ನಿಮೋನಿಯಾ ಕಾಯಿಲೆದಿಂದ ಮರಣ ಹೊಂದಿದ್ದ ರಘು ಕುಟುಂಬಕ್ಕೆ ಧನ ಸಹಾಯ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ರಘು ಎಂಬುವರು ಇತ್ತಿಚೀಗೆ ನ್ಯೊಮೋನಿಯ ಕಾಯಿಲೆಗೆ ಒಳಗಾಗಿ
  ಅಕಾಲಿಕ ಮರಣ ಹೊಂದಿದ್ದು  ಅವರ ಕುಟುಂಬಕ್ಕೆ ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್ ಹೆಚ್.ವಿ ಧನ ಸಹಾಯ ಮಾಡುವ ಮೂಲಕ  ಸಾಂತ್ವನ ಹೇಳಿದರು.

  ನಗರದ  ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಪಡೆದು ಕುಟುಂಬದ ಜವಾಬ್ಧಾರಿ ಹೊತ್ತು ಕುಟುಂಬಕ್ಕೆ ಆಸರೆಯಾಗಿದ್ದ ರಘು ನುಮೋನಿಯ ತೊಂದರೆಯಿಂದ ಅಕಾಲಿಕ ಮರಣ ಹೊಂದಿದ್ದು,ಇಂದು ಅವರ ತಾಯಿಯವರಾದ ರತ್ನಮ್ಮ ರವರಿಗೆ ಧನ ಸಹಾಯ ಮಾಡಿ ಕುಟುಂಬಕ್ಕೆ ಸಾಂತ್ವಾನ ಹೇಳುವ ಮೂಲಕ ಅವರ ನೋವಿನಲ್ಲಿ ಭಾಗಿಯಾದರು.

  ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಸದಾಶಿವ ರಾಮಚಂದ್ರ ಗೌಡ,ಕಾಲೇಜಿನ ಪ್ರಾದ್ಯಾಪಕರಾದ ಶ್ರೀನಿವಾಸ್,ಸಂಘದ ಖಜಾಂಜಿ ಮಹೇಶ್,ಸಂಘದ ನಿರ್ದೇಶಕರಾದ ನಾಗರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

 

Share This Article
error: Content is protected !!
";