ಚಿತ್ರದುರ್ಗ ಜಿಲ್ಲೆಯಲ್ಲಿ ಬಿದ್ದ ಮಳೆ ವರದಿ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಜಿಲ್ಲೆಯಲ್ಲಿ ಸೋಮವಾರ ಸುರಿದ ಮಳೆ ವಿವರದನ್ವಯ ಸರಾಸರಿ 8.8 ಮಿ.ಮೀ ಮಳೆಯಾಗಿದೆ.
ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನಲ್ಲಿ 28.6 ಮಿ.ಮೀ, ಚಿತ್ರದುರ್ಗ ತಾಲ್ಲೂಕಿನಲ್ಲಿ 3.4 ಹಿರಿಯೂರು ತಾಲ್ಲೂಕು 0.5 ಮಿ.ಮೀ, ಹೊಳಲ್ಕೆರೆ ತಾಲ್ಲೂಕು 4.4 ಮಿ.ಮೀ, ಹೊಸದುರ್ಗ ತಾಲ್ಲೂಕಿನಲ್ಲಿ 1.6 ಮಿ.ಮೀ ಹಾಗೂ ಮೊಳಕಾಲ್ಮುರು ತಾಲ್ಲೂಕಿನಲ್ಲಿ 6.1 ಮಿ.ಮೀ ಮಳೆಯಾಗಿದೆ.

      ಹೋಬಳಿವಾರು ಮಳೆ ವಿವರ: ಚಳ್ಳಕೆರೆ  ತಾಲ್ಲೂಕಿನ ಚಳ್ಳಕೆರೆಯಲ್ಲಿ 14.1 ಮಿ.ಮೀ, ನಾಯಕನಹಟ್ಟಿ 44.8 ಮಿ.ಮೀ, ಪರಶುರಾಂಪುರ 7.5 ಮಿ.ಮೀ, ತಳಕು 50.1 ಮಿ.ಮೀ ಮಳೆಯಾಗಿದೆ.

ಚಿತ್ರದುರ್ಗ ತಾಲ್ಲೂಕಿನ ಚಿತ್ರದುರ್ಗದಲ್ಲಿ 5.5 ಮಿ.ಮೀ, ಭರಮಸಾಗರ 1.9 ಮಿ.ಮೀ, ಹಿರೇಗುಂಟನೂರು 0.1 ಮಿ.ಮೀ, ತುರುವನೂರು 3.8 ಮಿ.ಮೀ ಮಳೆಯಾಗಿದೆ.

ಹಿರಿಯೂರು ತಾಲ್ಲೂಕಿನ ಹಿರಿಯೂರು 0.1 ಮಿ.ಮೀ,  ಐಮಂಗಲ 1.2 ಮಿ.ಮೀ, ಧರ್ಮಪುರ 0.1 ಮಿ.ಮೀ, ಜವನಗೊಂಡನಹಳ್ಳಿ 0.4 ಮಿ.ಮೀ ಮಳೆಯಾಗಿದೆ.

ಹೊಳಲ್ಕೆರೆ ತಾಲ್ಲೂಕಿನ ಹೊಳಲ್ಕೆರೆಯಲ್ಲಿ 2 ಮಿ.ಮೀ, ರಾಮಗಿರಿ 4.2 ಮಿ.ಮೀ, ತಾಳ್ಯ 9.2 ಮಿ.ಮೀ ಮಳೆಯಾಗಿದೆ. ಹೊಸದುರ್ಗ ತಾಲ್ಲೂಕಿನ ಹೊಸದುರ್ಗದಲ್ಲಿ 2 ಮಿ.ಮೀ, ಮಾಡದಕೆರೆ 3.2 ಮಿ.ಮೀ, ಶ್ರೀರಾಂಪುರ 0.5 ಮಿ.ಮೀ ಮಳೆಯಾಗಿದೆ.

ಮೊಳಕಾಲ್ಮುರು ತಾಲ್ಲೂಕಿನ ಮೊಳಕಾಲ್ಮೂರಿನಲ್ಲಿ 5.5 ಮಿ.ಮೀ ಹಾಗೂ ದೇವಸಮುದ್ರದಲ್ಲಿ 6.9 ಮಿ.ಮೀ ಮಳೆಯಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

 

 

Share This Article
error: Content is protected !!
";