ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಹುಲ್ ಗಾಂಧಿ ಅವರ ಪ್ರಕಾರ ಕಾಂಗ್ರೆಸ್ ಪಕ್ಷದಲ್ಲಿ 3 ರೀತಿಯ ಕುದುರೆಗಳಿವೆ! ಎಂದು ಬಿಜೆಪಿ ತಿಳಿಸಿದೆ.
1.) ರೇಸ್ ಕುದುರೆಗಳು (ಸಕ್ರಿಯ ಕುದುರೆಗಳು), 2.) ಬಾರಾತ್ ನ ಕುದುರೆಗಳು (ನಿವೃತ್ತಿ ಅಂಚಿನಲ್ಲಿರುವ ಬಳಲಿದ ಕುದುರೆಗಳು), 3.) ಲಂಗ್ಡ ಕುದುರೆಗಳು (ಕೈಲಾಗದ ಕುದುರೆಗಳು) ಎಂದು ರಾಹುಲ್ ಪಟ್ಟಿ ಮಾಡಿದ್ದಾರೆಂದು ಬಿಜೆಪಿ ಟೀಕಿಸಿದೆ.
ಕಾಕತಾಳೀಯವೋ ಏನೋ ಕರ್ನಾಟಕ ಕಾಂಗ್ರೆಸ್ ಪಕ್ಷದಲ್ಲೂ ಮೂರು ಬಣಗಳಿವೆ. ಆದರೆ ಯಾವ ಬಣದ ಕುದುರೆ ಯಾವ ಗುಂಪಿಗೆ ಸೇರುತ್ತದೆ ಎನ್ನುವ ಊಹೆ ನಿಮಗೆ ಬಿಟ್ಟಿದ್ದು! ಎಂದು ಬಿಜೆಪಿ ವ್ಯಂಗ್ಯವಾಡಿದೆ.