ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಸಮಾಜದಲ್ಲಿ ಆಳವಾಗಿ ಬೇರೂರಿದ್ದ ಮೂಡನಂಬಿಕೆ ಮತ್ತು ಗೊಡ್ಡು ಸಂಪ್ರದಾಯಗಳ ಬಗ್ಗೆ ಜಾಗೃತಿ ಮೂಡಿಸಲು ತ್ರಿಪದಿಕವಿ ಸರ್ವಜ್ಞ ತನ್ನ ವಚನಗಳ ಮೂಲಕವೇ ಜನರಜಾಗೃತಿ ಮೂಡಿಸಿದ ಮಹಾನ್ ವಚನಕಾರರು. ಸರ್ವಜ್ಞರ ವಚನಗಳಲ್ಲಿ ಸಂಪ್ರದಾಯ ಬದುಕಿನ ನೈಜಚಿತ್ರಣವನ್ನು ನಾವು ಕಾಣಬಹುದು ಎಂದು ಸಣ್ಣಕೈಗಾರಿಕೆ ಅಭಿವೃದ್ದಿಮಂಡಳಿ ಅಧ್ಯಕ್ಷ, ಶಾಸಕ ಟಿ.ರಘುಮೂರ್ತಿ ತಿಳಿಸಿದರು.
ಅವರು, ಗುರುವಾರ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತ್ರಿಪದಿಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮವನ್ನು ಸರ್ವಜ್ಞರ ಭಾವಚಿತ್ರಕ್ಕೆ ಪುಪ್ಪನಮನ ಸಲ್ಲಿಸಿ ಮಾತನಾಡಿದರು. ಕುಂಬಾರ ಸಮುದಾಯದ ಕಳೆದ ಹಲವಾರು ದಶಕಗಳಿಂದ ತನ್ನದೇಯಾದ ಉತ್ತಮ ಬದುಕು ರೂಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಮಣ್ಣಿನ ಮಡಿಕೆ, ಕುಡಿಕೆಗಳನ್ನು ತಯಾರಿಸಿ ಅದನ್ನು ಜನರಿಗೆ ವಿತರಿಸುವ ಮೂಲಕ ತನ್ನ ವೃತ್ತಿಯ ಘನತೆಯನ್ನು ಕಾಪಾಡಿಕೊಂಡಿದೆ. ಕುಂಬಾರ ಸಮುದಾಯದ ಬಗ್ಗೆ ಎಲ್ಲರಲ್ಲೂ ಹೆಚ್ಚು ವಿಶ್ವಾಸವಿದೆ ಎಂದರು.
ತಹಶೀಲ್ದಾರ್ ರೇಹಾನ್‌ಪಾಷ ಪ್ರಾಸ್ತಾವಿಕವಾಗಿ ಮಾತನಾಡಿ, ತ್ರಿಪದಿಕವಿ ಸರ್ವಜ್ಞ ಸಮಾಜದಲ್ಲಿ ಜಾಗೃತಿ ಮೂಡಿಸಲು ತನ್ನ ವಚನಗಳ ಮೂಲಕವೇ ಜನರಲ್ಲಿನ ಲೋಪದೋಷಗಳ ಬಗ್ಗೆ ಸ್ವಷ್ಟ ಚಿತ್ರಣ ನೀಡಿದ್ಧಾರೆ. ಸರ್ವಜ್ಞರ ವಚನಗಳಲ್ಲಿ ಮೌಲ್ಯಯುತ ಬದುಕಿನ ಚಿತ್ರಣವಿದೆ ಎಂದರು.
ನಗರಸಭೆ ಅಧ್ಯಕ್ಷೆ ಜೈತುಂಬಿ, ಉಪಾಧ್ಯಕ್ಷೆ ಸುಮ, ಸದಸ್ಯರಾದ ಕವಿತಾಬೋರಯ್ಯ, ರಮೇಶ್‌ಗೌಡ, ಇಒ ಶಶಿಧರ, ಕೆಡಿಪಿ ಸದಸ್ಯ ಸುರೇಶ್‌ಕುಮಾರ್, ಅಂಗಡಿರಮೇಶ್, ತಾಲ್ಲೂಕು ಕುಂಬಾರ ಸಂಘದ ಗೌರವಾಧ್ಯಕ್ಷ ತಿಪ್ಪೇಸ್ವಾಮಿ, ಕುಂಬಾರ ಸಂಘದ ಅಧ್ಯಕ್ಷ ಮುಸ್ಟೂರಪ್ಪ, ಗೋವಿಂದರಾಜು, ರಾಜಶೇಖರಪ್ಪ, ತಿಪ್ಪೇರುದ್ರಪ್ಪ, ಕೆ.ಟಿ.ಶ್ರೀನಿವಾಸ್‌ಮೂರ್ತಿ, ಎಚ್.ತಿಪ್ಪೇಸ್ವಾಮಿ, ಮಂಜುನಾಥ, ಕೆ.ಜಿ.ಸಣ್ಣಪ್ಪ ಮುಂತಾದವರು ಉಪಸ್ಥಿತರಿದ್ದರು.