ಚಂದ್ರವಳ್ಳಿ ನ್ಯೂಸ್, ತುಮಕೂರು:
ತುಮಕೂರು ಲೋಕಸಭಾ ಕ್ಷೇತ್ರದ ಗುಬ್ಬಿ ತಾಲ್ಲೂಕಿನ ನಂದಿಹಳ್ಳಿ ಗೇಟ್ ಬಳಿ ಎಲ್‌ಸಿ 59 ಬದಲಿಗೆ ರಸ್ತೆ ಮೇಲ್ಸೇತುವೆ ನಿರ್ಮಾಣಕ್ಕೆ ಕೇಂದ್ರ ರೈಲ್ವೆ ಸಚಿವ ವಿ.ಸೋಮಣ್ಣ ಶಂಕುಸ್ಥಾಪನೆ ನೆರವೇರಿಸಿದರು.
ತುಮಕೂರು ಲೋಕಸಭಾ ಕ್ಷೇತ್ರದ ಗುಬ್ಬಿ ತಾಲ್ಲೂಕಿನ ಬೆಂಚಗೆರೆ ಗೇಟ್ ಬಳಿ ಎಲ್‌ಸಿ 56 ಬದಲಿಗೆ ರಸ್ತೆ ಮೇಲ್ಸೇತುವೆ ನಿರ್ಮಾಣಕ್ಕೂ ಇದೇ ಸಂದರ್ಭದಲ್ಲಿ ಅವರು ಶಂಕುಸ್ಥಾಪನೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಂಸದ ಜಿ.ಎಸ್.ಬಸವರಾಜ್,ರೈಲ್ವೆ ಇಲಾಖೆಯ ಡಿಆರ್ಎಮ್ ಎ.ಕೆ.ಸಿಂಗ್, ಅಸಿಸ್ಟೆಂಟ್ ಡಿಆರ್ಎಮ್ ಪರೀಕ್ಷಿತ್, ರೈಲ್ವೆ ಅಧಿಕಾರಿಗಳಾದ ಪ್ರಸಾದ್, ಜಾಮ್ ಜಾಮ್, ತಹಶೀಲ್ದಾರ್ ಆರತಿ, ಗ್ರಾಮ ಪಂಚಾಯತ್ ಅಧ್ಯಕ್ಷೆ ಲತಾ ದಯಾನಂದ್, ದಿಶಾ ಸಮಿತಿ ಸದಸ್ಯರಾದ ಹುಚ್ಚಯ್ಯ, ಡಾ.ನವ್ಯ, ನಿಟ್ಟೂರು ಪ್ರಕಾಶ್, ದಿಲೀಪ್, ಬೆಟ್ಟ ಸ್ವಾಮಿ, ನಾಗರಾಜ್, ಪಂಚಾಕ್ಷರಿ, ಅಧಿಕಾರಿಗಳು, ಮಾಧ್ಯಮ ಮಿತ್ರರು, ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.