ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸನ್ಮಾನ್ಯ ಟ್ರೋಲ್ ಮಿನಿಸ್ಟರ್ ಪ್ರಿಯಾಂಕ್ ಖರ್ಗೆ ಅವರೆ, ಸುಳ್ಳು ಹಾಗೂ ದ್ವೇಷವನ್ನೇ ಉಸಿರಾಗಿಸಿಕೊಂಡಿರುವ ನಿಮಗೆ, ನಿಮ್ಮ ಕಣ್ಣುಗಳು ಸಹ ಮೋಸ ಮಾಡುತ್ತಿವೆ!! ಎಂದು ಬಿಜೆಪಿ ವಾಗ್ದಾಳಿ ಮಾಡಿದೆ.
ನಾವು ಯಾವುದೇ ಟ್ವೀಟ್ ಅನ್ನು ಸಹ ಡಿಲೀಟ್ ಮಾಡಿಲ್ಲ, ಎಲ್ಲಾ ರೀತಿಯ ಭದ್ರತಾ ವ್ಯವಸ್ಥೆಗಳನ್ನು ಮಾಡಿಕೊಂಡು ಆರ್ಸಿಬಿ ಅಭಿಮಾನಿಗಳಿಗೆ ಸಂಭ್ರಮಾಚರಣೆಗೆ ಅವಕಾಶ ನೀಡಬೇಕಿತ್ತು ಎಂಬ ನಮ್ಮ ನಿಲುವಿಗೆ ಅಂದಿಗೂ ಬದ್ಧ ಇಂದಿಗೂ ಬದ್ಧ!!
ಟ್ವೀಟ್ ಲಿಂಕ್ ಇಲ್ಲಿದೆ – x.com/BJP4Karnataka/… ಅಂದ ಹಾಗೆ ಬಾಯಿಗೆ ಬಂದಂತೆ ಸುಳ್ಳು ಹೇಳಿ, ಬಳಿಕ ಕ್ಷಮೆ ಕೇಳಲು ಹಾಗೂ ಹೇಳಿಕೆ ಹಿಂಪಡೆಯಲು ನಾವು ಖರ್ಗೆ ಅವರಲ್ಲ!! ಎಂದು ಬಿಜೆಪಿ ವ್ಯಂಗ್ಯ ಮಾಡಿದೆ.