ಚಂದ್ರವಳ್ಳಿ ನ್ಯೂಸ್, ದಾವಣಗೆರೆ :
ದಾವಣಗೆರೆ ನಗರದ ಪೆಟ್ ಲವರ್ಸ್ ಅಸೋಸಿಯೇಷನ್ ವತಿಯಿಂದ ರಾಜ್ಯ ಮಟ್ಟದ 7ನೇ ಶ್ವಾನ ಪ್ರದರ್ಶನ ಹಾಗೂ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು.
ದಾವಣಗೆರೆ ನಗರದ ಹೈಸ್ಕೂಲ್ ಮೈದಾನದಲ್ಲಿ ಆಯೋಜಿಸಲಾಗಿದ್ದ ಶ್ವಾನ ಪ್ರದರ್ಶನದಲ್ಲಿ ಸ್ವದೇಶಿ, ವಿದೇಶಿ ಶ್ವಾನಗಳನ್ನು ಸ್ಪರ್ಧೆಗೆ ಪಾಲಕರು ಕರೆ ತಂದಿದ್ದು ಶ್ವಾನ ಪ್ರಿಯರಿಗೆ ಆಕರ್ಷಣೆಯ ಕೇಂದ್ರವಾಗಿತ್ತು.
ಶಾಮಿಯಾನದ ನೆರಳಿನ ಆಸರೆಯಲ್ಲಿ ಶ್ವಾನಗಳು ತಮ್ಮಭಿನ್ನಾಣದ ನಡಿಗೆಯಿಂದ ಜನರನ್ನ ಆಕರ್ಷಿಸಿದವು. ಈ ಡಾಗ್ ಶೋ ಅಲ್ಲಿ ಬೆಂಗಳೂರು, ಮೈಸೂರು, ಬಾಗಲಕೋಟೆ, ದಾವಣಗೆರೆ ಸೇರಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಒಟ್ಟು 180ಕ್ಕೂ ಹೆಚ್ಚು ಶ್ವಾನಗಳು ಭಾಗಿಯಾಗಿದ್ದವು.
ಪ್ರಥಮ ಸ್ಥಾನ: ಮುಧೋಳ್, ಜರ್ಮನ್ ಶೆಫರ್ಡ್, ಪಪ್ಪಿ, ಲ್ಯಾಬ್ರೋಡಾರ್, ರಾಟ್ ವೀಲರ್, ಪಿಟ್ ಬುಲ್, ಗ್ರೇಟ್ ಡೆನ್ ಸೈಬೇರಿಯನ್ ಹಸ್ಕಿ, ಸಿಕ್ಸ್ ಜೂ, ಪಾಮೆರಿಯನ್, ನೆಲ್ಜಿಯನ್, ಪಗ್, ಟಾಯ್ ಸೇರಿದಂತೆ ಮತ್ತಿತರ ಎಲ್ಲ ತಳಿಯ ನಾಯಿಗಳು ಉತ್ತಮ ಪ್ರದರ್ಶನ ನೀಡಿದವು.
ತಮ್ಮ ಮಾಲೀಕನ ಜೊತೆ ಸುಂದರನಡಿಗೆಯಿಂದ ಹೆಜ್ಜೆ ಹಾಕಿದ ಶ್ವಾನಗಳು ತೀರ್ಪುಗಾರರನ್ನು ಆಕರ್ಷಿಸಿದವು. ಶ್ವಾನ ಪ್ರದರ್ಶನದಲ್ಲಿ ವಿದೇಶಿ ತಳಿಯ ಜರ್ಮನ್ ಶೆಫರ್ಡ್ ಶ್ವಾನಕ್ಕೆ ಪ್ರಥಮ ಬಹುಮಾನ ನೀಡಲಾಯಿತು.
ರಾಗಿ ಮಾಲ್ಟ್ ತಿಂದು ಪ್ರಥಮ ಸ್ಥಾನ ಪಡೆದ ವಿದೇಶಿ ಶ್ವಾನ:
ಶ್ವಾನ ಪ್ರದರ್ಶನಕ್ಕೆ ಮೊದಲ ಬಾರಿಗೆ ಶ್ವಾನ ಕರೆತಂದಿದ್ದೇವೆ, ನೋಡಬೇಕು ಏನ್ ಆಗುತ್ತೆ. ಇದಕ್ಕೆ ಆಹಾರದಲ್ಲಿ ಬೆಳಗ್ಗೆ ರಾಗಿ ಮಾಲ್ಟ್, ರಾತ್ರಿ 200 ಗ್ರಾಂ ಚಿಕನ್ ಕೊಡ್ತೇವೆ, ಚೆನ್ನಾಗಿ ಸಾಕುತ್ತಿದ್ದೇವೆ ಎಂದು ನಾಯಿ ಮಾಲೀಕ ಅಕ್ಷಯ್ ತಿಳಿಸಿದರು.
ಬಹುಮಾನ ದಕ್ಕಿಸಿಕೊಂಡ ಶ್ವಾನಗಳಿವು : ವಯಸ್ಕ ಪಪ್ಪಿ,ಭಾರತೀಯಉತ್ತಮ ತಳಿ ವಿಭಾಗದ ಶ್ವಾನ ಪ್ರದರ್ಶನ ನಡೆಯಿತು.ವಯಸ್ಕ ವಿಭಾಗದ ಸ್ಪರ್ಧೆಯಲ್ಲಿ ರಾಣೇಬೆನ್ನೂರಿನ ವಿನೀತ್ ಅವರ ಜರ್ಮನ್ ಶೆಫರ್ಡ್ ತಳಿಯ ನಾಯಿ ಪ್ರಥಮ ಸ್ಥಾನ (25 ಸಾವಿರ) ಬಹುಮಾನ, ಚಿತ್ರದುರ್ಗದ ಸುಬ್ರಹ್ಮಣ್ಯ ಅವರ ಡಾಬರ್ ಮನ್ ನಾಯಿ ದ್ವಿತೀಯ (15 ಸಾವಿರ) ಬಹುಮಾನ, ಮುಧೋಳದ ವಿಜಯಕುಮಾರ್ ಅವರ ಬೀಗಲ್ ತಳಿಯ ನಾಯಿ ತೃತೀಯ (10 ಸಾವಿರ) ಬಹುಮಾನ ದಕ್ಕಿಸಿಕೊಂಡಿವೆ.
ನಾಯಿ ಮಾಲೀಕ ರಾಮಪ್ಪ ಮಾತನಾಡಿ, ಮುಧೋಳ್ನಿಂದಆಗಮಿಸಿದ್ದೇವೆ ಇದು ಮುಧೋಳ್‌ತಳಿ. ಇದರ ಮೆಂಟೆನೆನ್ಸ್ ಜಿರೋ, ಯಾರು ಬೇಕಾದರೂ ಸಾಕಬಹುದು. ರೈತರು ತಮ್ಮ ತೋಟಕ್ಕೆ, ಕುರಿಗಳಿಗಾಗಿ ಸಾಕಬಹುದು. ನೀವು ಯಾವ ಆಹಾರ ಕೊಟ್ಟರೂ ಅದನ್ನ ಸೇವಿಸುತ್ತೆ. ಮಳೆ, ಚಳಿಗೂ ಹೊಂದಾಣಿಕೆ ಆಗುತ್ತೆ ಎಂದು ತಿಳಿಸಿದರು.