ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಡಾ.ರಾಜಕುಮಾರ್ ಅವರು ಕನ್ನಡ ಸಿನಿಮಾ ರಂಗದಲ್ಲಿ ಮೇರು ನಟರಾಗಿದ್ದರು. ನಾಗರಿಕತೆಯ ಸಮಾಜದಲ್ಲಿ ಸತ್ಯ, ನ್ಯಾಯ, ವಿಶ್ವಾಸ, ಪ್ರಾಮಾಣಿಕತೆಯ ದುಡಿಮೆ ಇನ್ನು ಹಲವಾರು ವಿಷಯಗಳನ್ನು ಸಿನೆಮಾದಲ್ಲಿ ತರುವ ಮೂಲಕ ಡಾ.ರಾಜ್ ಅವರು ಸಾಮಾಜಿಕ ಬದಲಾವಣೆಗೆ ಕಾರಣೀಭೂತರಾಗಿ ಕಂಗೊಳಿಸಿದ್ದಾರೆ.
ಡಾ.ರಾಜಕುಮಾರ್ ಅಭಿನಯದಲ್ಲಿ ಸರಿಸುಮಾರು 200ಕ್ಕೂ ಹೆಚ್ಚು ಕನ್ನಡ ಚಿತ್ರಗಳು ತೆರೆಗೆ ಬಂದಿವೆ. ಆ ಎಲ್ಲಾ ಸಿನಿಮಾಗಳು ವಿವಿಧ ವಿಭಾಗಗಳಲ್ಲಿ ಜ್ಞಾನದ ಭಂಡಾರದ ವಿವರವನ್ನು ಜನರಿಗೆ ಮನಮುಟ್ಟುವಂತೆ ಮನದಟ್ಟು ಮಾಡಿವೆ. ಮನುಷ್ಯರ ವ್ಯಕ್ತಿತ್ವದ ಕೆಟ್ಟ ನಡುವಳಿಕೆಗಳಾದ ಮೋಸ, ಕಳ್ಳತನ, ನಂಬಿಕೆ ದ್ರೋಹ, ಸುಳ್ಳು ಸೇರಿದಂತೆ ಇನ್ನು ಕೆಲವು ಕೆಟ್ಟ ವಿಚಾರಗಳಲ್ಲಿ ಉತ್ತಮರಿಗೆ ತೊಂದರೆ ನೀಡಿದರೆ ಕೆಟ್ಟ ಮನಸ್ಥಿತಿಗೆ ತಡವಾಗಿಯಾದರೂ ಶಿಕ್ಷೆ ಕಟ್ಟಿಟ್ಟ ಬುತ್ತಿ ಎಂಬ ವಿಚಾರವನ್ನು ಜನರಿಗೆ ಮನಮುಟ್ಟುವಂತೆ ರಾಜಕುಮಾರ್ ಅಭಿನಯದ ಸಿನಿಮಾಗಳು ಮನವರಿಕೆ ಮಾಡಿಕೊಟ್ಟಿವೆ.
ಅದರಂತೆಯೇ ಮನುಷ್ಯರ ಉತ್ತಮ ನಡವಳಿಕೆಯಿಂದ ಸಮಾಜದಲ್ಲಿ ಗೌರವ, ನೆಮ್ಮದಿ, ಸ್ವಾಭಿಮಾನದಿಂದ ಬದುಕನ್ನು ಕಟ್ಟಿಕೊಂಡು ಮನುಷ್ಯರು ಉತ್ತಮ ಜೀವನವನ್ನು ಸಾರ್ಥಕತೆಗೊಳಿಸಿ ಮುಂದಿನ ಪೀಳಿಗೆಗೆ ಆದರ್ಶವಾಗಿಸಬಹುದು.
ಈ ನೀತಿ ಪಾಠವನ್ನು ರಾಜಕುಮಾರ್ ಸಿನಿಮಾಗಳು ಕನ್ನಡ ನಾಡಿನ ಜನತೆಗೆ ನೀಡಿವೆ. ಇದು ಕಥೆಯಲ್ಲ ಉತ್ತಮ ಸಮಾಜಕ್ಕೆ ಉತ್ತಮ ಸಂದೇಶವಾಗಿದೆ.
ಡಾ ರಾಜಕುಮಾರ್ ಅಭಿನಯದ ಸಿನಿಮಾಗಳನ್ನು ನೋಡಿದ ಸ್ವಾಭಿಮಾನದ ಕನ್ನಡಿಗರು ಆ ಸಿನಿಮಾಗಳ ಆದರ್ಶಗಳನ್ನು ಪಾಲಿಸಿಕೊಂಡು ಬದುಕಿರುವ ವಿಚಾರಗಳು ನಾಗರಿಕತೆಯ ಸಮಾಜದಲ್ಲಿ ಸಾಕಷ್ಟಿವೆ. ಇದಕ್ಕೆ ಸಾಕ್ಷಿ ಗುಡ್ಡೆಗಳಾಗಿ ಕೆಲವರ ವ್ಯಕ್ತಿತ್ವದ ಬೆಳವಣಿಗೆಯಲ್ಲಿ ನೋಡಿದ್ದೇನೆ. ಏನಾದರೂ ಹಾಗೂ ಮೊದಲು ಮಾನವನಾಗು.
ಲೇಖನ-ರಘು ಗೌಡ