ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ತಾಲೂಕು ಕೋವೆರಟ್ಟಿ ಗ್ರಾಮದ ದಲಿತ ಸಮಾಜಕ್ಕೆ ಸೇರಿದ ತಿಪ್ಪೇಸ್ವಾಮಿ ಜ್ಯೋತಿ ದಂಪತಿಗಳ ಪುತ್ರಿ ವರ್ಷಿತಾ ಎಂಬುವರು ಚಿತ್ರದುರ್ಗ ಕಾಲೇಜಿನಲ್ಲಿ ದ್ವಿತೀಯ ಬಿಎ ವ್ಯಾಸಂಗ ಮಾಡುತಿದ್ದು ಆರೋಪಿ ಚಿತ್ರದುರ್ಗ ಚೇತನ್ ಎಂಬ ನರಾಕ್ಷಸ ವರ್ಷಿತಾಳನ್ನ ಅತ್ಯಾಚಾರ ಮಾಡಿ ಪೆಟ್ರೋಲ್ ಸುರಿದು ಸುಟ್ಟು ಹಾಕಿರುತ್ತಾರೆ.
ಮೃತ ಯುವತಿಯ ಸಂತ್ರಸ್ತರ ಮನೆಗೆ ಭಾನುವಾರ ಕರ್ನಾಟಕ ಸರ್ಕಾರದ ಆದಿ ಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ ಎಸ್ ಮಂಜುನಾಥ್ ರವರು ಭೇಟಿ ನೀಡಿ ಅವರಿಗೆ ಧೈರ್ಯ ಹೇಳಿ ಇಲಾಖೆ ವತಿಯಿಂದ ಒಂದು ಲಕ್ಷ ರೂಪಾಯಿಗಳ ನೇರ ಸಾಲವನ್ನು ವರ್ಷಿತಾಳ ತಂದೆ ತಾಯಿಯ ರವರಿಗೆ ಸ್ಥಳದಲ್ಲಿ ವಿತರಿಸಿದರು.
ಈ ಸಂದರ್ಭದಲ್ಲಿ ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತಾಜ್ಪೀರ್, ಜಿಲ್ಲಾ ಆದಿ ಜಾಂಬವ ಅಭಿವೃದ್ಧಿ ನಿಗಮದ ಅಧಿಕಾರಿ ದಿವಾಕರ್, ಹಿರಿಯೂರು ತಾಲೂಕು ಬ್ಲಾಕ್ ಕಾಂಗ್ರೆಸ್ ಎಸ್ಸಿ ವಿಭಾಗದ ತಾಲೂಕು ಅಧ್ಯಕ್ಷ ಜಿ ಎಲ್ ಮೂರ್ತಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ದ್ಯಾಮಣ್ಣ , ಅಶೋಕ್, ಹರೀಶ್, ಸಿದ್ದಪ್ಪ, ತಿಪ್ಪೇಸ್ವಾಮಿ, ಪ್ರದೀಪ್, ಮಂಜುನಾಥ್, ದರ್ಶನ್ ಗೌಡ, ಸುರೇಶ್ ಮತ್ತು ಕೊವೇರಹಟ್ಟಿ ಗ್ರಾಮಸ್ಥರು ಈ ಸಂದರ್ಭದಲ್ಲಿ ಹಾಜರಿದ್ದರು.

