ಪಾಕಿಸ್ತಾನದ ಉಗ್ರವಾದಕ್ಕೆ ಯಾವುದೇ ರಾಜಿಯಿಲ್ಲ-ಪ್ರಧಾನಿ ಮೋದಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪಾಕಿಸ್ತಾನದ ಭಯೋತ್ಪಾದನೆಯ ವಿರುದ್ಧ ಪ್ರತೀಕಾರಕ್ಕಿಳಿದಿರುವ ಭಾರತವನ್ನು ನಿಯಂತ್ರಿಸಲು ಪ್ರಯತ್ನಿಸಿದ ಅಮೇರಿಕ ದೇಶಕ್ಕೆ ಭಾರತ ಸ್ಪಷ್ಟ ತಿರುಗೇಟು ನೀಡಿದೆ.

ಆಪರೇಷನ್‌ಸಿಂಧೂರದ ಮೂಲಕ ಪಾಕಿಸ್ತಾನದ ಉಗ್ರವಾದವನ್ನು ಬಗ್ಗು ಬಡಿಯುತ್ತಿರುವ ಭಾರತ, ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಬೇಕು, ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಅಮೇರಿಕಾದ ಉಪಾಧ್ಯಕ್ಷರಿಗೆ ಪ್ರಧಾನಿ ಮೋದಿ ಸ್ಪಷ್ಟ ಮಾತುಗಳಲ್ಲಿ ಪಾಕಿಸ್ತಾನದ ಉಗ್ರವಾದಕ್ಕೆ ನಮ್ಮಲ್ಲಿ ಯಾವುದೇ ರಾಜಿಯಿಲ್ಲ ಎಂದು ಹೇಳಿದ್ದಾರೆ ಎಂದು ಬಿಜೆಪಿ ತಿಳಿಸಿದೆ.

ಪಾಕಿಸ್ತಾನದ ಜೊತೆ ಇನ್ನೇನೇ ಮಾತುಕತೆ ಇದ್ದರೂ ಅದು, ಪಾಕ್‌ಆಕ್ರಮಿತ ಕಾಶ್ಮೀರವನ್ನು ಭಾರತಕ್ಕೆ ಮರಳಿಸುವ ಕುರಿತು ಮಾತ್ರ ಎಂದು ಪ್ರಧಾನಿ ಕಟುವಾಗಿ ಹೇಳಿದ್ದಾರೆ. ಈ ಮೂಲಕ ಮುಂದಿನ ದಿನಗಳಲ್ಲಿ ಪಿಒಕೆ ನಮ್ಮದಾಗಲಿದೆ ಎನ್ನುವ ಸೂಚನೆಯನ್ನು ಪ್ರಧಾನಿಯವರು ರವಾನಿಸಿದ್ದಾರೆ ಎಂದು ಬಿಜೆಪಿ ತಿಳಿಸಿದೆ.

 

Share This Article
error: Content is protected !!
";