ವಿವಿಧ ಬೇಡಿಕೆ ಈಡೇರಿಕೆಗಾಗಿ ನಿವೃತ್ತ ನೌಕರರ ಪ್ರತಿಭಟನೆ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಡಿ.ಸಿ.ಆರ್.ಜೆ. ಕಮ್ಯುಟೇಷನ್
, ಗಳಿಕೆ ರಜೆ ನಗದೀಕರಣದ ಮೊತ್ತವನ್ನು ಏಳನೆ ವೇತನ ಆಯೋಗದ ಅನುಸಾರ ನೀಡಲು ಪರಿಷ್ಕೃತ ಆದೇಶ ಹೊರಡಿಸುವಂತೆ ಕರ್ನಾಟಕ ನಿವೃತ್ತ ನೌಕರರ ವೇದಿಕೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ವೃತ್ತದಲ್ಲಿ ಮಂಗಳವಾರ ಒಂದು ದಿನದ ಧರಣಿ ನಡೆಸಲಾಯಿತು.

ದಿನಾಂಕ : ೧-೭-೨೦೨೨ ರಿಂದ ೩೧-೭-೨೦೨೪ ರ ಅವಧಿಯಲ್ಲಿ ನಿವೃತ್ತರಾದ ನೌಕರರು ಏಳನೆ ವೇತನ ಆಯೋಗದ ಅನುಸಾರ ನಿವೃತ್ತಿ ಆರ್ಥಿಕ ಸೌಲಭ್ಯದಿಂದ ವಂಚಿತರಾಗಿದ್ದು, ಆರನೇ ವೇತನ ಆಯೋಗದಂತೆ ನಿವೃತ್ತಿ ಸೌಲಭ್ಯ ದೊರಕುತ್ತಿದೆ.

ಡಿ.ಸಿ.ಆರ್.ಜಿ. ಕಮ್ಯುಟೇಷನ್, ಗಳಿಕೆ ರಜೆ ನಗದೀಕರಣದ ಮೊತ್ತವನ್ನು ಏಳನೆ ವೇತನ ಆಯೋಗದ ಲೆಕ್ಕಾಚಾರದಂತೆ ನೀಡುವಂತೆ ನಿವೃತ್ತ ನೌಕರರು ತಮ್ಮ ಬೇಡಿಕೆಗಳನ್ನು ರಾಜ್ಯ ಸರ್ಕಾರದ ಮುಂದಿಟ್ಟರು.

ಕರ್ನಾಟಕ ನಿವೃತ್ತ ನೌಕರರ ವೇದಿಕೆ ರಾಜ್ಯ ಸಂಚಾಲಕ ಹೆಚ್.ಗೋವಿಂದಯ್ಯ, ಜಿಲ್ಲಾ ಸಂಚಾಲಕರುಗಳಾದ ಡಿ.ಟಿ.ಜಗನ್ನಾಥ್, ಸುಗೇಂದ್ರನಾಯ್ಕ, ನಾಗರಾಜಪ್ಪ, ಪದ್ಮಾವತಿ, ಬಿ.ಕೆ.ಹನುಮಂತಪ್ಪ, ನೀಲಕಂಠಾಚಾರ್, ಡಿ.ದಯಾನಂದ, ರಮೇಶ್ ಮಧುರಿ ಸೇರಿದಂತೆ ನೂರಾರು ನಿವೃತ್ತ ನೌಕರರು ಧರಣಿಯಲ್ಲಿ ಪಾಲ್ಗೊಂಡಿದ್ದರು.

 

 

 

- Advertisement -  - Advertisement - 
Share This Article
error: Content is protected !!
";