ಕೋಟ್ಯಾಂತರ ಜನರ ಹೃದಯ ಗೆದ್ದ ಪುನೀತ್

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಾಮರಾಜನಗರ:
ಪುನೀತ್ ರಾಜಕುಮಾರ್ ಕೋಟ್ಯಾಂತರ ಜನರ ಹೃದಯ ಗೆದ್ದ ಶ್ರೇಷ್ಠ ಮಾನವ ದೇವರು ಎಂದು ಸಂಸ್ಕೃತಿ ಚಿಂತಕ  ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ತಿಳಿಸಿದರು.

ಅವರು ಜೈ ಹಿಂದ್ ಕಟ್ಟೆಯಲ್ಲಿ ಜೈ ಹಿಂದ್ ಪ್ರತಿಷ್ಠಾನ ಹಾಗೂ ಋಗ್ವೇದಿ  ಯೂತ್ ಕ್ಲಬ್ ಹಮ್ಮಿಕೊಂಡಿದ್ದ ಪುನೀತ್ ರಾಜಕುಮಾರ್ ಅವರ 51ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಮಾತನಾಡುತ್ತ ಪುನೀತ್ ರಾಜಕುಮಾರ್ ಅವರು ಒಂದು ವ್ಯಕ್ತಿಯಲ್ಲ ಅದೊಂದು ದೊಡ್ಡ ಶಕ್ತಿ. ಶ್ರೇಷ್ಠ ಆತ್ಮ. ಕೋಟಿ ಕೋಟಿ ಜನರು ಪುನೀತ್ ರವರ ಹೆಸರನ್ನು ಹೇಳುವ ಮೂಲಕ ಅವರ ಆದರ್ಶಗಳನ್ನು ತಮ್ಮೊಳಗೆ ಬಿತ್ತಿಕೊಂಡು ಅವರಂತೆ ನೂರಾರು ಸನ್ಮಾರ್ಗದ ಕಾರ್ಯಗಳನ್ನು ಮಾಡುತ್ತಿರುವ ಅಭಿಮಾನಿಗಳು ನಿಜಕ್ಕೂ ಧನ್ಯರು.

- Advertisement - 

ಪುನೀತ್ ರಾಜಕುಮಾರ್ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಪೂರ್ಣ ಆಶೀರ್ವಾದವನ್ನು ಪಡೆದಿರುವ ಮಹಾವ್ಯಕ್ತಿ .ಹೃದಯ ಮನಸ್ಸುಗಳಲ್ಲಿ ಯಾವ ವ್ಯಕ್ತಿ ಸದಾ ಕಾಲ ಇರುತ್ತಾನೋ ಆತನೇ ಶ್ರೇಷ್ಠ. ಪುನೀತ್ ಇಂದಿಗೂ ಎಂದೆಂದಿಗೂ ಸದಾ ಕಾಲ ಜನರ ಹೃದಯದಲ್ಲಿ ಇದ್ದೇ ಇರುತ್ತಾರೆ .ಅವರ ಸೇವೆ ಅನವರತ ಅನನ್ಯ. ಅವರ ಸಮಾಜಮುಖಿ ಕಾರ್ಯಗಳು ಎಲ್ಲರಿಗೂ ಯೋಗ್ಯವಾದ ಮಹಾ ದಾರಿಯಾಗಿದೆ ಎಂದು ತಿಳಿಸಿದರು.

ಜೈ ಹಿಂದ್ ಪ್ರತಿಷ್ಠಾನದ ನಿರ್ದೇಶಕಿ ಕುಸುಮಾ  ಮಾತನಾಡಿ ಪ್ರತೀ ವ್ಯಕ್ತಿಗೂ ಅವರದೇ ಆದ ಗೌರವ ಸದಾ ಕಾಲ ಇರುತ್ತದೆ .ವ್ಯಕ್ತಿಗಳ ಕಾರ್ಯ, ಶ್ರದ್ಧೆ ,ಸಮಾಜದ ಚಿಂತನೆ ಸೇವೆ ಮನುಷ್ಯನನ್ನು ಮಹಾ ವ್ಯಕ್ತಿಯಾಗಿ ರೂಪಿಸುತ್ತದೆ. ಪುನೀತ್ ಸಮಾಜದ ಕಾರ್ಯದಲ್ಲಿ ಯಾರಿಗೂ ತಿಳಿಯದ ಹಾಗೆ ನೂರಾರು ಸೇವಾ ಕಾರ್ಯವನ್ನು ಮಾಡಿ ಇಂದಿಗೂ ಜೀವಂತವಾಗಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಶ್ರಾವ್ಯ, ರವಿ, ಆದರ್ಶ, ಸುಪ್ರೀತ್, ಸುನಿತಾ ಮುಂತಾದವರು ಇದ್ದರು.

- Advertisement - 

 

Share This Article
error: Content is protected !!
";