ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ಟೌನ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ-2025 ರಿಂದ 2030ರ ಅವಧಿಯ ಆಡಳಿತ ಮಂಡಳಿಗೆ 12 ಸ್ಥಾನಗಳು ಅವಿರೋಧ ಆಯ್ಕೆಯಾಗಿದ್ದ ನಿರ್ದೇಶಕರು ಶುಕ್ರವಾರ ನಡೆದ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಪಿ.ಎಸ್.ಸಾದತ್ ವುಲ್ಲಾ, ಉಪಾಧ್ಯಕ್ಷರಾಗಿಎನ್.ಪ್ರಕಾಶ್ ಕುಮಾರ್ ಇವರುಗಳು ಅವಿರೋಧ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಶಿವಮೂರ್ತಿ ಅವರು ಪತ್ರಿಕಾ ಹೇಳಿಕೆ ನೀಡಿದ್ದಾರೆ.
ಅಧ್ಯಕ್ಷ-ಉಪಾಧ್ಯಕ್ಷರನ್ನು ಎಲ್ಲ ನಿರ್ದೇಶಕರು ಪುಷ್ಪಮಾಲೆ ಹಾಕಿ ಗೌರವಿಸಿದರು.
ನಿರ್ದೇಶಕರಾದ ಗುರುಸ್ವಾಮಿ, ಪ್ಯಾರೇಜಾನ್, ಎನ್.ಸುಬ್ರಮಣಿ, ಹರಿಯಬ್ಬೆ ಸಿ.ಹೆಂಜಾರಪ್ಪ, ಸಿ.ಸುಬ್ರಮಣಿ, ಡಿ.ಸಣ್ಣಪ್ಪ, ಎಚ್.ಎನ್.ವೆಂಕಟೇಶ್, ವೈ.ಎಸ್.ಉಮಾಕಾಂತ್, ಕೆ.ವಿ.ಗೌರಮ್ಮ, ನಾಗರತ್ನಮ್ಮ, ಸಂಘದ ಕಾರ್ಯದರ್ಶಿ ಡಿ.ಯಶವಂತ್ ಸೇರಿದಂತೆ ಮತ್ತಿತರರು ಇದ್ದರು.
ನಂತರ ಮಾತನಾಡಿದ ಅಧ್ಯಕ್ಷ ಪಿ.ಎಸ್.ಸಾದತ್ ವುಲ್ಲಾ, ಪಕ್ಷತೀತವಾಗಿ ಸಂಘವನ್ನು ಬಲಿಷ್ಠವಾಗಿ ಕಟ್ಟೋಣ. ಇದಕ್ಕೆ ಎಲ್ಲ ನಿರ್ದೇಶಕರ ಸಲಹೆ ಸಹಕಾರ ಅಗತ್ಯವಾಗಿದೆ. ನಮ್ಮ ಸಂಘ ಸದಾ ರೈತರ ಪರವಾಗಿ ಕೆಲಸ ಮಾಡುತ್ತಿದೆ. ಯಾವುದೇ ಕಾರಣಕ್ಕೂ ಒಂದು ರೂಪಾಯಿ ಅವ್ಯವಹಾರ ಮಾಡಲು ಬಿಡುವುದಿಲ್ಲ ಎಂದು ತಿಳಿಸಿದರು.
ಸಹಕಾರಿ ಕ್ಷೇತ್ರದಲ್ಲಿ ನಂಬಿಕೆ ಬಹಳ ಮುಖ್ಯ. ಹಾಗೆ ಷೇರುದಾರರ ಹಿತ ಕಾಯುವುದು ಅಷ್ಟೇ ಮುಖ್ಯ. ಪ್ರತಿ ವರ್ಷ ಮೂರು ಕೋಟಿ ರೂ.ವ್ಯವಹಾರ ಮಾಡುತ್ತಿರುವ ಈ ಸಂಘವು ಇನ್ನೂ ಹೆಚ್ಚಿನ ವ್ಯವಹಾರ ಮಾಡಲು ಸಿದ್ದವಿದೆ ಎಂದು ಹೇಳಿದರು.
ನಿರ್ದೇಶಕ ಸಿ.ಹೆಂಜಾರಪ್ಪ ಮಾತನಾಡಿ ಹಿರಿಯೂರು ಟೌನ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಬೈಲಾ ಪ್ರಕಾರ ಪ್ರತಿ ತಿಂಗಳು ಸಭೆ ಮಾಡಬೇಕು, ಪ್ರತಿ ವರ್ಷ ವಾರ್ಷಿಕ ಸಭೆ ಮಾಡುವುದರ ಜೊತೆಯಲ್ಲಿ ಷೇರುದಾರರಿಗೆ ಗ್ರೂಪ್ ವಿಮೆ ಮಾಡಿ ಹಿತಕಾಯುವ ಕೆಲಸ ಮಾಡೋಣ ಎಂದು ಹೇಳಿದರು.
ಸಹಕಾರಿ ಕ್ಷೇತ್ರವು ರಾಜಕೀಯ ರಹಿತವಾಗಿ ಕಾರ್ಯ ನಿರ್ವಹಿಸಬೇಕು. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳೆಂದು ಭೇದ ಭಾವನದಿಂದ ನೋವುದು ಬೇಡ. ನಾವೆಲ್ಲ ರೈತರ ಪರವಾಗಿದ್ದು ಕೆಲಸ ಮಾಡೋಣ ಎಂದು ತಿಳಿಸಿದರು.