ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಅನುದಾನಿತ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಡಿ.17ರಂದು ಬೆಳಗಾವಿಯಲ್ಲಿ ಅಖಿಲ ಕರ್ನಾಟಕ ಹಾಗೂ ಪಿಂಚಣಿ ವಂಚಿತ ರಾಜ್ಯ ಅನುದಾನಿತ ಶಾಲಾಕಾಲೇಜುಗಳ ನೌಕರರ ಸಂಘದ ನೇತೃತ್ವದಲ್ಲಿ ಬೃಹತ್ ಹೋರಾಟ ನಡೆಸಲಿದೆ ಎಂದು ಕ.ರಾ.ಅ.ನೌ ಸಂಘದ ಜಿಲ್ಲಾಧ್ಯಕ್ಷ ಜಿ.ಎಸ್.ತಿಪ್ಪೇಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯ ಸರಕಾರ ತಮ್ಮ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಹಳೆಯ ಪಿಂಚಣಿ ಯೋಜನೆ, ಆರೋಗ್ಯ ಸಂಜೀವಿನಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸರಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ರಾಜ್ಯ ಸಂಘ ಡಿ.17ರಂದು ಬೆಳಗಾವಿ ನಾಕಾ ಬಳಿ ಬೃಹತ್ ಹೋರಾಟ ನಡೆಸಲು ತೀರ್ಮಾನಿಸಿದ್ದ,
ಪ್ರಯುಕ್ತ ಜಿಲ್ಲೆಯ ಎಲ್ಲಾ ತಾಲೂಕಿನ ಅನುದಾನಿತ ಶಾಲಾಕಾಲೇಜುಗಳ ನೌಕರರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಸಂಘದ ಜಿಲ್ಲಾ ಪದಾಧಿಕಾರಿಗಳಾದ ಎಸ್.ಕೀರ್ತಿ ಕುಮಾರ್,
ಡಾ.ಮಹೇಶ್, ಜಿ.ಟಿ.ವೀರಭದ್ರಪ್ಪ, ಕೆಂಚವೀರಪ್ಪ, ಪ್ರಕಾಶ್ ಹೊಸದುರ್ಗ, ಮಂಜುನಾಥ್ ಹಿರಿಯೂರು, ನಾಗರಾಜ್ ಮತ್ತು ವೀರಣ್ಣ ಚಳ್ಳಕೆರೆ, ಓಭಣ್ಣ ಮೊಳಕಾಲ್ಮೂರು, ರಂಗಸ್ವಾಮಿ ಹೊಳಲ್ಕೆರೆ, ದುರ್ಗಪ್ಪ ಚಿತ್ರದುರ್ಗ ಮನವಿ ಮಾಡಿದ್ದಾರೆ.

