ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ತಾಲೂಕು ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಎಂ.ಎಲ್. ಗಿರಿಧರ್ ಮತ್ತು ಪ್ರಧಾನ ಕಾರ್ಯದರ್ಶಿ ಚಿದಾನಂದ್ ಮಸ್ಕಲ್ ಇವರಿಗೆ ಹಿರಿಯೂರು ನಗರದ ಪ್ರವಾಸ ಮಂದಿರದಲ್ಲಿ ಸನ್ಮಾನಿಸಲಾಯಿತು.
ಪತ್ರಕರ್ತರು ವೃತ್ತಿ ಧರ್ಮ ಪಾಲಿಸಬೇಕು. ವೃತ್ತಿ ಧರ್ಮ ಪಾಲಿಸುವುದು ಅತ್ಯಂತ ಅಮೂಲ್ಯವಾದದ್ದು ಅದರಲ್ಲೂ ಯುವಕರು ಸಂಘದ ಚುಕ್ಕಾಣಿ ಹಿಡಿದಿರುವುದು ಸಂತೋಷದ ವಿಚಾರ ನಿಮ್ಮ ಅವಧಿಯಲ್ಲಿ ಜನರೊಂದಿಗೆ ಸಮಸ್ಯೆಗಳೊಂದಿಗೆ ಸಂಘಗಳೊಂದಿಗೆ ಉತ್ತಮ ಒಡನಾಟ ಇಟ್ಟುಕೊಂಡು ಸಂವಾದ ಮಾಡಿಕೊಂಡು ಸಂಘ ಬೆಳೆಸಬೇಕು. ಪ್ರಜಾಪ್ರಭುತ್ವ ಉಳಿಸಲು ಕೊನೆ ಅಸ್ತ್ರವಾಗಿ ಉಳಿದಿರುವ ಪತ್ರಿಕಾ ರಂಗ ಉಳಿಸಿ ಬೆಳೆಸಬೇಕು ಎಂದು ಗಣ್ಯರು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ಜಿಲ್ಲಾ ನಿರ್ದೇಶಕ ಮಂಜುನಾಥ್ ಮಾಳಿಗೆ, ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಕೆ.ಜಿ ಹನುಮಂತರಾಯ, ರಮೇಶ್, ರಾಮಚಂದ್ರ ಕಸವನಹಳ್ಳಿ ಉಪಸ್ಥಿತರಿದ್ದರು.

