ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಕರುನಾಡು ಕಂಡ ಅತ್ಯುತ್ತಮ ನಟರಲ್ಲಿ ಒಬ್ಬರಾದ ಡಾ. ಪುನೀತ್ ರಾಜಕುಮಾರ್ ರವರ ನಾಲ್ಕನೇ ವರ್ಷದ ಪುಣ್ಯಸ್ಮರಣೆಯನ್ನು ಕಲಾವಿದರ ತಂಡ ನಿರ್ಗತಿಕ ಕಡು ಬಡವರಿಗೆ ಆಹಾರ ವಿತರಣೆ ಶಾಲಾ ಮಕ್ಕಳಿಗೆ ಅಗತ್ಯ ಕಲಿಕಾ ಪರಿಕರಗಳ ವಿತರಣೆ, ವಯೋವೃದ್ದರಿಗೆ ವಸ್ತ್ರ ವಿತರಣೆ ಮಾಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿದರು.
ತಾಲೂಕಿನ ದರ್ಗಾಜೋಗ ಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿರಂತರ ಅನ್ನದಾಸೋಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಲವಾರು ಬಡ ಕುಟುಂಬಗಳೊಂದಿಗೆ ವಿಶೇಷವಾಗಿ ಮಹಿಳಾ ಅಭಿಮಾನಿಗಳು ಡಾ. ಪುನೀತ್ ರಾಜಕುಮಾರ್ ಅವರ ಪುಣ್ಯಸ್ಮರಣೆ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಅಭಿಮಾನಿ ಮುನಿರತ್ನಮ್ಮ ಮಾತನಾಡಿ ತಮ್ಮ ಸೇವೆಗಳ ಮೂಲಕವೇ ಜೀವಂತವಾಗಿರುವ ಅತ್ಯುತ್ತಮ ಪುನೀತ್ ರಾಜಕುಮಾರ್ ರವರ ಪುಣ್ಯಸ್ಮರಣೆಯನ್ನು ಈ ಮುಖಾಂತರ ಮಾಡುತ್ತಿರುವುದು ಸಂತೃಪ್ತಿ ತಂದಿದೆ . ಇಂದು ನೋವಿನ ದಿನ ದೇವತಾ ಮನುಷ್ಯ ಪುನೀತ್ ರಾಜಕುಮಾರ್ ನಮ್ಮನೆಲ್ಲ ಅಗಲಿದ ದಿನ, ಇಂದು ಅವರ ಸವಿನೆನಪಿನಲ್ಲಿ ವಿಶೇಷ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಈ ನಮ್ಮ ಪ್ರಯತ್ನಕ್ಕೆ ಸಹಯೋಗ ನೀಡಿದ ಮಲ್ಲೇಶ್ ಮತ್ತು ತಂಡಕ್ಕೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಸಮಾಜ ಸೇವಕರಾದ ಸೇಲ್ವಮ್ ಮಾತನಾಡಿ ಕೇವಲ ನಟನೆಗೆ ಸೀಮಿತವಾಗದೆ ತಮ್ಮ ಉತ್ತಮ ಕಾರ್ಯಗಳಿಂದ ಅಭಿಮಾನಿಗಳಿಗೆ ದೈವ ಸ್ವರೂಪಿಗಳಾದ ಪುನೀತ್ ರಾಜಕುಮಾರ್ ರವರ ಪುಣ್ಯಸ್ಮರಣೆಯನ್ನು ನಾವೆಲ್ಲರೂ ಒಟ್ಟಾಗಿ ವಿಭಿನ್ನ ರೀತಿಯಲ್ಲಿ ಅರ್ಥಪೂರ್ಣವಾಗಿ ಆಚರಿಸುತ್ತಿದ್ದೇವೆ . ಅವರ ಸ್ಮರಣೆಯನ್ನು ಅನ್ನದಾಸೋಹ ಒಳಗೊಂಡಂತೆ ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡುವ ಮೂಲಕ ಆಚರಿಸುತ್ತಿದ್ದೇವೆ ಎಂದರು.
ಕಾರ್ಯಕ್ರಮದ ಆಯೋಜಕ ಮಲ್ಲೇಶ್ ಮಾತನಾಡಿ ಎಲ್ಲರಿಗೂ ಸ್ಪೂರ್ತಿ ಸಮಾಜ ಸೇವೆಗೆ ಮುನ್ನುಡಿ ಆದರ್ಶಪ್ರಾಯರಾದ ಪುನೀತ್ ರಾಜಕುಮಾರ್ ಅವರು ನಮ್ಮನ್ನು ಅಗಲಿ ಇಂದಿಗೆ ನಾಲ್ಕು ವರ್ಷಗಳು ಕಳೆದಿವೆ ಆದರೆ ಸಮಾಜಮುಖಿ ಕಾರ್ಯಗಳಲ್ಲಿ ಅವರು ಸದಾ ಜೀವಂತ ಇಂದು ನಮ್ಮ ಅನ್ನದಾಸೋಹ ಸಮಿತಿಯ ವೇದಿಕೆಯಲ್ಲಿ ಹತ್ತಾರು ಮಹಿಳಾ ಅಭಿಮಾನಿಗಳು ವಿವಿಧ ದಾಸೋಹಗಳನ್ನು ಮಾಡುವ ಮೂಲಕ ಅವರು ಸ್ಮರಿಸಿದ್ದಾರೆ . ಇಂತಹ ಕಾರ್ಯಗಳು ಅಪ್ಪು ಸದಾ ಅಮರ ಎಂದು ಕೂಗಿ ಹೇಳುತ್ತವೆ ಎಂದರು.
ಈ ಸಂದರ್ಭದಲ್ಲಿ ಗಾಯಕ ಮುನಿರತ್ನ, ಸಮಾಜ ಸೇವಕ ಸೆಲ್ವಂ, ಮುಖಂಡರಾದ ಚಂದ್ರಪ್ಪ, ಗೌರಮ್ಮ, ಪುಟ್ಟಗೌರಮ್ಮ, ಕವಿತಾ, ಚನ್ನಗಂಗಮ್ಮ, ಮಂಜುಳಾ, ಲಕ್ಷ್ಮೀ, ನೇತ್ರ ಸೇರಿದಂತೆ ಹಲವರು ಹಾಜರಿದ್ದರು.

