ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯ ಮರಡಿಹಳ್ಳಿ ಗೊಲ್ಲರಹಟ್ಟಿಯಲ್ಲಿ ಡಿ.25 ರಂದು ಮೌಡ್ಯಾಚರಣೆ ಪದ್ಧತಿ ವಿರುದ್ಧ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಲಿಂಗತಜ್ಞೆ ಗೀತಾ.ಡಿ ಮೌಢ್ಯಾಚರಣೆಯಿಂದ ಮಹಿಳೆಯರ ಮತ್ತು ಮಕ್ಕಳ ಮೇಲೆ ಆಗುವ ದೈಹಿಕವಾಗಿ ಮತ್ತು ಮಾನಸಿಕವಾಗಿ ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು.
ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯಗಳು ಕಂಡುಬಂದರೆ ಮಕ್ಕಳ ಸಹಾಯವಾಣಿ ಸಂಖ್ಯೆ 1098, ಮಹಿಳಾ ಸಹಾಯವಾಣಿ ಸಂಖ್ಯೆ 181 ಕರೆ ಮಾಡುವಂತೆ ಹೇಳಿದರು.
ಗ್ರಾಮದಲ್ಲಿ 2 ವರ್ಷಗಳಿಂದ ಮೌಢ್ಯಗಳನ್ನು ತೊರೆದು ವಾಸಿಸುತ್ತಿರುವುದಾಗಿ ಗ್ರಾಮದ ಮಹಿಳೆಯರು ಅಧಿಕಾರಿಗಳಿಗೆ ತಿಳಿಸಿದರು.
ಗ್ರಾ.ಪಂ.ಅಧ್ಯಕ್ಷೆ ಶಾರದಮ್ಮ, ಸದಸ್ಯೆ ಚಿತ್ತಮ್ಮ, ಎನ್.ಆರ್.ಎಲ್.ಎಂ. ಒಕ್ಕೂಟದ ಅಧ್ಯಕ್ಷೆ ಸರೋಜಾ, ಅಂಗನವಾಡಿ ಮೇಲ್ವಿಚಾರಕಿ ರೇಣುಕಾ, ಆಶಾ ಕಾರ್ಯಕರ್ತೆ ಭಾವನ ಶಾಲೆ ಮುಖ್ಯ ಶಿಕ್ಷಕ ತಿಮ್ಮಣ,
ಜಿಲ್ಲಾ ಮಿಷನ್ ಸಂಯೋಜಕ ವಿನಯ್.ಬಿ, ಊರಿನ ದೇವಸ್ಥಾನದ ಪೂಜಾರಿಗಳು ಮತ್ತು ಊರಿನ ಪಟೇಲರು ಹಾಗೂ ಗ್ರಾಮಸ್ಥರು ಅಂಗನವಾಡಿ ಕಾರ್ಯಕರ್ತರು ಗ್ರಾಮದ ಮಹಿಳೆಯರು ಹಾಜರಿದ್ದರು.