ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಚಿತ್ರದುರ್ಗದ ಹೆಮ್ಮೆಯ ಪಾಳೆಯಗಾರ.
ಶ್ರೀ ರಾಜ ವೀರ ಮದಕರಿ ನಾಯಕರ ಜಯಂತಿಯ ಈ ದಿನದಂದು ಅವರಿಗೆ ಗೌರವದ ನಮನಗಳನ್ನು ಅರ್ಪಿಸಿ ಅವರ ವಿಚಾರಗಳನ್ನು ನೆನೆಯುತ್ತೇನೆ . ದುರ್ಗದ ಹುಲಿ ಗಂಡುಗಲಿ ಎಂಬ ಬಿರುದನ್ನು ಗಳಿಸಿದ್ದರು ಮದಕರಿನಾಯಕರು.
ಚಿತ್ರದುರ್ಗದ ಸಂಸ್ಥಾನದ ದೊರೆಗಳ ಇತಿಹಾಸ ಕರ್ನಾಟಕದ ಪಾರಂಪರಿಕ ಚರಿತ್ರೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಚಿತ್ರದುರ್ಗದ ಪಾಳೆಗಾರ ಆಳ್ವಿಕೆಯ ಕೊನೆಯ ದೊರೆ ರಾಜವೀರ ಮದಕರಿ ನಾಯಕ. ಈತನ ಆಳ್ವಿಕೆಯ ಇತಿಹಾಸದಲ್ಲಿ ಚಿಕ್ಕಮದಕರಿ, ಕೊನೇ ಮದಕರಿ, 5ನೇ ಮದಕರಿ, ವೀರಮದಕರಿ ಎಂದೆಲ್ಲಾ ಕರೆಯಲಾಗಿದೆ. ಭರಮಪ್ಪ ನಾಯಕನ ಎರಡನೇ ಮಗ ಮದಕರಿ ನಾಯಕ.
1754 ರ ಸಮಯದಲ್ಲಿ ಚಿತ್ರದುರ್ಗ ಪಾಳೆಗಾರ ಆಳ್ವಿಕೆಯಲ್ಲಿದ್ದ ಕಸ್ತೂರಿ ರಂಗಪ್ಪ ನಾಯಕ ಮರಣ ಹೊಂದಿದ ಸಂದರ್ಭದಲ್ಲಿ ಚಿತ್ರದುರ್ಗಕ್ಕೆ ಸಮೀಪ ಇರುವ ಜಾನಕಲ್ ಊರಿನಿಂದ ಮದಕರಿ ಎಂಬ ಬಾಲಕನನ್ನು ಕರೆತಂದು ದುರ್ಗದ ಕಲ್ಲಿನ ಕೋಟೆಯ ಸಾಮ್ರಾಜ್ಯಕ್ಕೆ ಪಟ್ಟಕಟ್ಟಿದ್ದಾರೆ ಎಂದು ಇತಿಹಾಸ ತಜ್ಞರ ಉಲ್ಲೇಖವಿದೆ. ಮದಕರಿಗೆ ಪಟ್ಟಾಭಿಷೇಕವಾದಗ ಕೇವಲ 12 ವರ್ಷದ ಬಾಲಕನಾಗಿದ್ದ.
ಮದಕರಿ ನಾಯಕ ತನ್ನ ಆಳ್ವಿಕೆ ಅವಧಿಯಲ್ಲಿ ಕೈಗೊಂಡ ಅನೇಕ ರಾಜಕೀಯ ನಿರ್ಣಯಗಳು ಚಿತ್ರದುರ್ಗ ಸಂಸ್ಥಾನದ ಕೀರ್ತಿಯನ್ನು ದಕ್ಷಿಣ ಭಾರತದಲ್ಲೆಲ್ಲ ಹರಡಲು ಕಾರಣವಾಗುತ್ತದೆ ಈ ವಿಚಾರದಿಂದ ಚಿತ್ರದುರ್ಗ ಸಂಸ್ಥಾನದ ಕೀರ್ತಿ ಹೆಚ್ಚು ಪ್ರವರ್ಧಮಾನಕ್ಕೆ ಬರಲು ಸಾಧ್ಯವಾಗಿದೆ.
ಪ್ರಮುಖವಾಗಿ ಶ್ರೀರಂಗಪಟ್ಟಣದ ನವಾಬರು ಮತ್ತು ಮರಾಠ ಪೇಶ್ವೆಗಳೊಡನೆ ಈ ನಾಯಕನು ಇಟ್ಟುಕೊಂಡಿದ್ದ ರಾಜಕೀಯ ಬಾಂಧವ್ಯ ಮತ್ತು ನಡೆಸಿದ ಹೋರಾಟಗಳು ಆತನ ರಾಜಕೀಯ ದೂರದೃಷ್ಟಿ ಹಾಗೂ ಶೌರ್ಯ-ಸಾಹಸಗಳನ್ನು ಪ್ರತಿಪಾದಿಸುತ್ತದೆ.
ಮದಕರಿನಾಯಕನ ಬಹುಕಾಲದ ಯುದ್ದಗಳು ಚಿತ್ರದುರ್ಗ ಸಂಸ್ಥಾನವನ್ನು ಬಲಪಡಿಸಲು ಯಶಸ್ಸು ಕಂಡಿದ್ದೆ ಚಿತ್ರದುರ್ಗ ಸಂಸ್ಥಾನದ ಆಡಳಿತವನ್ನು ಸುಭೀಕ್ಷೆಯಿಂದ್ದ ಇಟ್ಟುಕೊಳ್ಳಲು ವೀರ ಮದಕರಿಯ ನಾಯಕತ್ವದ ಗುಣಗಳು ಮಹತ್ವದ ಪಾತ್ರವಹಿಸಿದು ವಿಶೇಷವಾದುದು.
ಮದಕರಿನಾಯಕ ಸ್ವಾಭಿಮಾನಿಯಾಗಿ ಸಾಹಸಿಯಾಗೀ ಅವರ ನಿರ್ಭೀತಿಯ ನಾಯಕತ್ವದ ನಡೆಗಳು ದುರ್ಗದ ಮಣ್ಣಿಗೆ ಸಾಂಸ್ಕೃತಿಕ ಮಹತ್ವವನ್ನು ತಂದುಕೊಡುವಲ್ಲಿ ಯಶಸ್ವಿನ ಪಾತ್ರವಹಿಸಿದ್ದವು. ಮದಕರಿನಾಯಕರ ಸಾಮ್ರಾಜ್ಯದ ಆಡಳಿತದ ಅವಧಿಯಲ್ಲಿ ಕ್ರೀಡಾ ಕುಸ್ತಿಗೆ ಹೆಚ್ಚು ಪ್ರಾತಿನಿಧ್ಯ ನೀಡಿದರು ಈ ಅವಧಿಯಲ್ಲಿ ಕುಸ್ತಿಪಟುಗಳು ದುರ್ಗದ ಸಾಮ್ರಾಜ್ಯದಲ್ಲಿ ಹೆಚ್ಚಾಗಿ ಕಂಡುಬಂದಿದ್ದರು.
ಊರ ಉತ್ಸವದ ಮೆರವಣಿಗೆಯಲ್ಲಿ ಒಂದು ಆನೆಗೆ ಮಧವೇರಿ ಜನರ ಮೇಲೆ ನುಗ್ಗಿದ್ದ ಸಂದರ್ಭದಲ್ಲಿ ಆನೆಯ ಮಧವನ್ನು ಆಡಗಿಸಿದ್ದ ಕೀರ್ತಿ ಮದಕರಿನಾಯಕರ ಹೆಸರಿನಲ್ಲಿ ಅಚ್ಚಳಿಯದೆ ಉಳಿದಿದೆ.
ಹೈದರ್ ಹಾಲಿ ಕಣ್ಣು ದುರ್ಗದ ಮೇಲೆ ಬಿದ್ದು ಚಿತ್ರದುರ್ಗದ ಮೇಲೆ ದಂಡಯಾತ್ರೆ ಶುರುವಾಯಿತು. ನಾಲ್ಕು ಬಾರಿ ಹೈದರ್ ಅಲಿ ದುರ್ಗದ ಮೇಲೆ ಯುದ್ಧ ಮಾಡಿದರು.
ಕೊನೆಯ ಯುದ್ಧ 1779 ರ ಫೆಬ್ರುವರಿಯಲ್ಲಿ ಪ್ರಾರಂಭವಾಗಿ ನಾಲ್ಕು ತಿಂಗಳುಗಳ ಕಾಲ ನಡೆದ ಯುದ್ದದಲ್ಲಿ ಮೇ ತಿಂಗಳಲ್ಲಿ ದುರ್ಗದ ಹೋರಾಟ ಅಂತ್ಯವಾಯಿತು. ಮೇ15 ರಂದು ವೀರ ಮದಕರಿ ಸ್ವರ್ಗದಿನರಾದರು ಎಂಬ ವಿಚಾರದಲ್ಲಿ ಇತಿಹಾಸ ಬರಹಗಳ ಉಲ್ಲೇಖವಿದೆ. ಇದು ಕಥೆಯಲ್ಲ ಚಿತ್ರದುರ್ಗದ ಸಂಸ್ಕೃತಿಯ ಇತಿಹಾಸ.
ಲೇಖನ-ರಘು ಗೌಡ 9916101265