ಸ್ವಯಂಪ್ರೇರಿತ ಶ್ರಮದಾನದ ಮೂಲಕ ಸ್ವಚ್ಛತೆಗೆ ಆದ್ಯತೆ ನೀಡಿ-ಪೌರಾಯುಕ್ತ ವಾಸೀಂ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ನಗರಸಭೆ ವತಿಯಿಂದ ಪ್ರತಿ ಶನಿವಾರ ಸ್ವಚ್ಛತೆ ಇ-ಸೇವಾಯಡಿಯಲ್ಲಿ ನಮ್ಮ ಚಿತ್ತ ಸ್ವಚ್ಛತೆಯತ್ತ ಕಾರ್ಯಕ್ರಮ ದಡಿ ನಗರ ವ್ಯಾಪ್ತಿಯ ಕೇಂದ್ರ ಬಿಂದುವಾದ ಗಾಂಧಿ ವೃತ್ತದಲ್ಲಿರುವ ತಳ್ಳುವ ಗಾಡಿಗಳನ್ನು ಸ್ಥಳಾಂತರಿಸಿ ಬಸ್ ನಿಲ್ದಾಣ ಮತ್ತು ಸುತ್ತ ಮುತ್ತಲಿನ ಆವರಣವನ್ನು ಸ್ವಚ್ಛಗೊಳಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಸ್ವಚ್ಛತೆ ಮಾಡುವುದರ ಜೊತೆಗೆ ಮುಖ್ಯವಾಗಿ ಅಪಘಾತಗಳು ಸಂಬಂವಿಸುವ ಮುಂಜಾಗ್ರತ ಕ್ರಮವಾಗಿ ತಳ್ಳುವ ಗಾಡಿಗಳನ್ನು ಸ್ಥಳಾಂತರಗೊಳಿಸಿ ಸಾರ್ವಜನಿಕರು, ಬೈಕ್ ಸವಾರರು ಮತ್ತು ಭಾರಿ ಗಾತ್ರದ ವಾಹನಗಳು ಸುಗಮವಾಗಿ ಸಂಚರಿಸಲು ವ್ಯವಸ್ಥೆ ಕಲ್ಪಿಸಲಾಯಿತು.

ನಗರಸಭೆಯ ಪೌರಾಯುಕ್ತ ಎ.ವಾಸೀಂ ಮಾತನಾಡಿ ಸ್ವಚ್ಛತೆಯೇ ಸೇವೆ ಎಂಬುದು ಭಾರತ ಸರ್ಕಾರವು ಆಯೋಜಿಸುವ ಒಂದು ರಾಷ್ಟ್ರೀಯ ಅಭಿಯಾನವಾಗಿದೆ. ಇದರ ಮುಖ್ಯ ಉದ್ದೇಶ ಸ್ವಚ್ಛ ಭಾರತ ಮಿಷನ್‌ನ ಸಂಸ್ಕಾರ ಮತ್ತು ಸ್ವಭಾವವನ್ನು ಬಲಪಡಿಸುವುದಾಗಿದೆ ಎಂದು ತಿಳಿಸಿದರು.

- Advertisement - 

ಸಾಮೂಹಿಕ ಶ್ರಮದಾನ ಮತ್ತು ನಾಗರಿಕರ ಭಾಗವಹಿಸುವಿಕೆಯನ್ನು ಉತ್ತೇಜಿಸುವುದು ಮತ್ತು ಸಂಪೂರ್ಣ ಸ್ವಚ್ಛ ನಗರಗಳನ್ನು ನಿರ್ಮಿಸುವುದಾಗಿದೆ. ಈ ಅಭಿಯಾನವು ಕಸ ಮುಕ್ತ ಭಾರತದ ಗುರಿಯೊಂದಿಗೆ, ಸ್ವಚ್ಛತಾ ಗುರಿ ಘಟಕಗಳ ಪರಿವರ್ತನೆ ಮತ್ತು ಸಾರ್ವಜನಿಕ ಸ್ಥಳಗಳ ಸ್ವಚ್ಛತೆಯ ಮೇಲೆ ಕೇಂದ್ರೀಕರಿಸುತ್ತದೆ ಎಂದು ತಿಳಿಸಿದರು.

ಪ್ರತಿಯೊಬ್ಬರೂ ಸ್ವಯಂಪ್ರೇರಿತ ಶ್ರಮದಾನ ಚಟುವಟಿಕೆಗಳ ಮೂಲಕ ಸ್ವಚ್ಛತೆಯನ್ನು ಪ್ರೋತ್ಸಾಹಿಸುವ ಅಭಿಯಾನವಾಗಿದೆ. ಪ್ರತಿ ವಾರವು ವಿಭಿನ್ನ ವಿಷಯಗಳೊಂದಿಗೆ ನಡೆಯುತ್ತದೆ. “ಕಸ ಮುಕ್ತ ಭಾರತ”, “ಸ್ವಭಾವ ಸ್ವಚ್ಛತಾ, ಸಂಸ್ಕಾರ ಸ್ವಚ್ಛತಾ” ಕಾರ್ಯಗಳನ್ನು ಮಾಡಿಕೊಂಡು ಬರಲಾಗಿದೆ ಎಂದು ಪೌರಾಯುಕ್ತ ವಾಸೀಂ ಅವರು ತಿಳಿಸಿದರು.

- Advertisement - 

ಸಾರ್ವಜನಿಕ ಸ್ಥಳಗಳಾದ ಬಸ್ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳು, ಬೀಚ್‌ಗಳು ಮತ್ತು ನದಿಗಳಂತಹ ಸ್ಥಳಗಳನ್ನು ಸ್ವಚ್ಛಗೊಳಿಸುವುದಾಗಿದೆ.

ನಾಗರಿಕರು ಮತ್ತು ಅಧಿಕಾರಿಗಳು ವಿವಿಧ ಸ್ವಚ್ಛತಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಸ್ವಚ್ಛತೆಗಾಗಿ ಜನರನ್ನು ಒಟ್ಟುಗೂಡಿಸಿ ಸ್ವಚ್ಛ ಭಾರತದ ದೃಷ್ಟಿಯನ್ನು ನನಸಾಗಿಸುವ ಜನ-ಆಂದೋಲನವಾಗಿದೆ ಎಂದು ಪೌರಾಯುಕ್ತ ವಾಸೀಂ ಅವರು ತಿಳಿಸಿದರು.

ಹಿರಿಯ ಆರೋಗ್ಯ ನಿರೀಕ್ಷಕರಾದ ಹೆಚ್.ಟಿ ಸುನೀಲ್ ಕುಮಾರ್, ಸಂಧ್ಯಾ ವೈ.ಎಸ್ ಹಾಗೂ ಕಿರಿಯ ಆರೋಗ್ಯ ನಿರೀಕ್ಷಕರಾದ ಅಶೋಕ್ ಕುಮಾರ್.ಎಸ್ಮಹಾಲಿಂಗರಾಜು, ನಯಾಜ್ ಶರೀಫ್ ಮತ್ತು ದಫ್ಫೇದಾರ್ ಗಳು ಹಾಗೂ ಪೌರಕಾರ್ಮಿಕರು ಹಾಜರಿದ್ದು ಕಾರ್ಯಚರಣೆ ಯಶ್ವಸಿಗೊಳಿಸಿದರು.

Share This Article
error: Content is protected !!
";