ಚಂದ್ರವಳ್ಳಿ ನ್ಯೂಸ್, ಹರಿಹರ:
ಹರಿಹರದ ಪ್ರಜ್ಞಾವಂತ ನಾಗರಿಕರು ತುಂಗಭಧ್ರ ನದಿ ತಟದ ಭಾಗಗಳನ್ನು ಸ್ವಚ್ಛಗೊಳಿಸುವಂತೆ ಒತ್ತಾಯಿಸಿ ಜಿಲ್ಲಾಡಳಿತ ಮತ್ತು ಸ್ಥಳೀಯ ಆಡಳಿತಕ್ಕೆ ಮನವಿಗಳಿಗೆ ಸ್ಪಂದಿಸದಿರುವುದರಿಂದ ಸಾರ್ವಜನಿಕರೇ ತುಂಗಭದ್ರಾ ನದಿ ತಟದ ಭಾಗವನ್ನು ಸ್ವಚ್ಛತೆ ಮಾಡಲು ಮುಂದಾಗಿದ್ದಾರೆ.
ಹರಿಹರ ಪಟ್ಟಣದ ನಿವಾಸಿಗಳು ತಮ್ಮೂರಿನ ಮೂಲಕ ಹಾದುಹೋಗುವ ನದಿಪಾತ್ರವನ್ನು ಪ್ರತಿವಾರ ಸ್ವಚ್ಛಗೊಳಿಸುವ ಪಣತೊಟ್ಟಿದ್ದಾರೆ.
ನಾಗರಿಕರ ತಂಡದವರು ಮಾಡುತ್ತಿರುವ ಉತ್ತಮ ಕೆಲಸಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿ ಇವರ ಕೆಲಸನ್ನು ಶ್ಲಾಘೀಸುತ್ತಿದ್ದಾರೆ.