ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಿಜೆಪಿಯಲ್ಲಿ ಅಧ್ಯಕ್ಷ ಕುರ್ಚಿಗೆ ಇನ್ನಿಲ್ಲದ ಪೈಪೋಟಿ ಶುರುವಾಗಿದ್ದು, ಬಿವೈ ವಿಜಯೇಂದ್ರಗೆ ಠಕ್ಕರ್ ಕೊಡಲು ಬಸನಗೌಡ ಯತ್ನಾಳ್ ಟೀಮ್ ಸಜ್ಜಾಗಿದೆ! ಎಂದು ಕಾಂಗ್ರೆಸ್ ಟೀಕಿಸಿದೆ.
ವಿಜಯೇಂದ್ರ ಅಧ್ಯಕ್ಷ ಪಟ್ಟ ಅಲಂಕರಿಸಿದ ಕ್ಷಣದಿಯಲೇ ಕಮಲ ಪಾಳಯದಲ್ಲಿ ಕೊಂಕು ಮಾತನಾಡುವ ನಾಯಕರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಬಂದಿದೆ. ಈ ಅತೃಪ್ತರೆಲ್ಲರೂ ಒಟ್ಟಾಗಿ ಸೇರಿಕೊಂಡು ಯಡಿಯೂರಪ್ಪನವರ ಮಗನನ್ನು ಎಳಸು, ಬಚ್ಚಾ, ನಾಲಾಯಕ್ ಎಂದೆಲ್ಲಾ ಹೀಯಾಳಿಸಿ ಬಣ ಕಟ್ಟಿಕೊಂಡು ಅಧ್ಯಕ್ಷ ಕುರ್ಚಿಯನ್ನು ಅಲುಗಾಡಿಸುತ್ತಿದ್ದಾರೆ. ಇದರಲ್ಲಿ ಯತ್ನಾಳ್ ಬಣ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಕಾಂಗ್ರೆಸ್ ತಿಳಿಸಿದೆ.
ಒಡೆದ ಮನೆಯ ಯಜಮಾನಿಕೆಗಾಗಿನ ಕಚ್ಚಾಟದಲ್ಲಿ ಕಮಲದ ದಳಗಳು ಉದುರಿ ನೂರು ಭಾಗಗಳಾಗಿದ್ದು, ಅಧ್ಯಕ್ಷ ಚುನಾವಣೆಯಷ್ಟರಲ್ಲಿ ಮತ್ತಷ್ಟು ಮನೋರಂಜನೆ ಖಚಿತ! ಎಂದು ಕಾಂಗ್ರೆಸ್ ಭವಿಷ್ಯ ನುಡಿದಿದೆ.