ಬಿಹಾರ ಫಲಿತಾಂಶದ ನಂತರ ಡಮ್ಮಿಯಾದ ರಾಹುಲ್ ಗಾಂಧಿ

News Desk

ಚಂದ್ರವಳ್ಳಿ ನ್ಯೂಸ್, ಚಾಮರಾಜನಗರ:
ಬಿಹಾರ ಚುನಾವಣೆ ಸೋತ ಮೇಲೆ ರಾಹುಲ್​ ಗಾಂಧಿ ವೀಕ್​ ಆಗಿದ್ದು ಸಿದ್ದರಾಮಯ್ಯ ಒಬ್ಬರೇ ಇಲ್ಲಿ ಪವರ್​. ಹಾಗಾಗಿ, ಇಷ್ಟು ದಿನ ರಾಹುಲ್​ ಹೇಳಿದಂಗೆ ಸಿದ್ದರಾಮಯ್ಯ ಕೇಳುತ್ತಿದ್ದರು. ಇನ್ಮುಂದೆ ಸಿದ್ದರಾಮಯ್ಯ ಹೇಳಿದಂಗೆ ರಾಹುಲ್ ಗಾಂಧಿ ಕೇಳಬೇಕು ಎಂದು ವಿಪಕ್ಷ ನಾಯಕ ಆರ್.ಅಶೋಕ್​​ ವ್ಯಂಗ್ಯವಾಡಿದರು.

 

- Advertisement - 

ಚಾಮರಾಜನಗರದಲ್ಲಿ ಬಿಜೆಪಿ ವತಿಯಿಂದ ಆಯೋಜಿಸಿದ್ದ ಬಿರ್ಸಾ ಮುಂಡಾ ಜಯಂತಿಯಲ್ಲಿ ಅಶೋಕ್ ಭಾಗವಹಿಸಿ ಮಾತನಾಡಿದರು.

ವರನಟ ಡಾ.ರಾಜ್​ ಕುಮಾರ್​ ರಂಗಮಂದಿರದ ಸಮೀಪದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅಶೋಕ್, ಡಿಕೆಶಿ ಸಿಎಂ ಆಗುವುದಿಲ್ಲವೇ ಎಂಬ ಪ್ರಶ್ನೆಗೆ, ಇದನ್ನು ನೀವು ಡಿಕೆಶಿ ಅವರಲ್ಲೇ ಕೇಳಬೇಕು. ಯಾಕೆಂದರೆ ಅವರು ಎಲ್ಲ ದೇವರನ್ನು ನೋಡಿ ಬಿಟ್ಟಿದ್ದಾರೆ. ಈಶ್ವರ, ವೆಂಕಟೇಶ್ವರ, ನಾರಾಯಣನನ್ನು ನೋಡಿದ್ದಾರೆ. ಬ್ರಹ್ಮನನ್ನು ಬಿಟ್ಟು ಬಿಟ್ಟಿದ್ದಾರೆ. ಡಿಕೆ ಶಿವಕುಮಾರ್ ಪಾಲಿಗೆ ಬಿಹಾರ ಚುನಾವಣೆ ಬ್ರಹ್ಮ ಇದ್ದಂಗೆ. ಬ್ರಹ್ಮ ಹಣೆಬರಹದ ವರ ಕೊಡಲಿಲ್ಲ. ಅದಕ್ಕೆ ಈಗ ಸಿದ್ದರಾಮಯ್ಯ ಆಟ ಶುರು ಮಾಡಿದ್ದಾರೆ ಎಂದು ಅಶೋಕ್ ಲೇವಡಿ ಮಾಡಿದರು.
ಎಲ್ಲಿಗೂ ಹೋಗದೇ ಇರುವ ಸಿಎಂ ದೆಹಲಿಯಲ್ಲೇ ಠಿಕಾಣಿ ಹೂಡುತ್ತಿದ್ದಾರೆ. ಈ ಮೂಲಕ ಕೇಂದ್ರದ ಕಾಂಗ್ರೆಸ್​ಗಿಂತ ನಾನೇ ಪವರ್‌ಫುಲ್ ಅಂತ ತೋರಿಸುತ್ತಿದ್ದಾರೆ. ಹೀಗಾಗಿ ನವೆಂಬರ್-ಡಿಸೆಂಬರ್​ನಲ್ಲಿ ಈ ಕಾಂತ್ರಿಗಳೆಲ್ಲ ಗೊತ್ತಾಗಲಿದೆ. ಬದಲಾವಣೆಗಳು ಎಲ್ಲವೂ ನೋಡೋಣ

- Advertisement - 

. ಡಿ.ಕೆ.ಶಿವಕುಮಾರ್​ ಅಂತೂ ಬಿಡಲ್ಲ. ಅವನೂ ಹಠವಾದಿ. ಸಿದ್ದರಾಮಯ್ಯನೂ ಲೂಟಿ ಹೊಡೀಬೇಕು, ಡಿ.ಕೆ.ನೂ ಲೂಟಿ ಹೊಡೀಬೇಕು. ಒಟ್ಟಿನಲ್ಲಿ ಸರ್ಕಾರ ಸತ್ತು ಹೋಗಿದೆ. ಬಿಜೆಪಿ, ಜೆಡಿಎಸ್​​ ಯಾವುದೇ ಚುನಾವಣೆ ಬಂದರೂ ರೆಡಿ. ಡೈರೆಕ್ಟ್​ ಚುನಾವಣೆ ಮಾಡುತ್ತೇವೆ. ಜನರ ಬಹುಮತ ಗಳಿಸಿ ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್​ನ ಆಡಳಿತ ಬರಲಿದೆ ಎಂದು ಅಶೋಕ್ ಭವಿಷ್ಯ ನುಡಿದರು.

ರಾಹುಲ್ ಪಾರ್ಟ್ ಟೈಂ ರಾಜಕಾರಣಿ:
ರಾಹುಲ್ ಗಾಂಧಿ ಓರ್ವ ಪಾರ್ಟ್ ಟೈಂ ರಾಜಕಾರಣಿ. ಚುನಾವಣೆ ವೇಳೆ
, ಚುನಾವಣೆಯ ನಂತರ ವಿದೇಶಕ್ಕೆ ಹೋಗುತ್ತಾರೆ. ಬರೀ ದೇಶ, ವಿದೇಶ ಸುತ್ತುವುದೇ ಇವರ ಕೆಲಸ. ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ ಮಾತ್ರ ಇವಿಎಂ ಸರಿಯಾಗಿರುತ್ತದೆ. ಬಿಜೆಪಿ ಅಥವಾ ಬೇರೆ ಪಕ್ಷಗಳು ಗೆದ್ದರೆ ಮೋಸ ಆಗಿರುತ್ತದೆ ಎಂದು ಅಶೋಕ್​ ಟಾಂಗ್ ಕೊಟ್ಟರು.
ರಾಹುಲ್ ಮತ್ತು ಇತರೆ ಕಾಂಗ್ರೆಸ್ ನಾಯಕರ ಮತಚೋರಿ ಎಂಬ ಸುಳ್ಳಿನ ಕಂತೆಯನ್ನು ದೇಶದ ಜನ ಒಪ್ಪಿಲ್ಲ. ಗಾಂಧಿ ಕುಟುಂಬದ ಆಟ ಯಾವುದೇ ಕಾರಣಕ್ಕೂ ನಡೆಯುವುದಿಲ್ಲ. ಬಿಹಾರ ಚುನಾವಣಾ ಫಲಿತಾಂಶ ಬಂದ ಮೇಲೆ ರಾಹುಲ್ ಗಾಂಧಿ ಡಮ್ಮಿ ಆಗಿದ್ದಾರೆ ಎಂದು ಅಶೋಕ್ ಟೀಕಾಪ್ರಹಾರ ಮಾಡಿದ್ದಾರೆ.

ರಾಜ್ಯದಲ್ಲಿ ಏನಿದ್ದರೂ ಸಿಎಂ ಸಿದ್ದರಾಮಯ್ಯರದ್ದೇ ಪ್ರಾಬಲ್ಯ. ಡಿ.ಕೆ.ಶಿವಕುಮಾರ್ ಅಸ್ತ್ರ ಬಿಹಾರ ಚುನಾವಣೆಯಲ್ಲಿ ವರ್ಕೌಟ್ ಆಗಲಿಲ್ಲ ಎಂದು ವ್ಯಂಗ್ಯವಾಡಿದರು.

ಬಿಜೆಪಿ ಮುಖಂಡರಾದ ಬಂಗಾರು ಹನುಮಂತು, ಸಿ‌.ಎಸ್.ನಿರಂಜನಕುಮಾರ್, ರಾಮಚಂದ್ರು ಇದ್ದರು.

 

Share This Article
error: Content is protected !!
";