ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಚುನಾವಣಾ ಆಯೋಗದ ಮಾಹಿತಿ ಪ್ರಕಾರ 2019ರಲ್ಲಿ ನಡೆದ ವಿಧಾನಸಭಾ ಚುನಾವಣೆಯ ಹೊತ್ತಿಗೆ ಮಹಾರಾಷ್ಟ್ರದ ಮತದಾರರ ಸಂಖ್ಯೆ 8.98 ಕೋಟಿ. ಐದು ವರ್ಷಗಳಲ್ಲಿ ಅಂದರೆ, 2024ರ ಲೋಕಸಭಾ ಚುನಾವಣೆಯ ಹೊತ್ತಿಗೆ ಈ ಸಂಖ್ಯೆ 9.29 ಕೋಟಿಗೆ ಏರಿಕೆಯಾಗಿತ್ತು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಿಳಿಸಿದರು.
ಆದರೆ, ಐದು ತಿಂಗಳ ಬಳಿಕ 2024ರ ನವೆಂಬರ್‌ನಲ್ಲಿ ವಿಧಾನಸಭಾ ಚುನಾವಣೆ ನಡೆಯುವ ಹೊತ್ತಿಗೆ ಮತದಾರರ ಸಂಖ್ಯೆ 9.70 ಕೋಟಿಗೆ ಜಿಗಿದಿತ್ತು. ಐದು ವರ್ಷಗಳಲ್ಲಿ ಮತದಾರರ ಸಂಖ್ಯೆಯಲ್ಲಿ ಆಗಿರುವ ಏರಿಕೆ 31 ಲಕ್ಷ ಮಾತ್ರ. ಆದರೆ, ಕೇವಲ ಐದೇ ತಿಂಗಳಲ್ಲಿ 41 ಲಕ್ಷ ಮತದಾರರು ಸೇರ್ಪಡೆಯಾಗಿದ್ದಾರೆ.
ಇದು ನಂಬಲು ಅಸಾಧ್ಯವಾದ ಜಿಗಿತ. ಏಕೆಂದರೆ, ಸರ್ಕಾರದ ಅಂದಾಜು ಪ್ರಕಾರವೇ ಮಹಾರಾಷ್ಟ್ರದಲ್ಲಿರುವ ವಯಸ್ಕರ ಸಂಖ್ಯೆ 9.54 ಕೋಟಿ. ಆದರೆ, ಒಟ್ಟು ಮತದಾರರ ಸಂಖ್ಯೆ 9.70 ಕೋಟಿ! ಎಂದು ರಾಹುಲ್ ಆರೋಪಿಸಿದ್ದಾರೆ.