ಶೌಚಾಲಯ ಸ್ವಚ್ಛತೆಗೆ ಸಾರ್ವಜನಿಕರು ಹೆಚ್ಚು ಆದ್ಯತೆ ನೀಡಬೇಕು: ಅಜಯ್ ಕುಮಾರ್

News Desk

ಚಂದ್ರವಳ್ಳಿ ನ್ಯೂಸ್ ಹಿರಿಯೂರು:
ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮದ ಅಂಗವಾಗಿ ಶೌಚಾಲಯ ಸ್ವಚ್ಛತೆಯ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಸಲವಾಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ವಿಶ್ವದಲ್ಲಿ 60.4 ಹೆಚ್ಚಿನ ಜನರು ಶೌಚಾಲಯ ಹೊಂದಿಲ್ಲ. ಬಯಲು ಶೌಚ ಮುಕ್ತ ಮಾಡಲು ಆಯಾ ದೇಶದ ಸರ್ಕಾರಗಳು ಹಲವಾರು ಯೋಜನೆಗಳ ರೂಪಿಸುವ ಮೂಲಕ ಬಯಲು ಶೌಚ ಮುಕ್ತ ಮಾಡಲು ಹೊರಟಿರುವ ಸರ್ಕಾರಗಳಿಗೆ ಸಾರ್ವಜನಿಕರ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಬೇಕೆಂದು ನಗರ ಸಭೆ ಅಧ್ಯಕ್ಷ ಅಜಯ್ ಕುಮಾರ್ ಹೇಳಿದರು.

ನಗರಸಭೆ ಪೌರಾಯುಕ್ತ ಎ.ವಾಸಿಂ ಮಾತನಾಡಿ ನಗರದ ಕೆಲವು ಭಾಗದಲ್ಲಿ ನಗರಸಭೆ ವತಿಯಿಂದ ನಿರ್ಮಿಸಿರುವ ಶೌಚಾಲಯವನ್ನು ಬಳಸುವಂತಹ ಸಾರ್ವಜನಿಕರು ಸ್ವಚ್ಛತೆ ಕಾಪಾಡಬೇಕು. ಸ್ವಚ್ಛತೆ ಇಲ್ಲದಿದ್ದರೆ ಸಂಕ್ರಾಮಿಕ ರೋಗಗಳು ಹರಡುತ್ತವೆ. ಇದನ್ನ ಅರಿತು ಸಾರ್ವಜನಿಕರು ಸ್ವಚ್ಛತೆಗೆ ಮುಂದಾಗಬೇಕು ಎಂದರು.

ನಗರಸಭೆ ಉಪಾಧ್ಯಕ್ಷೆ ಅಂಬಿಕಾ ಆರಾಧ್ಯ ಮಾತನಾಡಿ ಶೌಚಾಲಯಗಳ ಸ್ವಚ್ಛತೆ ಕಾಪಾಡಿಕೊಳ್ಳುವುದು ಸಾರ್ವಜನಿಕರಿಗೆ ಒಳ್ಳೆಯದು. ಶೌಚಾಲಯ ಸ್ವಚ್ಛತೆ ಇಲ್ಲದಿದ್ದರೆ ಸಂಕ್ರಾಮಿಕ ರೋಗಗಳು ಹರಡುತ್ತವೆ ಇದನ್ನು ಅರಿತು ಸಾರ್ವಜನಿಕರು ಮನೆಯಲ್ಲಾಗಲಿ ಸಾರ್ವಜನಿಕರ ಶೌಚಾಲಯವಾಗಲಿ ಸ್ವಚ್ಛತೆ ಕಾಪಾಡಿದರೆ ಯಾವುದೇ ರೋಗರುಜಿನಗಳು ಹರಡುವುದಿಲ್ಲ ಎಂದು ಹೇಳಿದರು.

“ನಗರದ ಬೈಪಾಸ್ ರಸ್ತೆಯಲ್ಲಿ ಕಸದ ರಾಶಿ ರಾಶಿ ಇದ್ದಿದ್ದನ್ನ ತೆಗೆದು ಸ್ವಚ್ಛ ಮಾಡಲು ಪೌರಕಾರ್ಮಿಕರು ಮುಂದಾಗಿದ್ದಾರೆ. ಬೈಪಾಸ್ ರಸ್ತೆಯಲ್ಲಿ ಓಡಾಡುವಾಗ ದುರ್ವಾಸನೆಯಿಂದ ಕೂಡಿದ್ದ ಕಸವನ್ನು ತೆಗೆದು ಸ್ವಚ್ಛಗೊಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಕಸವನ್ನು ಇಲ್ಲಿ ಹಾಕದಂತೆ ನೋಡಿಕೊಳ್ಳಬೇಕು.

ರಸ್ತೆಯಲ್ಲಿ ಓಡಾಡುವಾಗ ಸಾರ್ವಜನಿಕರು ಮೂಗು ಮುಚ್ಚಿ ಓಡಾಡುವ ಪರಿಸ್ಥಿತಿ ಬಂದಿತ್ತು. ಅದನ್ನು ಕಂಡ ನಗರಸಭೆ ಅಧ್ಯಕ್ಷ ಅಜಯ್ ಕುಮಾರ್ ಮುಂದೆ ನಿಂತು ಸ್ವಚ್ಛತೆ ಮಾಡಿಸುವ ಕಾರ್ಯ ಮಾಡಿದರು”. ಎ ವಾಸಿಂ, ಪೌರಾಯುಕ್ತರು, ನಗರಸಭೆ, ಹಿರಿಯೂರು.

ಈ ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯರಾದ ಅನಿಲ್ ಕುಮಾರ್ ಆರೋಗ್ಯ ನಿರೀಕ್ಷಕರಾದ ಸಂಧ್ಯಾ ಅಶೋಕ್ ಆಟೋ ಚಾಲಕರು ಪೌರಕಾರ್ಮಿಕರು ನಗರಸಭೆಯ ಸಿಬ್ಬಂದಿ ವರ್ಗದವರು ಇದ್ದರು.

- Advertisement -  - Advertisement -  - Advertisement - 
Share This Article
error: Content is protected !!
";