ಮಿಷನ್ ಸುದರ್ಶನ್ ಘೋಷಣೆ, ಇದು ದೇಶ ರಕ್ಷಣೆ ಜೊತೆಗೆ ಶತ್ರುಗಳ ನಾಶ ಮಾಡಲಿದೆ ಎಂದ ಪ್ರಧಾನಿ ಮೋದಿ

News Desk

ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಪ್ರಧಾನಿ ನರೇಂದ್ರ ಮೋದಿ ಅವರು
79 ನೇ ಸ್ವಾತಂತ್ರ್ಯ ದಿನದಂದು ಕೆಂಪು ಕೋಟೆಯಲ್ಲಿ ನಿಂತು ದೇಶವನ್ನುದ್ದೇಶಿಸಿ ಮಾತನಾಡಿ ಭಾರತದ ಶತ್ರುಗಳಿಗೆ ಎಚ್ಚರಿಕೆ ನೀಡಿ ಮುಂಬರುವ 10 ವರ್ಷಗಳಲ್ಲಿ ದೇಶದ ವಾಯು ರಕ್ಷಣಾ ವ್ಯವಸ್ಥೆ ಹೇಗೆ ಬಲಪಡಿಸಲಾಗುವುದು ಎಂದು ಘೋಷಣೆ ಮಾಡಿದರು.

ನಾನು ಶ್ರೀಕೃಷ್ಣನ ಸುದರ್ಶನ ಚಕ್ರದಂತೆ ದೇಶಕ್ಕೆ ಭದ್ರತೆ ಒದಗಿಸಲು ಬಯಸುತ್ತೇನೆ. ಇದಕ್ಕಾಗಿ ನಾನು ಮಿಷನ್ ಸುದರ್ಶನ್ ಪ್ರಾರಂಭಿಸುವುದಾಗಿ ಘೋಷಿಸಿದರು. ಇದು ನವ ಭಾರತದ ರಕ್ಷಣಾ ವ್ಯವಸ್ಥೆಯಾಗಲಿದೆ. ಇದು ದೇಶವನ್ನು ರಕ್ಷಿಸುವುದಲ್ಲದೆ, ಶತ್ರುಗಳನ್ನು ನಾಶಮಾಡುತ್ತದೆ ಎಂದು ಹೇಳಿದರು.

- Advertisement - 

ಭಾರತ ದೇಶವು ಎಷ್ಟೇ ಸಮೃದ್ಧಿ ಹೊಂದಿದ್ದರೂ, ಭದ್ರತೆ ಇಲ್ಲದಿದ್ದರೆ ಅದು ಯಾವುದೇ ಮೌಲ್ಯ ಹೊಂದಿರುವುದಿಲ್ಲ. ಮುಂಬರುವ 10 ವರ್ಷಗಳಲ್ಲಿ, ಅಂದರೆ 2035ರ ವೇಳೆಗೆ, ಆಸ್ಪತ್ರೆಗಳು, ರೈಲ್ವೆಗಳು, ಧಾರ್ಮಿಕ ಕೇಂದ್ರಗಳಂತಹ ಕಾರ್ಯತಂತ್ರದ ಮತ್ತು ನಾಗರಿಕ ಪ್ರದೇಶಗಳನ್ನು ಒಳಗೊಂಡಂತೆ ದೇಶದ ಎಲ್ಲಾ ಪ್ರಮುಖ ಸ್ಥಳಗಳಿಗೆ ತಂತ್ರಜ್ಞಾನದ ಹೊಸ ವೇದಿಕೆಗಳ ಮೂಲಕ ಸಂಪೂರ್ಣ ಭದ್ರತಾ ರಕ್ಷಣೆ ನೀಡಲಾಗುವುದು ಎಂದು ಪ್ರಧಾನಮಂತ್ರಿ ಮೋದಿ ಹೇಳಿದರು.

ದೇಶದ ಪ್ರತಿಯೊಬ್ಬ ನಾಗರಿಕನು ಸುರಕ್ಷಿತನಾಗಿರಬೇಕು, ಯಾವುದೇ ರೀತಿಯ ತಂತ್ರಜ್ಞಾನ ಬಂದರೂ, ನಮ್ಮ ತಂತ್ರಜ್ಞಾನವು ಅದನ್ನು ಎದುರಿಸಲು ಸಾಧ್ಯವಾಗುತ್ತದೆ. ಅದಕ್ಕಾಗಿ ನಾವು ಶ್ರೀಕೃಷ್ಣನ ಸುದರ್ಶನ ಚಕ್ರದ ಮಾರ್ಗವನ್ನು ಆರಿಸಿಕೊಂಡಿದ್ದೇವೆ. ಮಹಾಭಾರತದ ಯುದ್ಧ ನಡೆಯುತ್ತಿರುವಾಗ, ಶ್ರೀಕೃಷ್ಣನು ತನ್ನ ಸುದರ್ಶನ ಚಕ್ರದಿಂದ ಸೂರ್ಯನ ಬೆಳಕನ್ನು ತಡೆದು ಹಗಲಿನಲ್ಲಿ ಕತ್ತಲೆ ಮಾಡಿದ್ದನು ಎಂದು ಮೋದಿ ಅವರು ಸ್ಮರಿಸಿದರು.

- Advertisement - 

ಆದ್ದರಿಂದ ಅರ್ಜುನನು ಜಯದ್ರತನನ್ನು ಕೊಲ್ಲುವ ತನ್ನ ಪ್ರತಿಜ್ಞೆ ಪೂರೈಸಲು ಸಾಧ್ಯವಾಯಿತು. ಅದಕ್ಕಾಗಿಯೇ ಅವನು ತನ್ನ ಪ್ರತಿಜ್ಞೆ ಪೂರೈಸಲು ಸಾಧ್ಯವಾಯಿತು, ಇದು ಸುದರ್ಶನ ಚಕ್ರದಿಂದ ಮಾತ್ರ ಸಾಧ್ಯವಾಯಿತು. ಈಗ ದೇಶವು ಮಿಷನ್ ಸುದರ್ಶನ ಚಕ್ರವನ್ನು ಪ್ರಾರಂಭಿಸುತ್ತದೆ ಎಂದು ತಿಳಿಸಿದರು. 

ಸುದರ್ಶನ ಚಕ್ರ ಎಂದರೇನು? ಇದು ಪ್ರಬಲವಾದ ಶಸ್ತ್ರಾಸ್ತ್ರ ವ್ಯವಸ್ಥೆ (ಭಾರತದಲ್ಲಿ ತಯಾರಿಸಿದ ವಾಯು ರಕ್ಷಣಾ ವ್ಯವಸ್ಥೆ), ಇದು ಶತ್ರುಗಳ ದಾಳಿಯನ್ನು ತಟಸ್ಥಗೊಳಿಸುವುದಲ್ಲದೆ, ಶತ್ರುಗಳ ಮೇಲೆ ಹಲವು ಪಟ್ಟು ವೇಗವಾಗಿ ಪ್ರತೀಕಾರ ತೀರಿಸುತ್ತದೆ. ಇದು ಶತ್ರುಗಳ ದಾಳಿಯನ್ನು ತಟಸ್ಥಗೊಳಿಸುವುದಲ್ಲದೆ, ಹಲವು ಪಟ್ಟು ವೇಗವಾಗಿ ಪ್ರತೀಕಾರ ತೀರಿಸುತ್ತದೆ ಎಂದು ಮೋದಿ ಅವರು ಹೇಳಿದರು.

 

 

Share This Article
error: Content is protected !!
";