ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ತಾಲೂಕಿನ ವಾಣಿವಿಲಾಸ ಜಲಾಶಯವು ಭರ್ತಿಯಾಗಿ ಕೋಡಿ ಹರಿಯುವ ಹಂತಕ್ಕೆ ತಲುಪಿದ್ದು ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ನೇತೃತ್ವದಲ್ಲಿ ಜಲಾಶಯಕ್ಕೆ ಬಾಗಿನ ಅರ್ಪಿಸಲು ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಬಾಗಿನ ಅರ್ಪಣೆ ಸಂದರ್ಭದಲ್ಲಿ ಆಗಮಿಸುವ ಎಲ್ಲರಿಗೂ ಅನ್ನ ಸಂತರ್ಪಣೆ ಆಯೋಜಿಸಲಾಗುತ್ತಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಘಟಕರು ಮನವಿ ಮಾಡಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ರೈತರ ಜೀವನಾಡಿ ವಾಣಿವಿಲಾಸ ಸಾಗರ ಜಲಾಶಯ. ಈ ಜಲಾಶಯದ ನೀರಿನಿಂದ ಹಿರಿಯೂರು ಹಾಗೂ ಚಳ್ಳಕೆರೆ ತಾಲ್ಲೂಕಿನ ಕೃಷಿ ಭೂಮಿ ಹಸಿರು ಕಾಣುತ್ತಿದೆ. ಹಿರಿಯೂರು ತಾಲ್ಲೂಕಿನ ಎಲ್ಲಾ ಹೋಬಳಿಗಳಲ್ಲಿನ ದೊಡ್ಡ ದೊಡ್ಡ ಕೆರೆಗಳಿಗೆ ನೀರು ತುಂಬಿಸುವ ಕಾರ್ಯವಾಗಬೇಕಿದೆ.
ಈ ವಿಚಾರದಲ್ಲಿ ರೈತರ ಬದುಕಿಗೆ ಬೆಂಬಲ ಸಿಕ್ಕಿದೆ ರೈತರಿಗೆ ಸಂತಸ ತಂದಿದೆ. ಚಿತ್ರದುರ್ಗ ತಾಲ್ಲೂಕಿಗೆ ಹೊಂದಿಕೊಂಡಿರುವ ಐಮಂಗಳ ಹೋಬಳಿ ಬಯಲು ಸೀಮೆ ಪ್ರದೇಶ. ಈ ಭಾಗದಲ್ಲಿ ದೊಡ್ಡ ದೊಡ್ಡ ಕೆರೆಕಟ್ಟೆಗಳು ಸಾಕಷ್ಟು ಇವೆ. ಆದರೆ ಆ ಭಾಗದಲ್ಲಿರುವ ಕೆರೆಗಳಿಗೆ ನೀರು ತುಂಬಿಸುವ ಭಾಗ್ಯ ಇನ್ನು ಒದಗಿ ಬಂದಿಲ್ಲದಿರುವುದು ಆ ಭಾಗದ ರೈತರಿಗೆ ಆತಂಕವಿದೆ.
ಒಂದು ವರ್ಷ ವಾಡಿಕೆಗಿಂತ ಕಡಿಮೆ ಕಡಿಮೆಯಾದರೆ ಐಮಂಗಳ ಹೋಬಳಿಯಲ್ಲಿರುವ ಬೋರ್ ವೆಲ್ ನಲ್ಲಿ ನೀರು ಬಹಳಷ್ಟು ಕಡಿಮೆಯಾಗುತ್ತವೆ. ಕಳೆದ ವರ್ಷ ಮಳೆ ಕಡಿಮೆ ಬಿದ್ದ ಕಾರಣ ಹಲವು ಬೋರ್ ವೆಲ್ ನಲ್ಲಿ ನೀರು ಕಡಿಮೆಯಾಗಿತ್ತು. ಆ ಸಮಯದಲ್ಲಿ ರೈತರು ಆತಂಕಕ್ಕೆ ಒಳಗಾಗಿದ್ದರು. ಐಮಂಗಳ ಹೋಬಳಿಯಲ್ಲಿ ಅಡಿಕೆ ಸಸಿಯನ್ನು ಬಹಳಷ್ಟು ರೈತರು ನಾಟಿ ಮಾಡಿದ್ದಾರೆ. ಕಳೆದ ಮಾರ್ಚ್ ನಲ್ಲಿ ಬೋರ್ ನಲ್ಲಿ ನೀರು ಕಡಿಮೆಯಾಗಿರುವ ಕಾರಣಕ್ಕೆ ಕೆಲವು ರೈತರು ಟ್ಯಾಂಕರ್ ವ್ಯವಸ್ಥೆ ಮಾಡಿಕೊಂಡರು.
ಈ ವ್ಯವಸ್ಥೆ ರೈತರಿಗೆ ಬಹಳಷ್ಟು ದುಬಾರಿಯಾಗಿದೆ. ಅದರಿಂದಾಗಿ ಐಮಂಗಳ ಹೋಬಳಿಯ ರೈತರಿಗಾಗಿ ಆ ಭಾಗದಲ್ಲಿರುವ ದೊಡ್ಡ ದೊಡ್ಡ ಕೆರೆಗಳಿಗೆ ನೀರು ತುಂಬಿಸುವ ಮನವಿ ರೈತರಿಂದಾಗಿದೆ ಎಂದು ಕಾಂಗ್ರೆಸ್ ಮುಖಂಡ ರಘು ಗೌಡ ಒತ್ತಾಯಿಸಿದ್ದಾರೆ.