ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಎಐಸಿಸಿ ನಾಯಕ ರಾಹುಲ್ ಗಾಂಧಿ ಮತ್ತು ತಂಡ “ಸಿದ್ಧ”ಪಡಿಸಿರುವ ಜಾತಿ ಗಣತಿ ಸಮೀಕ್ಷೆಯ ಮಾದರಿಗಳು ಹಾಗೂ ಪ್ರಶ್ನೆಗಳು ಸರಿ ಇಲ್ಲ, this is Too much, Useless ಎಂದು ಸರಿಯಾದ ಮಾಹಿತಿಗಳನ್ನು ನೀಡದೆ ತಿರಸ್ಕರಿಸಿದ ಡಿಸಿಎಂ ಡಿ.ಕೆ ಶಿವಕುಮಾರ್ ಎಂದು ಜೆಡಿಎಸ್ ತಿಳಿಸಿದೆ.
ಸಮೀಕ್ಷೆಗೆ ಸಿದ್ದಪಡಿಸಿರುವ ಪ್ರಶ್ನಾವಳಿಗಳು ಯಾವುವು ? ಯಾವ ಪ್ರಶ್ನೆಗಳನ್ನು ಕೇಳಲಾಗುತ್ತಿದೆ ಎಂಬುದು ಸ್ವತಃ ಡಿಸಿಎಂಗೇ ಗೊತ್ತಿಲ್ಲ!! ಗಣತಿದಾರರು ಕೇಳುವ ಪ್ರಶ್ನೆಗಳಿಂದ ಡಿಸಿಎಂ ಅವರಿಗೆ ಇರಿಸು ಮುರಿಸು ಆಗಿದೆ. ಇನ್ನೂ ಜನಸಾಮಾನ್ಯರ ಪಾಡೇನು?ಎಂದು ಜೆಡಿಎಸ್ ತೀಕ್ಷ್ಣವಾಗಿ ಪ್ರಶ್ನಿಸಿದೆ.
ಉದ್ದುದ್ದ, ಅಸಂಬದ್ದ, ಅನಗತ್ಯ ಪ್ರಶ್ನೆಗಳಿಗೆ ಉತ್ತರಿಸುವ ತಾಳ್ಮೆ ಹಾಗೂ ಸಮಯ ನಗರ ಪ್ರದೇಶಗಳ ಮಂದಿಗೆ ಇರುತ್ತದೆಯೇ?
ಕೇಂದ್ರ ಸರ್ಕಾರ ಮುಂದಿನ ವರ್ಷ ಜನಗಣತಿ, ಜಾತಿಗಣತಿ ಮಾಡುವುದಾಗಿ ಪ್ರಕಟಿಸಿದ್ದರೂ ಹಠಕ್ಕೆ ಬಿದ್ದು ಸಿದ್ದರಾಮಯ್ಯ ಸರ್ಕಾರ ರಾಜ್ಯದಲ್ಲಿ ಸಮೀಕ್ಷೆಯನ್ನು ತರಾತುರಿಯಲ್ಲಿ ಮಾಡುತ್ತಿರುವ ಹಿಂದಿನ ಒಳಸಂಚು ಏನು ? ಇದರಿಂದ ಯಾರಿಗೆ ಲಾಭ? ಎಂದು ಜೆಡಿಎಸ್ ಪ್ರಶ್ನಿಸಿದೆ.

