ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಬಡ ಕೂಲಿ ಕಾರ್ಮಿಕರ ಪಡಿತರ ಚೀಟಿ ರದ್ದು ಮಾಡಿರುವ ಹಾಗು ಸರ್ಕಾರಿ ಜಾಗ ಒತ್ತುವರಿ ಮಾಡಿ ಅಕ್ರಮ ಖಾತೆ ಮಾಡಿರುವುದನ್ನು ಖಂಡಿಸಿ ರಾಜ್ಯ ವಿಜಯ ಕರ್ನಾಟಕ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ ನೆಡೆಸಲಾಯಿತು.
ನಗರದ ತಾಲ್ಲೂಕು ಕಛೇರಿ ವೃತ್ತ ದಿಂದ ತಾಲ್ಲೂಕು ಕಛೇರಿಯ ವರೆವಿಗೂ ಮೆರವಣೆಗೆ ಮಾಡಿದ ರಾಜ್ಯ ವಿಜಯ ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕ ಘಟಕದ ವತಿಯಿಂದ ತಾಲ್ಲೂಕಿನಲ್ಲಿ ಇರುವ ಸಾಮಾನ್ಯ ಜನರ ಕೂಲಿ ಕಾರ್ಮಿಕರ ಜ್ವಲಂತ ಸಮಸ್ಯೆಗಳನ್ನು ಕೂಡಲೆ ಪರಿಹರಿಸಿ ಬೇಕೆಂದು ಒತ್ತಾಯಿಸಿ ಆಕ್ರೋಶ ವ್ಯಕ್ತ ಪಡಿಸಲಾಯಿತು.
ನಂತರ ರಾಜ್ಯ ವಿಜಯ ಕರ್ನಾಟಕ ರಕ್ಷಣಾ ವೇದಿಕೆಯ ಸಂಸ್ಥಾಪಕ ನಂಜಪ್ಪ ಮಾತನಾಡಿದ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಮಾಡಿರುವುದರಿಂದ ರಾಜ್ಯದ ಸಾಮಾನ್ಯ ಜನರಿಗೆ ಗೊಂದಲಕ್ಕೆ ಕಾರಣವಾಗಿದೆ.
ಕೂಲಿ ಕಾರ್ಮಿಕ ಬಡ ವರ್ಗದ ಜನರಿಗೆ ಪಡಿತರ ರದ್ದು ಪಡಿಸಿರುವುದು ಎಷ್ಟರಮಟ್ಟಿಗೆ ಸರಿ ಅ ದಿನ ಕೂಲಿ ಮಾಡಿ ಹೊಟ್ಟೆ ತುಂಬಿಸಿ ಕೊಳ್ಳುತ್ತಿರುವಂತಹವರು ಪಡಿತರ ಚೀಟಿ ರದ್ದು ಮಾಡಿ ಅದನ್ನು ಸರಿ ಪಡಿಸಿ ಎಂದು ಅಧಿಕಾರಿಗಳನ್ನು ಕೇಳಿದರೆ ನೀವು ಅದನ್ನ ಸರಿಪಡಿಸಲು ಇಲ್ಲಿ ಅಗುವುದಿಲ್ಲ ಬೆಂಗಳೂರಿಗೆ ಹೋಗಿ ಅಹಾರ ಇಲಾಖೆಗೆ ಅರ್ಜಿ ಸಲ್ಲಿಸಿ ಎಂದು ಉತ್ತರ ನೀಡುತ್ತಿರುವುದರಿಂದ ಕೂಲಿ ಮಾಡುವವರು ಎನು ಮಾಡಬೇಕೆ ಎಂದು ಕಂಗಾಲಾಗಿರುವ ನಿದಶನಗಳು ನೆಡೆಯುತ್ತಿದೆ ಎಂದು ಆಕ್ರೋಶ ಹೂರಹಾಕಿದರು.
ರಾಜ್ಯ ವಿಜಯ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಮಿಕ ಘಟಕದ ಅಧ್ಯಕ್ಷ ಹನುಮಂತರಡ್ಡಿ ಮಾತನಾಡಿ ಹತ್ತಾರು ವರ್ಷಗಳಿಂದ ತಾಲೂಕಿನಲ್ಲಿ ಸೂರಿಲ್ಲದೆ ಇರುವಂತಹ ವಸತಿ ಹೀನರಿಗೆ ವಸತಿ ಕಲ್ಪಿಸಬೇಕು, ತಾಲೂಕಿನಾದ್ಯಂತ ನಾಯಿಗಳ ಹಾವಳಿ ಹೆಚ್ಚಾಗಿದ್ದು ವಯೋವೃದ್ದರು ಹಾಗೂ ಮಕ್ಕಳನ್ನು ಮಾರಕವಾಗಿ ಕಚ್ಚಿ ಗಾಯಗೊಳಿಸಿದ ಹಲವು ಘಟನೆಗಳು ಸಂಭವಿಸಿವೆ
ಈ ಬಗ್ಗೆ ಪ್ರತಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ,ತಾಲೂಕು ಕಚೇರಿಯಲ್ಲಿ ಸಾರ್ವಜನಿಕರಿಗೆ ಪ್ರತಿನಿತ್ಯ ಸಿಗಬೇಕಾದ ಸೌಲಭ್ಯಗಳು ಸಿಗದೇ ಪ್ರತಿನಿತ್ಯ ಅಲೆದಾಡುವಂತಾಗಿದೆ,ಈ ರೀತಿಯ ವಿಳಂಬ ನೀತಿಯನ್ನು ತಪ್ಪಿಸಲು ಕ್ರಮಜರುಗಿಬೇಕು ಎಂದು ಎಚ್ಚರಿಕೆ ನೀಡಿದರು.
ನಂತರ ಮಾತನಾಡಿದ ಜಿಲ್ಲಾದ್ಯಕ್ಷ ಮಂಜುನಾಥ್ ಅವರು ತಾಲೂಕಿನ ಕಸಬಾ ಹೋಬಳಿ ಪಾಲನಜೋಗಹಳ್ಳಿ ಗ್ರಾಮದ ಸ.ನಂ. 21 ರಲ್ಲಿ 5 ಎಕರೆ 0.13ಗುಂಟೆ ಸರ್ಕಾರಿ ಜಾಗವನ್ನು ಅಕ್ರಮವಾಗಿ ಬಡಾವಣೆ ನಿರ್ಮಾಣ ಮಾಡಿ ಮಾರಾಟ ಮಾಡಿದ್ದರೂ ಸಹ ತಾಲೂಕು ಆಡಳಿತ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ಭೂಗಳ್ಳರಿಗೆ ಕುಮ್ಮಕ್ಕು ನೀಡಿದಂತೆ ಕಂದಾಯ ಇಲಾಖೆಯಲ್ಲಿ ಭ್ರಷ್ಟಚಾರ ತಾಂಡವವಾಡುತ್ತಿದೆ,
ಬಡಜನರಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸದ ಅಧಿಕಾರಿಗಳು ಶ್ರೀಮಂತರು ಹಾಗೂ ಭೂ ಮಾಫಿಯದವರಿಗೆ ಶೀಘ್ರಗತಿಯಲ್ಲಿ ಸ್ಪಂದಿಸಿ ಎಲ್ಲಾ ಕೆಲಸ ಮಾಡಿಕೊಡುತ್ತಾರೆ, ಅಕ್ರಮಕ್ಕೆ ಒಳಪಟ್ಟಿರುವ ಸರ್ಕಾರಿ ಜಾಗಕ್ಕೆ ಈ ಕೂಡಲೇ ಬೇಲಿ ಹಾಕಿ ಸರ್ಕಾರಿ ಜಾಗ ಎಂದು ನಾಮ ಫಲಕ ಹಾಕಬೇಕು ಎಂದು ಒತ್ತಾಯಿಸಿದರು.
ಸಾರ್ವಜನಿಕರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಲ್ಪಿಸದೆ ಇದ್ದಲ್ಲಿ ತಾಲೂಕು ಕಚೇರಿಗೆ ಬೀಗ ಹಾಕಿ ಬೃಹತ್ ಮಟ್ಟದ ಹೋರಾಟ ನಡೆಸಲಾಗುತ್ತದೆ ಎಂದರು.
ಈ ಪ್ರತಿಭಟನೆಯಲ್ಲಿ ಮುಖಂಡರಾದ ನಯಾಜ್ ಖಾನ್ ತಾ.ಅದ್ಯಕ್ಷ ಬಿ.ಪಿ.ಹರಿಕುಮಾರ್,ಮಹಿಳಾ ಘಟಕದ ಶಶಿಕಲಾ, ಕುಮುದ, ಇಫ್ತಾಖರ್ ಅಹಮದ್, ಪೀರ್ ಪಾಷಾ, ಕೃಷ್ಣ, ಮುನಿರಾಜಪ್ಪ, ಗಂಗರಾಜಪ್ಪ, ಅಶ್ವತ್, ರೇಷ್ಮಾ ಖಾನಂ, ಪದ್ಮಾವತಿ,ಸೌಮ್ಯ ಬಾಯಿ, ರಾಗಿಣಿ,ವಿನಯ್ ಪ್ರಸಾದ್, ಮುನಿಕೃಷ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.