ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ನಗರದ ತಾಲೂಕು ಕಚೇರಿ ಮುಂಭಾಗದಿಂದ ರೆಡ್ಡಿ ಹೋಟೆಲ್ ರವರಿಗೂ ತಗ್ಗು ಗುಂಡಿಗಳನ್ನು ಮುಚ್ಚುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ತಾಲೂಕು ಕಚೇರಿ ಸಮೀಪ ಇರುವ ವೇದಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಮೇಲೆ ಸೇರಿದಂತೆ ಇತರಡೆಗಳಲ್ಲಿ ಸಾಕಷ್ಟು ತಗ್ಗುಗುಂಡಿಗಳಿದ್ದು ವಾಹನ ಸವಾರರು ಗುಂಡುಗಳನ್ನು ತಪ್ಪಿಸಲು ಹೋಗಿ ಕಾಲು ಕೈ ಮುರಿದು ಕೊಳ್ಳುವುದುಕ್ಕೂ ಮುಂಚೆ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಗುಂಡಿಗಳನ್ನು ಮುಚ್ಚುವಂತೆ ವಿದ್ಯಾರ್ಥಿಗಳು, ನಾಗರಿಕರು, ಸಾರ್ವಜನಿಕರು ಸಂಬಂಧಿಸಿದ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.
ಕಣ್ಣಿಗೆ ಕಂಡರು ಕಾಣದೆ ಓಡಾಡುತ್ತಿರುವ ಅಧಿಕಾರಿಗಳು ನಿರ್ಲಕ್ಷ್ಯತನ ಎನ್ನಬಹುದಾಗಿದೆ. ಸಾರ್ವಜನಿಕ ಹಿತ ಕಾಪಾಡುವ ಅಧಿಕಾರಿ ವರ್ಗದವರು ಕಣ್ಣು ಮುಚ್ಚಿ ಕುಳಿತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ವೇದಾವತಿ ಸೇತುವೆ ಮೇಲೆ ರಾತ್ರಿ ಸಮಯದಲ್ಲಿ ಕತ್ತಲಾಗಿರುವುದರಿಂದ ವಿದ್ಯುತ್ ದೀಪಗಳನ್ನು ಅಳವಡಿಸುವಂತೆ ನಗರಸಭೆಯ ಪೌರಾಯುಕ್ತರಲ್ಲಿ ಮನವಿ ಮಾಡಿದ್ದಾರೆ.
ಶೀಘ್ರವೇ ಗುಂಡಿಗಳನ್ನು ಮುಚ್ಚಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನವು ಮಾಡಿಕೊಡುವಂತೆ ಸಂಬಂಧಿಸಿದ ಅಧಿಕಾರಿಗಳಲ್ಲಿ ಆಗ್ರಹ ಮಾಡಿದ್ದಾರೆ.

