಾರ ಸರ್ಪ ವಾಹನೋತ್ಸವ,  11  ರಂದು ಮಂಗಳವಾರ ಮೂರು ಕಳಸ ಸ್ಥಾಪನೆ/ ಗಜವಾಹನೋತ್ಸವ, 12 ರಂದು ಬುಧವಾರ ದೊಡ್ಡ ಉತ್ಸವ, 13 ರಂದು ಗುರುವಾರ ಮಧ್ಯಾಹ್ನ 12 ಘಂಟೆಗೆ ಮಖ ನಕ್ಷತ್ರದಲ್ಲಿ ಸ್ವಾಮಿಯ ಬ್ರಹರಥೋತ್ಸವ, 15 ರಂದು ಶನಿವಾರ ರಾತ್ರಿ ಗಂಟೆಗೆ ಕರ್ಪೂರದಾರತಿ, 16 ರಂದು ಭಾನುವಾರ ರಾತ್ರಿ 8ಕ್ಕೆ ಓಕುಳಿ ಕಾರ್ಯಕ್ರಮ, 17 ರಂದು ಸೋಮವಾರ ಕಂಕಣ ವಿಸರ್ಜನೆ ಹಾಗೂ 26 ರಂದು ಬುಧವಾರ ಮಹಾಶಿವರಾತ್ರಿ ಧಾರ್ಮಿಕ ಕಾರ್ಯಕ್ರಗಳನ್ನು ನಡೆಸಲು ತೀರ್ಮಾನಿಸಲಾಗಿದೆ ಎಂಬುದಾಗಿ ಸಭೆಯಲ್ಲಿ ಹೇಳಿದರು.   

ಈ ಸಂಧರ್ಭದಲ್ಲಿ ಹಿರಿಯೂರು ನಗರಸಭಾ ಅಧ್ಯಕ್ಷ ಅಜಯ್‌ಕುಮಾರ್ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್ ಎಸ್‌ಅನಿಲ್‌ಕುಮಾರ್‌ನಗರಸಭೆ ಸದಸ್ಯರುಗಳು, ಜಾತ್ರಾ ಸಮಿತಿ ಅಧ್ಯಕ್ಷ ಆರ್.ನಾಗೇಂದ್ರ ನಾಯ್ಕ್‌ಮತ್ತು ಪತ್ರಕರ್ತ ಜಿ.ಎಲ್.ಮೂರ್ತಿ, ರವೀಂದ್ರನಾಥ ಹಾಗೂ ಪಟ್ಟಣದ ಪ್ರಮುಖರು ಹಾಗೂ ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಬೆಸ್ಕಾಂ ಇಲಾಖೆ, ಅರಣ್ಯ ಇಲಾಖೆ, ಪಿಡಬ್ಲ್ಯೂಡಿ ಇಲಾಖೆ, ಪಂಚಾಯತ್ ರಾಜ್ ಇಂಜಿನಿಯರ್‌ರಿಂಗ್ ಇಲಾಖೆ, ಅಗ್ನಿಶಾಮಕ ದಳ ಮತ್ತು ಪತ್ರಿಕಾ ಪ್ರತಿನಿಧಿಗಳು, ಸದರಿ ದೇವಸ್ಥಾನದ ಅರ್ಚಕರು ಕೈವಾಡಸ್ಥರು, ಎಲ್ಲಾ ಆಸಕ್ತ ಭಕ್ತಾಧಿಗಳು ಮತ್ತು ಕಂದಾಯ ಇಲಾಖೆಯ ಅಧಿಕಾರಿ – ಸಿಬ್ಬಂದಿಗಳು ಜಾತ್ರಾ ಪೂರ್ವ‍ಭಾವಿ ಸಭೆಯಲ್ಲಿ ಉಪಸ್ಥಿತರಿದ್ದರು.

- Advertisement - 

 

Share This Article
error: Content is protected !!
";