ಶ್ರೀಕಾಟಂಲಿಂಗೇಶ್ವರಸ್ವಾಮಿ ದೇವರ ಗುಗ್ಗರಿ ಹಬ್ಬದಲ್ಲಿ ಪಾಲ್ಗೊಂಡ ಶಾಸಕ ರಘುಮೂರ್ತಿ

News Desk

ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಕಳೆದ ನೂರಾರು ವರ್ಷಗಳಿಂದ ಕಾಟಪ್ಪನಹಟ್ಟಿಯಲ್ಲಿ ನೆಲೆಸಿರುವ ಶ್ರೀಕಾಂಟಲಿಂಗೇಶ್ವರಸ್ವಾಮಿಯ ಗುಗ್ಗರಿಹಬ್ಬದ ಹಿನ್ನೆಲೆಯಲ್ಲಿ ತಾಲ್ಲೂಕಿನ ವಡೇರಹಳ್ಳಿ ಗ್ರಾಮಕ್ಕೆ ಆಗಮಿಸಿದ್ದ ಶ್ರೀಕಾಟಂಲಿಂಗೇಶ್ವರಸ್ವಾಮಿ ದೇವರ ಗುಗ್ಗರಿ ಹಬ್ಬದಲ್ಲಿ ಶಾಸಕ, ಸಣ್ಣಕೈಗಾರಿಕೆ ಅಭಿವೃದ್ದಿಮಂಡಳಿ ಅಧ್ಯಕ್ಷ ಟಿ.ರಘುಮೂರ್ತಿ ಭಾಗವಹಿಸಿದ್ದರು.

ಕಾಟಪ್ಪನಹಟ್ಟಿಯಲ್ಲಿ ನೆಲೆಸಿರುವ ಕಾಟಂಲಿಂಗೇಶ್ವರಸ್ವಾಮಿ ದೇವರಿಗೆ ವಿಶೇಷ ಮಹತ್ವವಿದೆ. ಚಿತ್ರದುರ್ಗದ ಅರಸ ವೀರಮದಕರಿನಾಯಕ ಆರಾಧ್ಯ ಕುಲದೈವವಾದ ಕಾಟಂಲಿಂಗೇಶ್ವರಸ್ವಾಮಿ ಭಕ್ತರ ಬೇಡಿಕೆಗಳನ್ನು ಈಡೇರಿಸುತ್ತಿದ್ಧಾನೆ. ಶ್ರೀಕಾಟಂಲಿಂಗೇಶ್ವರಸ್ವಾಮಿ ಮೂಲಹೆಸರು ಕಾಟಪ್ಪ ಇದ್ದು, ಕಾಟಪ್ಪನಹಟ್ಟಿಯಲ್ಲೇ ನೆಲೆಸಿದ್ದು, ಪ್ರತಿವರ್ಷವೂ ಶ್ರೀಸ್ವಾಮಿಯ ಪೂಜಾ ಕಾರ್ಯಕ್ರಮಗಳು ಸಂಪ್ರದಾಯ ಮತ್ತು ಪದ್ದತಿಯಂತೆ ಆಚರಣೆ ಮಾಡಿಕೊಂಡು ಬಂದಿದ್ಧಾರೆ.

ವಾಲ್ಮೀಕಿ ಸಮುದಾಯದ ಕಾಮಗೇತಿ ವಂಶಸ್ಥರ ೯ ಜನರ ಅಣ್ಣತಮ್ಮಂದಿರ ಆರಾಧ್ಯದೈವ ಶ್ರೀಕಾಟಂಲಿಂಗೇಶ್ವರಸ್ವಾಮಿ ವಿಶೇಷವೆಂದರೆ ಕಾಟಪ್ಪನಹಟ್ಟಿಯಲ್ಲಿ ನೆಲೆಸಿದ್ದ ದೊಡ್ಡಮದಕರಿ ನಾಯಕರು ಶ್ರೀಸ್ವಾಮಿಯ ಪೂಜಾ ಕಾರ್ಯಕ್ರಮಗಳಿಗೆ ಅಂದಿನಿಂದ ಚಾಲನೆ ನೀಡಿದ್ದು, ಇಂದಿಗೂ ಸಹ ಈ ಪೂಜಾಕಾರ್ಯವನ್ನು ಭಕ್ತರು ಯಶಸ್ವಿಯಾಗಿ ನಡೆಸುತ್ತಿದ್ಧಾರೆ.

ಯಜಮಾನ ನಿರಂಜನನಾಯಕ, ಡಿ.ಕೆ.ಕಾಟಯ್ಯ, ಎಂ.ಎಸ್.ಜಗದೀಶ್‌ನಾಯಕ, ಪ್ರಭಾಕರ, ಎಸ್.ಕೆ.ಕಾಟಂಲಿಂಗಯ್ಯ, ಡಿ.ಕೆ.ಕಾಟಯ್ಯ, ಕೆ.ಟಿ.ಕುಮಾರಸ್ವಾಮಿ, ಈಶ್ವರನಾಯಕ, ಬೈಯಣ್ಣ, ಕಿಲಾರಿಪ್ರಕಾಶ್ ಮುಂತಾದವರು ಶ್ರೀಸ್ವಾಮಿಯ ಸೇವೆಯನ್ನು ಮುಂದುವರೆಸಿಕೊಂಡು ಬಂದಿದ್ಧಾರೆ. ಪ್ರಾರಂಭದಲ್ಲಿ ನಿಡಗಲ್‌ನ ರಾಮತೀರ್ಥದಲ್ಲಿ ಗಂಗಾಪೂಜೆಯನ್ನು ನೇರವೇರಿಸುತ್ತಿದ್ದರು ಎಂದರು. ಕಾರ್ಯಕ್ರಮದಲ್ಲಿ ದಳವಾಯಿಮೂರ್ತಿ, ಸಿಪಾಯಿಮಂಜುನಾಥ, ಮಹಾಂತೇಶ್, ಸಣ್ಣೀರಪ್ಪ, ಮಧು, ನಾಗರಾಜ  ಮುಂತಾದವರು ಪಾಲ್ಗೊಂಡಿದ್ದರು.

Share This Article
error: Content is protected !!
";