ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಸಂಸತ್ ಭವನದಲ್ಲಿ ಸಂವಿದಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಲಘುವಾಗಿ ಟೀಕೆ ಮಾಡಿದ್ದನ್ನು ಖಂಡಿಸಿ ರಾಜಿನಾಮೆಗೆ ಒತ್ತಾಯಿಸಿ ಪ್ರಜಾ ವಿಮೋಚನ ಬಹುಜನ ಸಮಿತಿ ತಾಲ್ಲೂಕು ದಂಡಾಧಿಕಾರಿ ಶ್ರೀ ವಿದ್ಯಾ ವಿಭಾ ರಾಥೋಡ್ ಮುಖಾಂತರ ಮಾನ್ಯ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಪ್ರಜಾ ವಿಮೋಚನ ಬಹುಜನ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಚನ್ನಿಗರಾಯಪ್ಪ, ಲಕ್ಷ್ಮೀ ಶ್ರೀ ನಿವಾಸ್, ಮುತ್ತೂರು ಶ್ರೀನಿವಾಸ್, ಸೋಮಶೇಖರ್, ಎನ್ ನಾರಾಯಣಪ್ಪ, ವಾಜೀದ್ ಪಾಷಾ, ಸಾಧಿಕ್ ಪಾಷಾ, ನಾಗರಾಜ್, ಇಂದ್ರಮ್ಮ ಮತ್ತು ಪದಾಧಿಕಾರಿಗಳು ಇದ್ದರು.