ಚಂದ್ರವಳ್ಳಿ ನ್ಯೂಸ್, ತುಮಕೂರು:
ತುಮಕೂರು ಜಿಲ್ಲೆಯ ಭೋವಿ, ಬಂಜಾರ ಹಾಗೂ ಕೊರಮ–ಕೊರಚ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಪರಿಶಿಷ್ಟ ಜಾತಿಯ ಒಳಮೀಸಲಾತಿ ವಿಂಗಡಣೆಗೆ
ಸುಪ್ರೀಂ ಕೋರ್ಟ್ ಆದೇಶಿಸಿರುವ ತೀರ್ಪನ್ನೇ ನೆಪವಾಗಿರಿಸಿಕೊಂಡು ಅವೈಜ್ಞಾನಿಕ ಒಳ ಮೀಸಲಾತಿ ವಿಂಗಡಣೆಗೆ ಮುಂದಾಗಿರುವ ರಾಜ್ಯ ಸರ್ಕಾರದ ನೀತಿಯನ್ನು ವಿರೋಧಿಸಿ ಬೆಳಗಾವಿ ಸುವರ್ಣ ಸೌಧ ಚಲೋ ನಡೆಸಲಾಯಿತು.
ಭೋವಿ ಸಮಾಜದ ನಗರಾಧ್ಯಕ್ಷ ಶಿವಕುಮಾರ್, ಮುಖಂಡರಾದ ಮಂಜುನಾಥ್, ರಂಗನಾಥ್, ಭೂತೇಶ್ ಮತ್ತಿತರರು ಭಾಗವಹಿಸಿದ್ದರು.