ಉಗ್ರರ ದಾಳಿಯಲ್ಲಿ ಮೃತಪಟ್ಟವರಿಗೆ ಶ್ರದ್ಧಾಂಜಲಿ ಅರ್ಪಿಸಿದ ಪತ್ರಿಕಾ ವಿತರಕರು

News Desk

ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ಶಿವಮೊಗ್ಗದಲ್ಲಿ ನಡೆದ ಕರ್ನಾಟಕ ರಾಜ್ಯ ಪತ್ರಿಕಾ ವಿತರಕ ಒಕ್ಕೂಟ ಶಿವಮೊಗ್ಗ ಜಿಲ್ಲಾ ಘಟಕದ ಪೂರ್ವಭಾವಿ ಸಭೆಯಲ್ಲಿ ಕಾಶ್ಮೀರದ ಪಾಲ್ಗಾಂನಲ್ಲಿ ಶಿವಮೊಗ್ಗದ ಮಂಜುನಾಥ್ ಅವರ ಸೇರಿದಂತೆ ಮೃತಪಟ್ಟ ಎಲ್ಲರಿಗೂ ಸಂತಾಪ ಸೂಚಿಸಲಾಯಿತು.

ರಾಜ್ಯ ಸರ್ಕಾರ ನೀಡಿರುವ ಪ್ರಯೋಜನಗಳನ್ನು ಜಿಲ್ಲೆಯ ಎಲ್ಲಾ ಪತ್ರಿಕಾ ವಿತರಕರು ಪಡೆದುಕೊಳ್ಳಬೇಕೆಂದು ಕರೆ ನೀಡಲಾಯಿತು.

ಈ ಬಾರಿಯ ಐದನೆಯ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಸಮ್ಮೇಳನ ಆಗಸ್ಟ್-೨೮ ಮೈಸೂರಿನಲ್ಲಿ ನಡೆಯಲಿದ್ದು, ಎಲ್ಲರೂ ಭಾಗವಹಿಸಬೇಕೆಂದು ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ರಾಜ್ಯಾಧ್ಯಕ್ಷ ಕೆ.ಶಂಭುಲಿಂಗ ಅವರು ಕರೆ ನೀಡಿದರು.

ಇನ್ನು ಹೆಚ್ಚಿನ ಪ್ರಯೋಜನವನ್ನು ಮತ್ತು ಬೇಡಿಕೆಗಳನ್ನು ಈಡೇರಿಸುವಂತೆ ಪತ್ರಿಕಾ ವಿತರಕರ ಸಮ್ಮೇಳನದಲ್ಲಿ ಸರ್ಕಾರಕ್ಕೆ ಆಗ್ರಹಿಸಲಾಗುವುದು.

ಸಭೆಯಲ್ಲಿ ಶಿವಮೊಗ್ಗ ಜಿಲ್ಲಾಧ್ಯಕ್ಷರಾದ ಎನ್ , ಮಾಲತೇಶ್ ಪ್ರಧಾನಕಾರ್ಯದರ್ಶಿಗಳದ ಮುಕ್ತಾರ್ ಅಹಮದ್( ನಜೀರ್) ಉಪಾಧ್ಯಕ್ಷರುಗಳಾದ ರಾಮು , ಜಿ ನಾಗಭೂಷಣ್ ತೀರ್ಥಹಳ್ಳಿ ಸಂಘಟನಾ ಕಾರ್ಯದರ್ಶಿ ಶಿಕಾರಿಪುರ ಗಜೇಂದ್ರ, ಭದ್ರಾವತಿಯ ಪರಶುರಾಮ್ ರಾವ್, ನಿರ್ದೇಶಕರುಗಳಾದ ಮಹಮ್ಮದ್ ಅಜೀಜೆ ಉಲ್ಲಾ, ಪಾರ್ಥಿಬನ್, ಸದಸ್ಯರುಗಳಾದ ದುರ್ಘೋಜಿ, ರಾಜವರ್ಮ ಜೈನ್, ಪ್ರಶಾಂತ್, ಪ್ರಾಣೇಶ್, ಭದ್ರಾವತಿ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ್, ಉಪಾಧ್ಯಕ್ಷ ಸೋಮಶೇಖರ್, ಜಗದೀಶ್, ಶಿರಾಳಕೊಪ್ಪದ ರಾಘವೇಂದ್ರ ಮತ್ತು ಇನ್ನೂ ಇತರರು ಭಾಗವಹಿಸಿದ್ದರು.

 

 

Share This Article
error: Content is protected !!
";