ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಹಿರಿಯ ಕನ್ನಡಪರ ಹೋರಾಟಗಾರ ಕನಕದಾಸ ರಸ್ತೆಯ ಸುಣ್ಣಕಲ್ಲು ವೆಂಕಟೇಶ್ (70) ವರ್ಷ ಇಂದು ಅವರ ನಿವಾಸದಲ್ಲಿ ನಿಧನರಾಗಿದ್ದಾರೆ.
ಅವರು ಪತ್ನಿ , ಒಬ್ಬ ಪುತ್ರಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ ಮೃತರ ಅಂತ್ಯಕ್ರಿಯೆ ಮಧ್ಯಾಹ್ನ 2 ಗಂಟೆಗೆ ಚಿಕ್ಕ ತುಮಕೂರು ರಸ್ತೆಯಲ್ಲಿರುವ ಮುಕ್ತಿ ಧಾಮದಲ್ಲಿ ನಡೆಯಿತು .
ಸುಣ್ಣಕಲ್ಲು ವೆಂಕಟೇಶ್ ಅವರು ಗೋಕಾಕ್ ಚಳವಳಿಯ ಮೂಲಕ ಹೋರಾಟಕ್ಕೆ ಧುಮುಕಿದ ಅವರು ಕನ್ನಡ ಚಳವಳಿ ಮತ್ತು ಸಾಮಾಜಿಕ ಚಳವಳಿಗಳಲ್ಲಿ ತೊಡಗಿಸಿಕೊಂಡವರು ವೇಣುಗೋಪಾಲಸ್ವಾಮಿ ಕನ್ನಡ ಸಂಘ, ಭುವನೇಶ್ವರಿ ಕನ್ನಡ ಸಂಘ, ಕನ್ನಡ ಜಾಗೃತ ಪರಿಷತ್ತು, ಕನ್ನಡ ಪಕ್ಷದ ಎಲ್ಲಾ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು ಕುಚ್ಚಪ್ಪನಪೇಟೆ ಮುತ್ಯಾಲಮ್ಮ ಸೇವಾ ಸಮಿತಿ ಸದಸ್ಯರಾಗಿ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿ ಕೊಂಡಿದ್ದರು.
ಸುಣ್ಣಕಲ್ಲು ವೆಂಕಟೇಶ್ ಅವರ ನಿಧನದಿಂದ ಕನ್ನಡ ಚಳವಳಿಗಾರ ರೊಬ್ಬರನ್ನು ಕಳಕೊಂಡಂತಾಗಿದೆ ಅವರ ಆತ್ಮಕ್ಕೆ ಶಾಂತಿ ಸಿಗಲಿ ಅವರ ಸಾವಿನ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬಕ್ಕೆ ನೀಡಲಿ ಎಂದು ವೇಣುಗೋಪಾಲಸ್ವಾಮಿ ಕನ್ನಡ ಸಂಘ,ಭುವನೇಶ್ವರಿ ಕನ್ನಡ ಸಂಘ, ಕನ್ನಡ ಜಾಗೃತ ಪರಿಷತ್ತು, ಕನ್ನಡ ಪಕ್ಷ ತೀವ್ರ ಸಂತಾಪ ವ್ಯಕ್ತಪಡಿಸಿವೆ.

