ಚಿನ್ನದ ಅರಮನೆ, ಚಿನ್ನದ ವಿಮಾನ ಸೇರಿದಂತೆ ವಿಶ್ವದ ಅತಿದೊಡ್ಡ ವಾಹನ ಸಂಗ್ರಹ ಹೊಂದಿರುವ ಬ್ರೂನಿ ಸುಲ್ತಾನ್ ಭೇಟಿಯಾದ ಪ್ರಧಾನಿ ಮೋದಿ

News Desk

ಚಂದ್ರವಳ್ಳಿ ನ್ಯೂಸ್, ದಕ್ಷಿಣ ಏಷ್ಯಾ:
ಪ್ರಧಾನಿ ಮೋದಿ ಬ್ರೂನೆಗೆ ಭೇಟಿ ನೀಡಿದ್ದು, ಅಲ್ಲಿನ ಭಾರತೀಯ ವಲಸಿಗರು ನರೇಂದ್ರ ಮೋದಿಯವರಿಗೆ ಅದ್ದೂರಿ ಸ್ವಾಗತ ನೀಡಿದ್ದಾರೆ. ಬ್ರೂನೆಯ ವಿವಿಧ ಪ್ರದೇಶಗಳಲ್ಲಿ ನೆಲೆಸಿರುವ ಭಾರತೀಯ ವಲಸಿಗರು ತಮ್ಮ ನಾಯಕನನ್ನು ಸ್ವಾಗತಿಸಲು ಒಗ್ಗಟ್ಟಾಗಿ ಸೇರಿದ್ದರು.

ಎರಡು ದಿನಗಳ ಬ್ರೂನೆ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಇಂದು ಅಲ್ಲಿ ಭಾರತೀಯ ವಲಸಿಗರು ಅದ್ದೂರಿಯಾಗಿ ಸ್ವಾಗತಿಸಿದರು. ಪ್ರಧಾನಿ ಮೋದಿ ಅವರು ಬ್ರೂನೆ ರಾಜಧಾನಿ ಬಂದರ್ ಸೆರಿ ಬೆಗವಾನ್‌ನಲ್ಲಿರುವ ಭವ್ಯ ಹೋಟೆಲ್‌ಗೆ ಆಗಮಿಸಿದರು. ಅಲ್ಲಿ ವಿವಿಧ ಪ್ರದೇಶಗಳ ಭಾರತೀಯ ವಲಸಿಗರು ತಮ್ಮ ನಾಯಕನನ್ನು ಸ್ವಾಗತಿಸಲು ಸೇರಿದ್ದರಿಂದ ಆ ಹೋಟೆಲ್‌ನಲ್ಲಿ ನಡೆದ ಸಭೆಯು ಸಾಂಸ್ಕೃತಿಕ ಹೆಮ್ಮೆ ಮತ್ತು ರಾಷ್ಟ್ರೀಯ ಮನೋಭಾವದ ರೋಮಾಂಚಕ ಪ್ರದರ್ಶನವನ್ನು ಕಂಡಿತು. ಅಲ್ಲಿ ಸೇರಿದ್ದ ಭಾರತೀಯರಿಗೆ ಹಸ್ತಲಾಘವ ಮಾಡಿ ಭಾರತೀಯ ವಲಸಿಗರೊಂದಿಗೆ ಮೋದಿ ಮಾತನಾಡಿದರು.

ಪ್ರಧಾನಿ ಮೋದಿಯನ್ನು ನೋಡಿ ಸಂತಸಗೊಂಡ ಮಕ್ಕಳು ಸೆಲ್ಫೀ ಕ್ಲಿಕ್ಕಿಸಿಕೊಂಡು, ಆಟೋಗ್ರಾಫ್ ಪಡೆದು ಖುಷಿ ಪಟ್ಟರು.
ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವದ ಶ್ರೀಮಂತ ಸುಲ್ತಾನ್ ಹಸ್ಸಾನಲ್ ಬೊಲ್ಕಿಯಾ ಅವರನ್ನು ಭೇಟಿಯಾಗಿದ್ದಾರೆ.
ಆ ದೇಶದಲ್ಲಿ
ಐಷಾರಾಮಿ ಜೀವನ ನಡೆಸುತ್ತಿರುವ ರೀತಿ ನಿಜವಾಗಿಯೂ ಆಶ್ಚರ್ಯಕರವಾಗಿದೆ.

ವಾಸ್ತವವಾಗಿ, ಅವರ ಅರಮನೆಯು ಸಾಕಷ್ಟು ಐಷಾರಾಮಿಯಾಗಿದ್ದು ಸಾವಿರಾರು ವಾಹನಗಳ ಸಂಗ್ರಹ ಹೊಂದಿದ್ದಾರೆ.ಪ್ರಧಾನಿ ನರೇಂದ್ರ ಮೋದಿ ಅವರು ಬ್ರೂನಿ ಆಗಮಿಸಿದ್ದಾರೆ. ಆಗ್ನೇಯ ಏಷ್ಯಾ ರಾಷ್ಟ್ರಕ್ಕೆ ಭಾರತೀಯ ಪ್ರಧಾನಿಯೊಬ್ಬರು ನೀಡಿದ ಮೊದಲ ಭೇಟಿ ಇದಾಗಿದೆ. ಎರಡು ದಿನಗಳ ಭೇಟಿಯು ಬ್ರೂನಿಯೊಂದಿಗೆ ಭಾರತದ ಬಾಂಧವ್ಯ ಬಲಪಡಿಸುವ ಗುರಿ ಹೊಂದಿದೆ ಮತ್ತು ಉಭಯ ದೇಶಗಳ ನಡುವಿನ 40 ವರ್ಷಗಳ ರಾಜತಾಂತ್ರಿಕ ಸಂಬಂಧಗಳನ್ನು ಸ್ಮರಿಸುತ್ತದೆ.

ಬ್ರೂನಿ ಸುಲ್ತಾನ್ ಯಾರು?ಬ್ರೂನಿಯ ಈ ಸುಲ್ತಾನನ ಹೆಸರು ಹಸ್ಸಾನಲ್ ಬೊಲ್ಕಿಯಾ. ವಿಶ್ವದ ಶ್ರೀಮಂತ ಜನರಲ್ಲಿ ಪರಿಗಣಿಸಲ್ಪಟ್ಟಿದ್ದಾರೆ. ಬ್ರೂನಿ 1984ರಲ್ಲಿ ಬ್ರಿಟನ್‌ನಿಂದ ಸ್ವಾತಂತ್ರ್ಯ ಪಡೆದಿತ್ತು.

ಸುಲ್ತಾನ್ ಒಮರ್ ಅಲಿ ಸೈಫುದ್ದೀನ್ 1967ರ ಅಕ್ಟೋಬರ್ 5ರಂದು ಬ್ರೂನಿ ರಾಜನಾದರು. ಈಗ ಹಸನಲ್ ಬೊಲ್ಕಿಯಾ ಅವರು ಸುಮಾರು 59 ವರ್ಷಗಳ ಕಾಲ ಚಕ್ರವರ್ತಿಯಾಗಿದ್ದಾರೆ.ಹಸನಲ್ ಬೊಲ್ಕಿಯಾ ಅವರು ತಮ್ಮ ಐಷಾರಾಮಿ ಜೀವನಕ್ಕಾಗಿ ಪ್ರಪಂಚದಾದ್ಯಂತ ಪ್ರಸಿದ್ಧರಾಗಿದ್ದಾರೆ. ಅವರ ಐಷಾರಾಮಿಗಳಲ್ಲಿ ಅತ್ಯಂತ ವಿಶೇಷವಾದದ್ದು ಅವರ ಅರಮನೆ ಹಲವಾರು ಎಕರೆಗಳಲ್ಲಿ ಹರಡಿಕೊಂಡಿದೆ. ಅವರು ಖಾಸಗಿ ವಿಮಾನ ಹೊಂದಿದ್ದು ಅದಕ್ಕೆ ಚಿನ್ನದ ತಗಡಿನ ಲೇಪನವಿದೆ.

ಬ್ರೂನಿ ಸುಲ್ತಾನ್ ವಿಶ್ವದ ಅತಿದೊಡ್ಡ ವಾಹನ ಸಂಗ್ರಹ ಹೊಂದಿದ್ದಾರೆ. ಸುಲ್ತಾನನ ಬಳಿ 30 ಬಿಲಿಯನ್ ಡಾಲರ್ ಮೌಲ್ಯದ ಆಸ್ತಿ ಇದೆ ಎಂದು ಹೇಳಲಾಗುತ್ತದೆ.ಅರಮನೆಯ ಅಚ್ಚರಿ-ಸುಲ್ತಾನ್ ಹಸನ್ ಅಲಿ 1980ರ ದಶಕದಲ್ಲಿ ವಿಶ್ವದ ಅತಿದೊಡ್ಡ ಅರಮನೆ ನಿರ್ಮಿಸಿದರು. ಅದರಲ್ಲಿ ಪ್ರಸ್ತುತ ಸುಲ್ತಾನ್ ಇಂದು ವಾಸಿಸುತ್ತಿದ್ದಾರೆ. ಈ ಅರಮನೆಯು 1,770 ಕೊಠಡಿಗಳು ಮತ್ತು ಸಭಾಂಗಣಗಳನ್ನು ಹೊಂದಿದೆ. ವಿಶ್ವದ ಅತಿದೊಡ್ಡ ಐಷಾರಾಮಿ ಕಾರ್ ಗ್ಯಾರೇಜ್ ಕೂಡ ಈ ಅರಮನೆಯಲ್ಲಿದೆ. ಈ ಅರಮನೆಯು ಎಷ್ಟು ಐಷಾರಾಮಿಯಾಗಿದೆ ಎಂದರೆ ಇಲ್ಲಿನ ಸುಲ್ತಾನರು ಪ್ರಪಂಚದಲ್ಲಿಯೇ ಅತ್ಯಂತ ಐಷಾರಾಮಿಯಾಗಿ ವಾಸಿಸುತ್ತಿದ್ದಾರೆ ಎಂದು ಹೇಳಲಾಗುತ್ತದೆ.

ಈ ಅರಮನೆಯು 2 ಮಿಲಿಯನ್ ಚದರ ಅಡಿಗಳಲ್ಲಿದೆ. ಈ ಅರಮನೆಯ ಗುಮ್ಮಟವನ್ನು 22 ಕ್ಯಾರೆಟ್ ಚಿನ್ನದಿಂದ ಅಲಂಕರಿಸಲಾಗಿದೆ. ಈ ಅರಮನೆಯ ಮೌಲ್ಯ 2,550 ಕೋಟಿ ರೂ.ಗೂ ಹೆಚ್ಚು ಎಂದು ಅಂದಾಜಿಸಲಾಗಿದೆ. ಆತನಿಗೆ ಚಿನ್ನದ ಮೇಲಿನ ಪ್ರೀತಿ ಎಷ್ಟಿತ್ತೆಂದರೆ ಮನೆಯಲ್ಲಿ ಚಿನ್ನದ ಬೇಸಿನ್ ಗಳಿದ್ದು, ಕಾರು, ವಿಮಾನದ ಮೇಲೂ ಚಿನ್ನ ಲೇಪಿಸಲಾಗಿದೆ. ಸುಲ್ತಾನನ ಖಾಸಗಿ ವಿಮಾನವೂ ಸಾಮಾನ್ಯ ವಿಮಾನವಲ್ಲ, ಇದನ್ನು ಹಾರುವ ಅರಮನೆ ಎಂದೂ ಕರೆಯುತ್ತಾರೆ.

ನಾವು ಅದನ್ನು ಒಳಗಿನಿಂದ ನೋಡಿದರೆ, ಅದು ಸಂಪೂರ್ಣವಾಗಿ ಹಳದಿ ಬಣ್ಣದಲ್ಲಿ ಕಾಣುತ್ತದೆ, ಏಕೆಂದರೆ ಅದರಲ್ಲಿ ಸಾಕಷ್ಟು ಚಿನ್ನ ಬಳಸಲಾಗಿದೆ.ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿಯ ಪ್ರಕಾರ, ಬೊಲ್ಕಿಯಾ ಅರಮನೆಯು 1700ಕ್ಕೂ ಹೆಚ್ಚು ಕೊಠಡಿಗಳಿದ್ದು 257 ವಾಶ್ ರೂಂಗಳನ್ನು ಹೊಂದಿದೆ. ವಾಹನಗಳಿಗಾಗಿ 110 ಗ್ಯಾರೇಜ್ಗಳನ್ನು ನಿರ್ಮಿಸಲಾಗಿದೆ. ಅರಮನೆಯ ಕೆಲವು ಗೋಡೆಗಳ ಮೇಲೆ ಚಿನ್ನವನ್ನು ಸಹ ಲೇಪಿಸಲಾಗಿದೆ. ಸುಲ್ತಾನ್ ಒಂದು ಸಲ ಕೂದಲನ್ನು ಕತ್ತರಿಸಲು 20 ಸಾವಿರ ಡಾಲರ್ ಅಂದರೆ 16 ಲಕ್ಷ ರೂಪಾಯಿ ಖರ್ಚು ಮಾಡುತ್ತಾರೆ.

ಏಕೆಂದರೆ ಹೇರ್ ಕಟಿಂಗ್ ತಜ್ಞರು ಲಂಡನ್‌ನಿಂದ ಬರುತ್ತಾರೆ.ಬ್ರೂನಿಯಲ್ಲಿ 80ರಷ್ಟು ಮುಸ್ಲಿಮರಿದ್ದಾರೆ. ಮುಸ್ಲಿಮ್ ಜನಸಂಖ್ಯೆಯ ಈ ಪ್ರಮಾಣವು ಇಂಡೋನೇಷ್ಯಾಕ್ಕಿಂತ ಕಡಿಮೆ ಇದೆ. ಸ್ವಾತಂತ್ರ್ಯದ ನಂತರ ಬ್ರೂನಿಯಲ್ಲಿ ವಿರೋಧಕ್ಕೆ ಅವಕಾಶವಿಲ್ಲ. ಅಂತಹ ಪ್ರಭಾವಶಾಲಿ ನಾಗರಿಕ ಸಮಾಜವೂ ಇಲ್ಲ. 1962ರಲ್ಲಿ ಘೋಷಿಸಲಾದ ತುರ್ತು ಪರಿಸ್ಥಿತಿ ಇನ್ನೂ ಅಲ್ಲಿ ಕಾರ್ಯನಿರ್ವಹಿಸುತ್ತಿದೆ.   

- Advertisement -  - Advertisement -  - Advertisement - 
Share This Article
error: Content is protected !!
";