ಚಂದ್ರವಳ್ಳಿ ನ್ಯೂಸ್, ತುಮಕೂರು:
ಜಿಲ್ಲೆಯ ಕಂದಾಯ ಇಲಾಖೆಯಲ್ಲಿ ಖಾಲಿಯಿದ್ದ ಗ್ರಾಮ ಆಡಳಿತ ಅಧಿಕಾರಿಗಳ ನೇಮಕಾತಿಗೆ ಸಂಬಂಧಿಸಿದಂತೆ, ತೃತೀಯ ಲಿಂಗಿ (ಖಿಉ) ಮೀಸಲಾತಿಯಡಿ ೧:೩ ಅನುಪಾತದನ್ವಯ ಅರ್ಹ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸೂಚನಾ ಫಲಕ ಹಾಗೂ ಅಧಿಕೃತ ವೆಬ್‌ಸೈಟ್ www.tumkur.nic.in ನಲ್ಲಿ ಪ್ರಕಟಿಸಲಾಗಿದೆ.
ತಾತ್ಕಾಲಿಕ ಪಟ್ಟಿಯನುಸಾರ ತೃತೀಯ ಲಿಂಗಿ ಮೀಸಲಾತಿಯಡಿ ಪುಟ್ಟನರಸಮ್ಮ ಎನ್., ಹರ್ಷಿತ ಡಿ.ಹೆಚ್. ಹಾಗೂ ಆಶಾ ಎಸ್.ಎನ್. ಅವರು ಆಯ್ಕೆಯಾಗಿದ್ದು, ಆಯ್ಕೆಯಾಗಿರುವ ಅಭ್ಯರ್ಥಿಗಳು ಮಾತ್ರ ಮೇ ೧೯ರಂದು ಸಂಜೆ ೫:೩೦ರೊಳಗಾಗಿ ತಮ್ಮ ಪಿಯುಸಿ/
೧೨ನೇ ತರಗತಿ ಅಂಕಪಟ್ಟಿ ಹಾಗೂ ಮೀಸಲಾತಿಗೆ ಸಂಬಂಧಿಸಿದ ಮೂಲ ಪ್ರಮಾಣಪತ್ರಗಳೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿಗೆ ಪರಿಶೀಲನೆಗಾಗಿ ಹಾಜರಾಗಬೇಕೆಂದು ಗ್ರಾಮ ಆಡಳಿತಾಧಿಕಾರಿ ನೇಮಕಾತಿ ಆಯ್ಕೆ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದ್ದಾರೆ.