ವಿಕಸಿತಾ ಕೃಷಿ ಸಂಕಲ್ಪ ಅಭಿಯಾನಕ್ಕೆ ಸಿದ್ಧತೆ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲ್ಲೂಕಿನ ತೂಬಗೆರೆ ಹೋಬಳಿ ಹಾಡೋನಹಳ್ಳಿ ಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಮುಂಗಾರಿಗೆ ಕೃಷಿ ಸಿದ್ಧತೆಯನ್ನು ಮಾಡಿಕೊಳ್ಳಲು ರೈತರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಭಾರತ ಸರ್ಕಾರವು ಮೇ
26 ರಿಂದ ಜೂನ್ 12. 2025 ರವರೆಗೆ ದೇಶಾಧ್ಯಾಂತ  ವಿಕಸಿತ ಕೃಷಿ ಸಂಕಲ್ಪ ಅಭಿಯಾನವನ್ನು ಹಮ್ಮಿಕೊಳ್ಳಲು ಸೂಚಿಸಿದೆ. ಈ ಅಭಿಯಾನವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯಾದ್ಯಂತ ಯಶಸ್ವಿಗೊಳಿಸಲು ಹಾಡೋನಹಳ್ಳಿಯ ಭಾ.ಕೃ.ಸಂ.ಪ ಕೃಷಿ ವಿಜ್ಞಾನ ಕೇಂದ್ರವು ಕಾರ್ಯೋನ್ಮುಖವಾಗಿದೆ.

- Advertisement - 

ಕೃಷಿ ವಿಜ್ಞಾನಿಗಳ ನಡೆ  ರೈತರ ಕಡೆ ಎಂಬ ಧೈಯೋದ್ದೇಶವನ್ನು ಸಫಲಗೊಳಿಸುವ ನಿಟ್ಟಿನಲ್ಲಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ. ಹನುಮಂತರಾಯ, ಬಿ.ಜಿ, ರವರು ಕೃಷಿ ವಿಜ್ಞಾನ: ಕೇಂದ್ರದ ವಿಜ್ಞಾನಿಗಳು, ಕೃಷಿ ಮತ್ತು ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಹಾಗೂ ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ಅಂಗ ಸಂಸ್ಥೆಗಳ ವಿಜ್ಞಾನಿ ಗಳನ್ನೊಳ ಗೊಂಡ. 3 ತಂಡಗಳು ಬೆಂಗಳೂರು ಗ್ರಾಮಾಂತರ ಜಿಲ್ಲೆಯಾದ್ಯಂತ ೧೩೫ ಹಳ್ಳಿಗಳಲ್ಲಿ ಮುಂಗಾರು ಪೂರ್ವ ಆಂದೋಲನ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ದ ಮೂಲಕ ದಿನಾಂಕ: 25,05,2025 ರಿಂದ 12,06,2025 ರವರೆಗೆ ಜಾಗೃತಿಯನ್ನು ಮೂಡಿಸುವುದ್ದಕ್ಕಾಗಿ ಯೋಜನೆಯನ್ನು ರೂಪಿಸಲಾಗಿದೆಯೆಂದು ತಿಳಿಸಿದರು.

- Advertisement - 

 ಪ್ರಮುಖ ಬೆಳೆಗಳ ಉತ್ಪದಾಕತೆಯನ್ನು ಹೆಚ್ಚಿಸಲು ರೈತರಲ್ಲಿ ಜಾಗೃತಿ ಮೂಡಿಸಲು ತೆಗೆದು ಕೊಳ್ಳಬೇಕಾದ ಸುಧಾರಿತ ಬೇಸಾಯ ಕ್ರಮಗಳು, ಅಧಿಕ ಇಳುವರಿ ಹಾಗೂ ಬರ ಸಹಿಷ್ಣುತೆ ತಳಿಗಳ ಬಗ್ಗೆ, ಪೋಷಕಾಂಶಗಳ ನಿರ್ವಹಣೆ, ಕೀಟ ಮತ್ತು ರೋಗಗಳ ನಿರ್ವಹಣೆ, ಮಣ್ಣು ಪರೀಕ್ಷೆಯಾಧಾರಿತ ರಸಗೊಬ್ಬರಗಳು /

ಜೈವಿಕ ಗೊಬ್ಬರಗಳ ಬಳಕೆ, ಮಣ್ಣು ಮತ್ತು ನೀರು ಸಂರಕ್ಷಣೆ, ಕೃಷಿಯ ಇತರ ಉಪಕಸುಬುಗಳಾದ ಹೈನುಗಾರಿಕೆ, ಮೀನುಗಾರಿಕೆ, ಜೇನು ಕೃಷಿ, ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ, ಆಣಬೆ ಬೇಸಾಯ ಹಾಗೂ ಕೃಷಿಯಲ್ಲಿ ಯಾಂತ್ರೀಕರಣ ಮುಂತಾದ ವಿಷಯಗಳ ಬಗ್ಗೆ ವಿಜ್ಞಾನಿಗಳ ಮೂಲಕ ಅರಿವು ಮೂಡಿಸುವುದಕ್ಕಾಗಿ ಭಾರತ ಸರ್ಕಾರವು ಈ ಅಭಿಯಾನವನ್ನು ಆಯೋಜಿಸಿದೆ.

- Advertisement - 

ಅಲ್ಲದೆ, ಕೃಷಿಗೆ ಸಂಬಂಧಪಟ್ಟ ಖಾಸಗಿ ಕಂಪೆನಿಗಳು ಸಹ ಭಾಗವಹಿಸಲಿದ್ದು ಕೃಷಿಯಲ್ಲಿ ಡೋಕ್ ಬಳಕೆ ಹಾಗೂ ಇತರ ಪ್ರಾತ್ಯಕ್ಷಿಕೆಗಳನ್ನು ಸಹ ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ಈ ಅಭಿಯಾನದ ತಂಡವು ತಮ್ಮ ಗ್ರಾಮಗಳಿಗೆ ಬಂದಾಗ ರೈತ ಬಾಂಧವರೆಲ್ಲರೂ ತಪ್ಪದೇ ಭಾಗವಹಿಸಿ ಈ ಅಭಿಯಾನವನ್ನು ಸಫಲ ಗೊಳಿಸುವುದರೊಂದಿಗೆ ಸದುಪಯೋಗ ಪಡಿಸಿಕೊಳ್ಳಬೇಕೆಂದು ಕೃಷಿ ವಿಜ್ಞಾನ ಕೇಂದ್ರ ಮುಖ್ಯಸ್ಥರು ತಿಳಿಸಿದರು.

 

 

Share This Article
error: Content is protected !!
";