ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಸ್ವಚ್ಛತಾ ಇ ಸೇವಾ ಕಾರ್ಯಕ್ರಮದ ಅಡಿಯಲ್ಲಿ ಪ್ರತಿ ಶನಿವಾರ ನಗರಸಭೆ ವ್ಯಾಪ್ತಿಯಲ್ಲಿ ನಮ್ಮ ಚಿತ್ತ ಸ್ವಚ್ಛತೆಯತ್ತ ಕಾರ್ಯಕ್ರಮವನ್ನು ನಗರದ 100 ಫೀಟ್ ರಸ್ತೆಯಲ್ಲಿ ಇರುವ ಮರಗಳ ಟ್ರಿಮ್ಮಿಂಗ್ ಮಾಡಲಾಯಿತು.
ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುತ್ತಿದ್ದ ಮರದ ಕೊಂಬೆ, ವಾಹನ ಸಂಚಾರಕ್ಕೆ ಅಡಚಣೆ ಆಗುತ್ತಿದ್ದ ಮರಗಳ ಟ್ರಿಮ್ ಮಾಡಿ ಫುಟ್ ಪಾತ್ ಸ್ವಚ್ಛತೆ ಮಾಡಲಾಯಿತು.
ಮರದ ಕೊಂಬೆಗಳು ಸಾರ್ವಜನಿಕರಿಗೆ ಹಾಗೂ ವಾಹನಸವರರಿಗೆ ಓಡಾಡಿದರೆ ತಗಲುತ್ತಿದ್ದವು ನಗರಸಭೆ ಪೌರಕಾರ್ಮಿಕರು ಕೊಂಬೆಗಳನ್ನು ಟ್ರಿಮ್ ಮಾಡಲಾಯಿತು. ರಸ್ತೆಯಲ್ಲಿ ಸುರಕ್ಷಿತವಾಗಿ ಓಡಾಡಲು ವ್ಯವಸ್ಥೆ ಕಲ್ಪಿಸಲಾಯಿತು.
ಪೌರಕಾರ್ಮಿಕರು, ಕಾರ್ಮಿಕರು ಸ್ವಚ್ಛತೆಯಿಂದ ನಗರ ಸ್ವಚ್ಛವಾಗಿಡಲು ಸಾಧ್ಯ. ಪೌರಕಾರ್ಮಿಕರು ಸೇವೆ ಅತ್ಯಮೂಲ್ಯವಾದಿದ್ದು ಜನರ ಆರೋಗ್ಯ ಕಾಪಾಡಲು ಪೌರಕಾರ್ಮಿಕರ ಸ್ವಚ್ಛತೆ ಮಾಡುವುದರಿಂದ ನಗರದ ಜನತೆ ಆರೋಗ್ಯವಂತರಾಗಿರಲು ಸಾಧ್ಯ.

ಪೌರಕಾರ್ಮಿಕರು ಹಾಗೂ ಅವರ ಕುಟುಂಬಕ್ಕೆ ದೇವರು ದೇವರ ಕೃಪೆ ಇರಲಿ. ಪ್ರತಿ ಶನಿವಾರ ನಗರಸಭೆಯಿಂದ ಸ್ವಚ್ಛತಾ ಕಡೆ ಗಮನ ಹರಿಸುತ್ತಿದ್ದು ನಗರದಲ್ಲಿರುವ ಶಾಲೆ ಕಾಲೇಜು ವಿದ್ಯಾರ್ಥಿಗಳು ಸಂಘ ಸಂಸ್ಥೆಗಳು ಮಹಿಳಾ ಸಂಘಗಳು ಪೌರಕಾರ್ಮಿಕರ ಜೊತೆ ಕೈಜೋಡಿಸಿ ನಗರದ ಜನತೆಗೆ ಅರಿವು ಮೂಡಿಸುವಂತಹ ಕೆಲಸ ಸಂಘ ಸಂಸ್ಥೆಗಳು ಮಾಡಿದರೆ ಪೌರಕಾರ್ಮಿಕರಿಗೆ ಸಹಕರಿಸಿದಂತಾಗುತ್ತದೆ ಹಾಗೂ ನಗರವು ಸ್ವಚ್ಛವಾಗಿ ಇಡಲು ಸಾಧ್ಯವಾಗುತ್ತದೆ ಪೌರಾಯುಕ್ತ ಎ ವಾಸೀಂ ಎಂದರು.
ಈ ಸಂದರ್ಭದಲ್ಲಿ ಪೌರಾಯುಕ್ತ ಎ.ವಾಸೀಂ, ಹಿರಿಯ ಮತ್ತು ಕಿರಿಯ ಆರೋಗ್ಯ ನಿರೀಕ್ಷಕರುಗಳಾದ ಸುನೀಲ್ ಕುಮಾರ್, ಸಂಧ್ಯಾ ವೈ.ಎಸ್, ಅಶೋಕ್ ಕುಮಾರ್, ಮಹಾಲಿಂಗರಾಜು, ನಯಾಜ್ ಶರೀಫ್, ದಪ್ಪೇದಾರಗಳು ಹಾಗೂ ಪೌರಕಾರ್ಮಿಕರು, ವಾರ್ಡ್‌ನ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳು ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

