ನಮ್ಮ ಮೆಟ್ರೋ ಹಳದಿ ಮಾರ್ಗ ಉದ್ಘಾಟಿಸಿದ ಪ್ರಧಾನಿ ಮೋದಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನಮ್ಮ ಮೆಟ್ರೋ ಹಳದಿ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಆರ್.ವಿ.ರಸ್ತೆ (ರಾಗಿಗುಡ್ಡ) ನಿಲ್ದಾಣದಲ್ಲಿ ಉದ್ಘಾಟಿಸಿದರು.
ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಒಟ್ಟು 16 ನಿಲ್ದಾಣಗಳನ್ನು ಹೊಂದಿದೆ. ಒಟ್ಟಾರೆ 19 ಕಿ.ಮೀ ಉದ್ದ ಇದೆ.

ಮೋದಿ ಪ್ರಯಾಣ:
ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ಚಾಲನೆ ನೀಡಿದ ನಂತರ ಪ್ರಧಾನಿ ಮೋದಿ ಅವರು ರಾಗಿಗುಡ್ಡದಿಂದ ಎಲೆಕ್ಟ್ರಾನಿಕ್ಸ್ ಸಿಟಿವರೆಗೆ ಪ್ರಯಾಣಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ
, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಧಾನಿ ಜೊತೆಗಿದ್ದರು.

- Advertisement - 

ಪ್ರಯಾಣದ ವೇಳೆ ಪ್ರಧಾನಿ ಮೋದಿ ವಿದ್ಯಾರ್ಥಿಗಳು, ಮೆಟ್ರೋ ಸಿಬ್ಬಂದಿ ಮತ್ತು ಯೋಜನೆ ನಿರ್ಮಿಸಲು ಸಹಾಯ ಮಾಡಿದ ಕೆಲವು ಕಾರ್ಮಿಕರೊಂದಿಗೆ ಮೋದಿ ಅವರು ಮಾತುಕತೆ ನಡೆಸಿದರು.

ಹಳದಿ ಮಾರ್ಗವು ಲಕ್ಷಾಂತರ ಪ್ರಯಾಣಿಕರ ದೈನಂದಿನ ಪ್ರಯಾಣವನ್ನು ಸುಗಮಗೊಳಿಸುವುದಲ್ಲದೇ, ಪ್ರಮುಖ ವ್ಯಾಪಾರ ಮತ್ತು ತಂತ್ರಜ್ಞಾನ ಕೇಂದ್ರಗಳಿಗೆ ಸಂಪರ್ಕ ಸಾಧಿಸುವ ಮೂಲಕ ನಗರದ ಆರ್ಥಿಕ ಬೆಳವಣಿಗೆಗೆ ಕೊಡುಗೆ ನೀಡುತ್ತದೆ ಎಂದು ಮೋದಿ ಹೇಳಿದರು.

- Advertisement - 

ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ ಸಾರ್ವಜನಿಕ ಸಾರಿಗೆಗೆ ಇದು ಒಂದು ಮೈಲಿಗಲ್ಲು ಮತ್ತು ನಗರದ ಸಂಚಾರ ಸಮಸ್ಯೆ ಕಡಿಮೆ ಮಾಡುವಲ್ಲಿ ಪ್ರಮುಖ ಹೆಜ್ಜೆ ಎಂದು ತಿಳಿಸಿದರು.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ
, ಮೆಟ್ರೋ ಹಳದಿ ಮಾರ್ಗಕ್ಕೆ ರಾಜ್ಯ ಸರ್ಕಾರ ಯೋಜನಾ ವೆಚ್ಚದ ಶೇ.80ರಿಂದ 90ರಷ್ಟು ಭರಿಸಿದೆ. ಕೇಂದ್ರ ಸರ್ಕಾರದ ಕೊಡುಗೆ ತುಂಬಾ ಕಡಿಮೆ ಎಂದರು.

ಹಳದಿ ಮೆಟ್ರೋ ಮಾರ್ಗಕ್ಕೆ ಕಡಿಮೆ ಅನುದಾನ ನೀಡಿದ ಕೇಂದ್ರ ಸರ್ಕಾರ
ರಾಜ್ಯ ಸರ್ಕಾರವು ಹಳದಿ ಮೆಟ್ರೋ ಮಾರ್ಗಕ್ಕೆ ಶೇ.80ರಷ್ಟು ಖರ್ಚು ಮಾಡಿದ್ದರೆ
, ಕೇಂದ್ರ ಸರ್ಕಾರ ಶೇ.20 ರಷ್ಟು ಮಾತ್ರ ಖರ್ಚು ಮಾಡಿದೆ. ಕೆಲವೊಂದು ಕಡೆ ಶೇ.11 ರಷ್ಟು ಮಾತ್ರ ಖರ್ಚು ಮಾಡಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು‌.

ನಮ್ಮ ಮೆಟ್ರೋ ಹಳದಿ ಮಾರ್ಗವು ರಾಗಿಗುಡ್ಡದಿಂದ ಬೊಮ್ಮಸಂದ್ರಕ್ಕೆ ಸಂಪರ್ಕಿಸುತ್ತದೆ. ಬಿಟಿಎಂ ಲೇಔಟ್, ಜಯದೇವ ಆಸ್ಪತ್ರೆ (ಪಿಂಕ್ ಲೈನ್‌ಗೆ ಇಂಟರ್‌ಚೇಂಜ್‌), ಸೆಂಟ್ರಲ್ ಸಿಲ್ಕ್ ಬೋರ್ಡ್ (ಮುಂಬರುವ ಬ್ಲೂ ಲೈನ್‌ಗೆ ಇಂಟರ್‌ಚೇಂಜ್) ಮತ್ತು ಎಲೆಕ್ಟ್ರಾನಿಕ್ಸ್ ಸಿಟಿ ಮಾರ್ಗವಾಗಿ ರೈಲು ಸಂಚರಿಸುತ್ತದೆ. ಈ ಕಾರಿಡಾರ್ ಪ್ರಮುಖ ವಸತಿ ಪ್ರದೇಶಗಳು, ಕೈಗಾರಿಕಾ ವಲಯಗಳು ಮತ್ತು ಐಟಿ ಕೇಂದ್ರಗಳನ್ನು ಸಂಪರ್ಕಿಸುತ್ತದೆ.

8 ಲಕ್ಷ ಸಂಚಾರ-
ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಪ್ರತಿ ದಿನ ಸುಮಾರು ಎಂಟು ಲಕ್ಷ ಪ್ರಯಾಣಿಕರಿಗೆ ಸೇವೆ ನೀಡುವ ನಿರೀಕ್ಷೆಯಿದೆ. ನಮ್ಮ ಮೆಟ್ರೋದ 2ನೇ ಹಂತದ ಅಡಿ ನಿರ್ಮಿಸಲಾಗಿರುವ ಕಾಮಗಾರಿಗೆ 7,600 ಕೋಟಿಗೂ ಹೆಚ್ಚು ವೆಚ್ಚ ಖರ್ಚಾಗಿದೆ. ಈ ಮೆಟ್ರೋ ಯೋಜನೆಯಿಂದ ಹೊಸೂರು ರಸ್ತೆ
ವಿಶೇಷವಾಗಿ ಸಿಲ್ಕ್ ಬೋರ್ಡ್ ಜಂಕ್ಷನ್ ಮತ್ತು ಎಲೆಕ್ಟ್ರಾನಿಕ್ಸ್ ಸಿಟಿಯ ಸುತ್ತಲೂ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುತ್ತದೆ.

ಹಳದಿ ಮಾರ್ಗ ಉದ್ಘಾಟನೆಯಿಂದ ಬೆಂಗಳೂರಿನ ಮೆಟ್ರೋ ಜಾಲ 96 ಕಿ.ಮೀಗಿಂತ ಹೆಚ್ಚು ವಿಸ್ತರಿಸಿದೆ. ಇದು ದೇಶದ ಎರಡನೇ ಅತಿ ಉದ್ದದ ಮೆಟ್ರೋ ಜಾಲವಾಗಿದೆ.

ಸೋಮವಾರದಿಂದ ಲಭ್ಯ:
ಹಳದಿ ಮಾರ್ಗದ ಸೇವೆಗಳು ಆ.11ರ ಸೋಮವಾರ ಬೆಳಿಗ್ಗೆಯಿಂದ ಸಾರ್ವಜನಿಕರ ಸೇವೆಗೆ ಪ್ರಾರಂಭವಾಗಲಿದ್ದು
, ಆರಂಭದಲ್ಲಿ ಪ್ರತಿ 25 ನಿಮಿಷಗಳಿಗೊಮ್ಮೆ ರೈಲುಗಳು ಚಲಿಸುತ್ತವೆ.

ಮೆಟ್ರೋ 3ನೇ ಹಂತಕ್ಕೆ ಶಂಕು:
ಪ್ರಧಾನಿ ಮೋದಿ ಅವರು ಇದೇ ಕಾರ್ಯಕ್ರಮದಲ್ಲೇ ಮೆಟ್ರೋ ಯೋಜನೆಯ 3ನೇ ಹಂತಕ್ಕೆ ಶಂಕು ಸ್ಥಾಪನೆ ನೆರವೇರಿಸಿದರು.
15,600 ಕೋಟಿಗೂ ಹೆಚ್ಚು ವೆಚ್ಚದಲ್ಲಿ 44 ಕಿ.ಮೀಟರ್‌ಗಳಿಗೂ ಹೆಚ್ಚು ಉದ್ದದ ಹೊಸ ಮಾರ್ಗಗಳು ಮತ್ತು 31 ನಿಲ್ದಾಣಗಳನ್ನು ಸೇರಿಸಲಿದೆ. ಈ ವಿಸ್ತರಣೆಯು ನಗರದ ನೈಋತ್ಯ ಮತ್ತು ಪಶ್ಚಿಮ ಭಾಗಗಳಲ್ಲಿನ ಸೇವೆಯಿಲ್ಲದ ಪ್ರದೇಶಗಳನ್ನು ಸಂಪರ್ಕಿಸಲಿದೆ.

 

 

Share This Article
error: Content is protected !!
";