ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಇಲ್ಲಿನ ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಸ್ವದೇಶಿ ಮೇಳದ ಪ್ರಯುಕ್ತ ನಡೆದ ಪುರುಷರ ಕಬ್ಬಡ್ಡಿ ಪಂದ್ಯಾವಳಿಯಲ್ಲಿ ವೆಂಕಟೇಶ್ವರ ಪ್ರಥಮ ದರ್ಜೆ ಕಾಲೇಜಿನ ತಂಡ ಪ್ರಥಮ ಸ್ಥಾನವನ್ನು ಪಡೆದುಕೊಂಡಿತು.
ಚಿತ್ರದುರ್ಗದ ರಾಯಬಾರಿ ತಂಡ ದ್ವಿತೀಯ ಸ್ಥಾನ ಪಡೆದುಕೊಂಡರೆ ನಾಯಕನಹಟ್ಟಿ ತೃತೀಯ ಸ್ಥಾನ, ನಾಲ್ಕನೆ ಸ್ಥಾನವನ್ನು ಬೊಮ್ಮೆನಹಳ್ಳಿ ಗಿಟ್ಟಿಸಿಕೊಂಡಿತು.
ರಾಯಬಾರಿಯ ರಂಗ ಉತ್ತಮ ದಾಳಿಕೋರನಾಗಿ, ಉತ್ತಮ ಹಿಡಿತಗಾರನಾಗಿ ನಾಯಕನಹಟ್ಟಿ ಮರೇಶ್ ಮತ್ತು ಸರ್ವೋತ್ತಮ ಆಟಗಾರನಾಗಿ ವೆಂಕಟೇಶ್ವರ ಪ್ರಥಮ ದರ್ಜೆ ಕಾಲೇಜಿನ ಪ್ರವೀಣ್ ಹೊರಹೊಮ್ಮಿದರು.
ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಮತ್ತು ಪ್ರಾಂಶುಪಾಲರು ಹಾಗೂ ದೈಹಿಕ ಶಿಕ್ಷಣ ನಿರ್ದೇಶಕರು ಸಿಬ್ಬಂದಿ ವರ್ಗದವರು ಉತ್ತಮ ಆಟ ಪ್ರದರ್ಶಿಸಿದ ಕಬಡ್ಡಿ ಪಟುಗಳಿಗೆ ಅಭಿನಂದಿಸಿದ್ದಾರೆ.

